Monday, December 23, 2024

ಐದು ಭಾಷೆಗಳಲ್ಲಿ ‘ಮಾರ್ಟಿನ್’​​ ಡಬ್ಬಿಂಗ್​ : ರಿಲೀಸ್ ಡೇಟ್​ ಯಾವಾಗ?

ತೆರೆ ಮೇಲೆ ಮಾರ್ಟಿನ್​​ ಖದರ್​​ ನೋಡೋಕೆ ಕ್ಷಣಗಣನೆ ಶುರುವಾಗಿದೆ​​. ಪೊಗರಿನ ಟಗರು ನಮ್​ ಆ್ಯಕ್ಷನ್​​ ಫ್ರಿನ್ಸ್​​ ಧ್ರುವ ಸರ್ಜಾ ನ್ಯಾಷನಲ್​​ ಬಾಡಿ ಬಿಲ್ಡರ್​​ಗಳು ಎದುರಾದ್ರೂ ಜಗ್ಗದ ಬಲಭೀಮ. ಆ ಲೆವೆಲ್​​ಗೆ ತಾಕತ್ತು ಇರೋ ಫಿಟ್​ ಅಂಡ್​ ಫೈನ್​ ನಟ . ಫ್ಯಾನ್ಸ್​ ಹೃದಯ ಗೆದ್ದಿರೋ ಮಾರ್ಟಿನ್​​ ಮಾನ್​ಸ್ಟಾರ್​​ ಆ್ಯಕ್ಷನ್​​ಗೆ ದಿನಗಣನೆ ಶುರುವಾಗಿದೆ. ಮಾರ್ಟಿನ್​ ಚಿತ್ರದ ಡಬ್ಬಿಂಗ್​ ಶುರುವಾಗಿದ್ದು ಇನ್ನೇನು ಸಿನಿಮಾ ಸದ್ಯದಲ್ಲೇ ತೆರೆಗಪ್ಪಳಿಸಲಿದೆ.

ಮಾರ್ಟಿನ್​ ಡಬ್ಬಿಂಗ್​ ಸ್ಟಾರ್ಟ್​.. ಪೊಗರಿನ ಟಗರು ಸಜ್ಜು

ಮಾರ್ಟಿನ್ ಗತ್ತು.. ರವಿವರ್ಮಾ ಗಮ್ಮತ್ತಿಗೆ ಕ್ಷಣಗಣನೆ..!

ಒಟ್ಟು ಐದು ಭಾಷೆಗಳಲ್ಲಿ ಮಾರ್ಟಿನ್​​ ಧ್ರುವ ಘರ್ಜನೆ

ಘನಘೋರ ಆ್ಯಕ್ಷನ್​​.. ಮುದ ನೀಡೋ ಲವ್​​ಸ್ಟೋರಿ

ರಣರೋಚಕ ಆ್ಯಕ್ಷನ್​​ ಸೀಕ್ವೆನ್ಸ್​​ಗಳ ಮೂಲಕ ತೆರೆಯ ಮೇಲೆ ಘರ್ಜಿಸೋಕೆ ಮಾರ್ಟಿನ್​ ಸಜ್ಜಾಗಿದ್ದಾನೆ. ಅದಕ್ಕಾಗಿ ಧ್ರುವ ಸರ್ಜಾ ಸಖತ್​ ಕಸರತ್ತು ಮಾಡಿ ಅಧ್ಬುತ ಆ್ಕಕ್ಷನ್​ ಸೀಕ್ವೆನ್ಸ್​ಗಳ ಮೂಲಕ ಚಿತ್ರರಸಿಕರಿಗೆ ಮಸ್ತ್​ ಮನರಂಜನೆ ನೀಡಲಿದ್ದಾನೆ. ಈ ಸಿನಿಮಾದ ಹೊಸ ಅಪ್ಡೇಟ್​ಗೆ ಕಾಯ್ತಿದ್ದ ಅಭಿಮಾನಿಗಳಿಗೆ ಡಬ್ಬಿಂಗ್​ ಸ್ಟಾರ್ಟ್​ ಆಗಿರೋ ಸುದ್ದಿ ಕೇಳಿ ಸ್ವಲ್ಪ ನಿರಾಳವಾಗಿದೆ.

ಪೊಗರು ಸಿನಿಮಾದಲ್ಲಿ ಧ್ರುವನ ಅಬ್ಬರ, ಆರ್ಭಟವನ್ನ ನಾವೆಲ್ಲಾ ಇಂದಿಗೂ ಮರೆಯೋಕೆ ಆಗಲ್ಲ. ಡೈಲಾಗ್ಸ್​​, ಆ್ಯಕ್ಷನ್ಸ್​​​ ಎಲ್ಲವೂ ಮೈಕೊಡವಿ ಎದ್ದು ಬರೋ ಸಿಂಹನ ಗಾಂಭೀರ್ಯದಂತೆ ಇತ್ತು. ಇದೀಗ ಅವರ ಖದರ್​​, ಗತ್ತು, ಗಮ್ಮತ್ತು ಎಲ್ಲವೂ ದುಪ್ಪಟ್ಟಾಗಿದೆ. ಎದುರಾಳಿ ವಿಲನ್​​ಗಳ ಎದೆಸೀಳೋಕೆ ಮಾರ್ಟಿನ್​​ ಕೂಡ ಬೆವರಿಳಿಸಿ ತಾಲೀಮಿನೊಂದಿಗೆ ತಯಾರಿ ನಡೆಸಿದ್ದಾರೆ. ಇನ್ನೇನಿದ್ರೂ ಸಿಲ್ವರ್​ ಸ್ಕ್ರೀನ್​ ಮೇಲೆ ಮಾರ್ಟಿನ್​ ಮ್ಯಾಜಿಕ್​ ನೋಡೋದಷ್ಟೆ ಬಾಕಿ ಇದೆ.

