Friday, November 22, 2024

ಮತ್ತೆ ಮಾಸ್ಕ್ ಅಸ್ತ್ರ ಪ್ರಯೋಗಕ್ಕೆ ಮುಂದಾದ ಆರೋಗ್ಯ ಇಲಾಖೆ..!

ಬೆಂಗಳೂರು : ಕಳೆದ ಒಂದು ತಿಂಗಳಿಂದ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಏರಿಕೆ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಕೊವಿಡ್-19 ಪ್ರಕರಣಗಳಲ್ಲಿ ಕೊಂಚ ಏರಿಕೆ ಜೊತೆಗೆ ಜುಲೈ ತಿಂಗಳನಲ್ಲಿ 4ನೇ ಅಲೆ ಆತಂಕ ಇರುವುದರಿಂದ ಮತ್ತೆ ಫುಲ್ ಅಲರ್ಟ್ ಆಗಿದೆ. ಇತ್ತ ಸಾರ್ವನಿಕರಿಗೆ ಎಷ್ಟೇ ಮನವಿ ಮಾಡಿದ್ರು, ಕೊವಿಡ್ ನಿಯಮ ಪಾಲನೆ ಮಾಡ್ತಿಲ್ಲ. ಹೀಗಾಗಿ ಮತ್ತೆ ಆರೋಗ್ಯ ಇಲಾಖೆ ದಂಡ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ.

ಕಳೆದ ತಿಂಗಳು ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್​ ಕಡ್ಡಾಯ ಎಂದು ಆದೇಶ ಮಾಡಿತ್ತು. ಆದ್ರೆ ಸರ್ಕಾರ ಆದೇಶಕ್ಕೆ ಸಾರ್ವಜನಿಕರು ಕ್ಯಾರೆ ಅನ್ನುತ್ತಿಲ್ಲ. ಹೀಗಾಗಿ ತಾಂತ್ರಿಕ ಸಲಹಾ ಸಮಿತಿ ಮಾಸ್ಕ್ ಹಾಕದಿದ್ದರೆ ದಂಡ ಪ್ರಯೋಗಿಸಿ ಎಂದು ಸಲಹೆ ನೀಡಿದೆ. ನಾಳೆ ವೇಳೆಗೆ ಸರ್ಕಾರಕ್ಕೆ ದಂಡ ಪ್ರಸ್ತಾವನೆ ವರದಿಯನ್ನ ಆರೋಗ್ಯ ಇಲಾಖೆ ಸಲ್ಲಿಸಲು ಮುಂದಾಗಿದೆ. ಇನ್ನೂ ಈ ಬಗ್ಗೆ ಮಾತನಾಡಿದ ಆರೋಗ್ಯ ಇಲಾಖೆ ಕಮಿಷನರ್ ರಂದೀಪ್, ನಾವು ಸರ್ಕಾರಕ್ಕೆ ನಾಳೆ ವರದಿ ಕೊಡಲಿದ್ದೇವೆ. ದಂಡದ ಪ್ರಸ್ತಾವನೆ ಕುರಿತು ಸರ್ಕಾರದ ಮಟ್ಟದಲ್ಲಿ ಸಭೆ ನಡೆಯುತ್ತೆ. ಈ ವಾರದಲ್ಲಿಯೇ ಸರ್ಕಾರದಿಂದ ಮಾಸ್ಕ್ ದಂಡದ ಬಗ್ಗೆ ನಿರ್ಧಾರ ಸಾಧ್ಯತೆ ಎಂದು ಹೇಳಿದ್ರು.

ಒಟ್ನಲ್ಲಿ ಮತ್ತೆ ಕೊರೋನಾ ಕೇಸ್​ಗಳ‌ ಸಂಖ್ಯೆ ಜಾಸ್ತಿ ಆಗ್ತಿದೆ. ನಾಲ್ಕನೇ ಅಲೆಯ ಮುನ್ಸೂಚನೆ ನೀಡಿದೆ‌‌. ಮುಂದಿನ ವಾರ ಮತ್ತೆ ಮಾರ್ಷಲ್​ಗಳು ರೋಡ್​ಗೆ ಇಳಿಯಲಿದ್ದಾರೆ, ಹೀಗಾಗಿ ಸಿಟಿಯ ಜನರೇ ಮಾಸ್ಕ್​ ಧರಿಸಿ, ಎಚ್ಚರವಹಿಸಿ.

ಸ್ವಾತಿ ಪುಲಗಂಟಿ ಮೆಟ್ರೋ ಬ್ಯುರೋ ಬೆಂಗಳೂರು

RELATED ARTICLES

Related Articles

TRENDING ARTICLES