Monday, December 23, 2024

ಗೋಲ್ಡನ್​ ಗಣಿ ಬರ್ತ್​ ಡೇ ; ಅಭಿಮಾನಿಗಳಿಗೆ ಅಡ್ವಾನ್ಸ್​ ಗಿಫ್ಟ್​

ಮುಂಗಾರುಮಳೆ, ಗಾಳಿಪಟದಂತಹ ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿದ ವಿಕಟ ಕವಿ, ಜನಪ್ರಿಯ ನಿರ್ದೇಶಕ ಯೋಗರಾಜ್​​ ಭಟ್​ ಮತ್ತೆ ಗಾಳಿಪಟ ಹಾರಿಸೋಕೆ ಸಜ್ಜಾಗಿದ್ದಾರೆ. ಈ ಬಾರಿ ಮುಗಿಲೆತ್ತರ ದಾಟಿ ಹಾರಾಡಲಿದೆ ಗಾಳಿಪಟ 2 ಸಿನಿಮಾ. ಸದ್ಯ ಈ ಸಿನಿಮಾದ ಸಾಂಗ್​​​ ಟೀಸರ್​ ರಿಲೀಸ್​ ಆಗಿದ್ದು, ಗೋಲ್ಡನ್​ ಗಣಿ ಬರ್ತ್​ ಡೇ ಅಡ್ವಾನ್ಸ್​ ಗಿಫ್ಟ್​ ಕೊಟ್ಟಿದೆ ಗಾಳಿಪಟ 2 ಚಿತ್ರತಂಡ.

ಗಗನ ಗಾಳಿಯಲಿ ಗೋಲ್ಡನ್​ ಗಣಿಯ ಬಣ್ಣದ ಗಾಳಿಪಟ

ನಾನಾಡದ ಮಾತೆಲ್ಲ ಕದ್ದಾಲಿಸಿ.. ಪ್ರೇಕ್ಷಕರಿಗೆ ಭಟ್ರ ಮನವಿ

ನದಿ ಮಧ್ಯೆ ಐರನ್​​ ಬಾಕ್ಸ್​ ಯಾಕೆ..? ಗಣಿ ಮಸ್ತ್​​ ಕಾಮಿಡಿ

ಕುದುರೆಮುಖ ಹಸಿರ ಹಾಸಿಗೆಯ ಮೇಲೆ ಪ್ರೇಮಕಾವ್ಯ..!

ಗಣೇಶ್​​​​ ಹಾಗೂ ಭಟ್ರ ಕಾಂಬಿನೇಷನ್​ ಸಿನಿಮಾಗಳಂದ್ರೆ ಪ್ರೇಕ್ಷಕರಿಗೆ ಸಾವಿರ ಸಾವಿರ ನಿರೀಕ್ಷೆಗಳು ಮೊಳಕೆಯೊಡುತ್ತವೆ. ಗಾಳಿಪಟ ಸಿನಿಮಾ ಕೂಡ ಕನ್ನಡ ಸಿನಿಕರಿಯರ್​ನಲ್ಲೇ ಹೊಸ ದಾಖಲೆ ಬರೆದಿತ್ತು. ಕನ್ನಡದ ಸಿನಿದುನಿಯಾದಲ್ಲಿ ಗಾಳಿಪಟ ಗಗನ ಬಿಟ್ಟು ಇಳಿಯಲೇ ಇಲ್ಲ. ಇದೀಗ ಈ ಹಿಟ್​ ಸಿನಿಮಾದ ಚಾಪ್ಟರ್​ 2 ಸಿನಿಮಾ ತೆರೆಗೆ ಬರೋಕೆ ಸಜ್ಜಾಗಿದೆ. ಗಾಳಿಪಟ 2 ಚಿತ್ರದ ಮೂಲಕ ಮತ್ತೊಮ್ಮೆ ಚಿತ್ರರಸಿಕರಿಗೆ ಹೊಸ ಪುಳಕದ ಅನುಭವ ಉಣಬಡಿಸೋಕೆ ಭಟ್ರು ಸಜ್ಜಾಗಿದ್ದಾರೆ.

ಜುಲೈ 02ಕ್ಕೆ ಗೋಲ್ಡನ್​ ಸ್ಟಾರ್​ ಗಣೇಶ್​​ ತಮ್ಮ ಹುಟ್ಟುಹಬ್ಬದ ನಿರೀಕ್ಷೆಯಲ್ಲಿದ್ದಾರೆ. ಅಭಿಮಾನಿಗಳಿಗೆ ಹುಟ್ಟು ಹಬ್ಬದ ದಿನ ಮನೇಲಿ ಇರೋದಿಲ್ಲ. ಸಿಂಪಲ್​ ಆಗಿ ಆಚರಿಸೋಣ ಎಂದು ಭಾವನಾತ್ಮಕ ಪತ್ರ ಕೂಡ ಬರೆದುಕೊಂಡಿದ್ದಾರೆ. ಅಗತ್ಯವಿರುವ ಕಡೆ ನಿಮ್ಮ ಕೈಲಾದಷ್ಟು ನೆರವು ನೀಡುವ ಮೂಲಕ ಆಚರಿಸಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಅದ್ರೆ, ಗಾಳಿಪಟ2 ಚಿತ್ರತಂಡ ಮಾತ್ರ ಬರ್ತ್​​​ ಡೇ ಮುನ್ನವೇ ಅಡ್ವಾನ್ಸ್​ ಆಗಿ ನಾನಾಡದ ಮಾತೆಲ್ಲವ ಸಾಂಗ್​ ಟೀಸರ್​ ರಿಲೀಸ್​ ಮಾಡಿ ಅಡ್ವಾನ್ಸ್​ ಗಿಫ್ಟ್​ ಕೊಟ್ಟಿದೆ.