ಧ್ರುವ ಸರ್ಜಾ ಖಾತೆಯಲ್ಲಿ ಮೂಡಿ ಬರ್ತಿರೋ ಐದನೇ ಸಿನಿಮಾ ಮಾರ್ಟಿನ್​​. ಎಪಿ ಅರ್ಜುನ್​ ಆಕ್ಷನ್​ ಕಟ್​​ ಹೇಳ್ತಿರೋ ಭಾರತದ ಅದ್ಧೂರಿ ಸಿನಿಮಾ ಇದು. ಒಟ್ಟು ಐದು ಭಾಷೆಗಳಲ್ಲಿ ಪ್ಯಾನ್​​ ಇಂಡಿಯಾ ಲೆವೆಲ್​​ನಲ್ಲಿ ಘರ್ಜಿಸೋಕೆ ಮಾರ್ಟಿನ್​ ಬರ್ತಿದ್ದಾನೆ. ಹಾಗಂತ ಇದು ಬರೀ ಮಾಸ್​​ ಕಥೆಯಲ್ಲ. ನಿಮ್ಮ ಮನಸ್ಸಿಗೆ ಟಚ್​ ಆಗೋ ಲವ್​ಸ್ಟೋರಿಯೂ ಹೌದು. ಜೊತೆಗೆ ಬೆಚ್ಚಿ ಬೀಳಿಸೋ ರಣರೋಚಕ ಸಾಹಸ ದೃಶ್ಯಗಳ ಸಮಾಗಮ ಸಿನಿಮಾ.

ರವಿವರ್ಮಾ ಸಾಹಸ ನಿರ್ದೇಶನದಲ್ಲಿ ಸಿನಿಮಾ ಅಧ್ಭುತವಾಗಿ ಮೂಡಿ ಬಂದಿದೆಯಂತೆ. ಸೆಪ್ಟೆಂಬರ್​ 30ಕ್ಕೆ ಮಾರ್ಟಿನ್​​ ದರ್ಬಾರ್​​ ಜೋರಾಗಿರಲಿದೆ. ಸಿನಿಮಾದ ಪ್ರಮೋಷನ್​ ಬಗ್ಗೆ ಡಿಫರೆಂಟ್​ ಆಗಿ ಪ್ಲಾನ್​ ಮಾಡಿಕೊಂಡಿದೆ ಚಿತ್ರತಂಡ. ಅಲ್ಲಿವರೆಗೂ ಅಭಿಮಾನಿಗಳು ಮಾರ್ಟಿನ್​​ ಜಪ ಮಾಡಲಿದ್ದಾರೆ. ಮಾರ್ಟಿನ್​ಗೆ ನಾಯಕಿಯಾಗಿ ವೈಭವಿ ಶಾಂಡಿಲ್ಯ ಕೂಡ ವಿಭಿನ್ನ ಪಾತ್ರದಲ್ಲಿ ಕಾಣಿಸಿದ್ದಾರೆ.

ಉದಯ್​​ ಕೆ ಮೆಹ್ತಾ ಕೋಟಿ ಕೋಟಿ ಬಂಡವಾಳ ಹೂಡಿ ಅದ್ಧೂರಿಯಾಗಿ ನಿರ್ಮಾಣ ಮಾಡ್ತಿದ್ದಾರೆ. ಸತ್ಯ ಹೆಗಡೆ ಕ್ಯಾಮೆರಾ ಕೈಚಳಕ ಈ ಸಿನಿಮಾದಲ್ಲಿ ಕಣ್ಣು ಕುಕ್ಕಲಿದೆ. ಮಣಿ ಶರ್ಮಾ ಮ್ಯೂಸಿಕ್​​ ಕೂಡ ಚಿತ್ರಕ್ಕಿದೆ. ಏನೆ ಇರಲಿ ಶೂಟಿಂಗ್​ ಮುಗಿಸಿ ಡಬ್ಬಿಂಗ್​ಗೆ ಚಾಲನೆ ಸಿಕ್ಕಿರೋದ್ರಿಂದ ಮಾರ್ಟಿನ್​ ಇನ್ನಷ್ಟು ಗುಡ್​ ನ್ಯೂಸ್​ ಕೊಡೋದಂತು ಪಕ್ಕಾ.

ರಾಕೇಶ್​​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES