Tuesday, December 24, 2024

ವೈದ್ಯರ ಯಡವಟ್ಟಿನಿಂದ ನರಳಾಡಿ ಪ್ರಾಣ ಬಿಟ್ಟ ವೃದ್ದೆ

ದಾವಣಗೆರೆ : ವೃದ್ಧೆಯ ಹೊಟ್ಟೆ ಕೊಯ್ದು ಹೊಲಿಗೆ ಹಾಕದೇ ವೈದ್ಯರ ಯಡವಟ್ಟಿನಿಂದ ನರಳಾಡಿ ವೃದ್ದೆ ಪ್ರಾಣಬಿಟ್ಟಿದ್ದಾರೆ.

ಬುಳ್ಳಾಪುರ ಗ್ರಾಮದ ಅನ್ನಪೂರ್ಣಮ್ಮ(65) ವೃದ್ದೆ ಸಾವನ್ನಪ್ಪಿದ್ದು, ಕುಟುಂಬಸ್ಥರಿಂದ ಆಸ್ಪತ್ರೆ ಮುಂಭಾಗ ಶವವಿಟ್ಟು ಪ್ರತಿಭಟನೆ ಮಾಡಿದ್ದಾರೆ. ನಿರ್ಲಕ್ಷ್ಯ ವಹಿಸಿದ ವೈದ್ಯರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಗುರುನಾಥ್ ಬೊಂದಾಡಿ ಆಸ್ಪತ್ರೆ ಮುಂಭಾಗ ಕುಟುಂಬಸ್ಥರು ಗಲಾಟೆ ಮಾಡಿದ್ದು, ಶವ ಇಲ್ಲೆ ಕೊಳೆತು ಹೋಗಲಿ ನ್ಯಾಯ ಸಿಗುವರೆಗೂ ಹೋರಾಟ ಕೈ ಬಿಡಲ್ಲ ಎಂದು ಆಕ್ರೋಶ‌ ವ್ಯಕ್ತಪಡಿಸುತ್ತಿದ್ದಾರೆ. ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಬಂದಿದ್ದ ಮಹಿಳೆ. ಆಪರೇಷನ್ ಮಾಡಿ 15 ದಿನ ಆದರೂ ಹೊಲಿಗೆ ಹಾಕಿಲ್ಲ. ಆಸ್ಪತ್ರೆ ಸಿಬ್ಬಂದಿ ಕೇಳಿದರೆ ತನ್ನಷ್ಟಕ್ಕೆ ತಾನೇ ಕೂಡಿಕೊಳ್ಳುವುದು ಎಂದ ಆಸ್ಪತ್ರೆ ಸಿಬ್ಬಂದಿ ಇದರಿಂದಾಗಿ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಪ್ರಾಣ ಬಿಟ್ಟಿದ್ದಾರೆ. ವೈದ್ಯ ದೀಪಕ್ ಬೊಂಡಾಡೆ ಎಸ್ಕೇಪ್ ಆಗಿದ್ದು, ಬಸವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

RELATED ARTICLES

Related Articles

TRENDING ARTICLES