ಗಣಿ ಸಿನಿಮಾದ ಹಾಡುಗಳಲ್ಲಿ ಪ್ರೀತಿ, ಪ್ರೇಮ ,ಶೃಂಗಾರ, ಹಸಿರಿನ ಲೊಕೇಷನ್​ಗಳ ನಡುವೆ ಪ್ರೇಮ ನಿವೇದನೆಯ ತುಂತುರು ಮಳೆ ಸಹಜವಾಗಿ ಇರುತ್ತೆ. ಈ ಹಾಡು ಕೂಡ ಪ್ರೇಕ್ಷರಿಗೆ ಸಕತ್​ ಇಷ್ಟವಾಗಲಿದೆ. ಈ ಹಾಡಿನ ಶೂಟಿಂಗ್​ ಸಂದರ್ಭದಲ್ಲಿನ ಕೆಲವು ಫನ್ನಿ ಸಂಭಾಷಣೆಯನ್ನು ಗಣಿ ಹಂಚಿಕೊಂಡಿದ್ದಾರೆ. ಇಷ್ಟು ದೊಡ್ಡ ಐರನ್​ ಬಾಕ್ಸ್​ ಯಾಕೆ ಅಂತಾ ಗಣಿ ಭಟ್ರನ್ನ ಕೇಳಿದಾಗ, ಭಟ್ರು ಕೊಟ್ಟ ಉತ್ತರ ಕೇಳಿ ಎಲ್ಲರೂ ಬಿದ್ದು ಬಿದ್ದು ನಕ್ಕಿದ್ದಾರೆ.

‘ನಾನಾಡದ ಮಾತೆಲ್ಲವ’ ಸಾಂಗ್​ ಟೀಸರ್​ ರಿಲೀಸ್​​ ಮಾಡಿದ್ದು ಪ್ರೇಮಿಗಳ ಮನಸ್ಸಿಗೆ ತಂಪೆರೆಯೋಕೆ ತುದಿಗಾಲಲ್ಲಿ ನಿಂತಿದೆ ಚಿತ್ರತಂಡ. ಈ ಹಾಡಿನ ಸಾಹಿತ್ಯವನ್ನು ಜಯಂತ್‌ ಕಾಯ್ಕಿಣಿ ಬರೆದಿದ್ದಾರೆ. ಈ ಹಾಡಿಗೆ ಸೋನು ನಿಗಮ್‌ ದನಿ ನೀಡಿದ್ದಾರೆ. ಅರ್ಜುನ್‌ ಜನ್ಯಾ ಮ್ಯುಸಿಕ್​​, ಸಂತೋಷ್‌ ರೈ ಪತಾಜೆ ಕ್ಯಾಮೆರಾ ಕಣ್ಣು ಹಾಡಿನ ಅನಂದವನ್ನು ಹೆಚ್ಚಿಸಿದರೆ, ಪಂಡಿತ್‌ ಅವರ ಕಲಾ ನಿರ್ದೇಶನ ಹಾಡಿಗೆ ಅಚ್ಚುಕಟ್ಟಾದ ಕಲರ್​ ಕೊಟ್ಟಿದೆ.

ಕುದುರೆಮುಖದ ಹಸಿರು, ನೀರು, ಕಾಡಿನ ಮಧ್ಯೆ ಚಿತ್ರೀಕರಣ ಆಗಿರುವ ಈ ಹಾಡು  ಎಲ್ಲರಿಗೂ ಹತ್ತಿರವಾಗಲಿದೆ. ಜು.2ರಂದು ಗಣೇಶ್‌ ಹುಟ್ಟು ಹಬ್ಬ. ಈ ಹಿನ್ನೆಲೆಯಲ್ಲಿ ಹಾಡನ್ನು ಅಂದೇ ಎಲ್ಲರೂ ಯ್ಯೂಟ್ಯೂಬ್​​ನಲ್ಲಿ ವೀಕ್ಷಣೆ ಮಾಡಬಹುದು. ಈಗಾಗ್ಲೇ ಪರೀಕ್ಷೆನಾ ಬಡಿಯಾ ಸಾಂಗ್​ ಹಿಟ್ಸ್​ ದಾಖಲಿಸಿದ್ದು, ಈ ಹಾಡು ಕೂಡ ಆ ದಾಖಲೆಯನ್ನು ಸರಿಗಟ್ಟೋಕೆ ರೆಡಿಯಾಗಿದೆ.

ಗಾಳಿಪಟ ಚಿತ್ರದಲ್ಲಿ ಗಣಿ ಜೊತೆಗೆ ದಿಗಂತ್​​​, ನಿರ್ದೇಶಕ ಪವನ್​ ಕೂಡ ಲೀಡ್​ ರೋಲ್​​ನಲ್ಲಿ ಆ್ಯಕ್ಟ್​ ಮಾಡ್ತಿದ್ದಾರೆ. ವೈಭವಿ ಸಿನಿಮಾದ ನಾಯಕಿಯಾಗಿ ಮಿಂಚಿದ್ದಾರೆ.  ಉಮಾ ಎಮ್​ ರಮೇಶ್​ ರೆಡ್ಡಿ ನಿರ್ಮಾಣದಲ್ಲಿ ಮೂಡಿ ಬರ್ತಿರೋ ಸಿನಿಮಾ ಆಗಸ್ಟ್​ 12ಕ್ಕೆ ತೆರೆಗೆ ಬರಲಿದೆ. ಸದ್ಯ ನಾನಾಡದ ಮಾತೆಲ್ಲವ ಕದ್ದಾಲಿಸೋಕೆ ಪ್ರೇಕ್ಷಕರು ವೇಯ್ಟ್​​ ಮಾಡ್ತಿದ್ದಾರೆ.

ರಾಕೇಶ್​​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES