Monday, December 23, 2024

ಕನ್ಹಯ್ಯ ಕುಟುಂಬ ಭೇಟಿ ಮಾಡಿದ ಸಿಎಂ ಗೆಹ್ಲೋಟ್

ರಾಜಸ್ಧಾನ : ಇಬ್ಬರು ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಗೀಡಾದ ಉದಯಪುರ ಟೈಲರ್ ಕನ್ಹಯ್ಯಾ ಲಾಲ್ ಅವರ ಮನೆಗೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಇಂದು ಭೇಟಿ ನೀಡಿದರು.

ಕನ್ಹಯ್ಯಾ ಲಾಲ್ ಅವರ ಕುಟುಂಬ ಸದಸ್ಯರು ಮತ್ತು ಸಂಬಂಧಿಕರೊಂದಿಗೆ ಮುಖ್ಯಮಂತ್ರಿ ಗೆಹ್ಲೋಟ್ ಮಾತನಾಡಿ ಸಾಂತ್ವಾನ ಹೇಳಿದರು.ಗೆಹ್ಲೋಟ್ ಅವರು ಪಕ್ಷದ ಮುಖಂಡ ಗೋವಿಂದ್ ಸಿಂಗ್ ದೋತಾಸ್ರಾ, ಕಂದಾಯ ಸಚಿವ ರಾಮಲಾಲ್ ಜಾಟ್, ಡಿಜಿಪಿ ಎಂಎಲ್ ಲಾಥರ್ ಮತ್ತು ಇತರ ನಾಯಕರು ಮತ್ತು ಅಧಿಕಾರಿಗಳು ಇದೇ ವೇಳೆ ಲಾಲ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಇನ್ನು, ರಾಷ್ಟ್ರೀಯ ತನಿಖಾ ಸಂಸ್ಥೆ ಉದಯ್‌ಪುರ ಕೊಲೆ ಪ್ರಕರಣವನ್ನು ಕಾಲಮಿತಿಯಲ್ಲಿ ತನಿಖೆ ನಡೆಸಬೇಕು ಮತ್ತು ವಿಚಾರಣೆಯನ್ನು ತ್ವರಿತ ನ್ಯಾಯಾಲಯದಲ್ಲಿ ನಡೆಸಬೇಕು. ಘಟನಾ ಪ್ರದೇಶದಲ್ಲಿ ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಗೆಹ್ಲೋಟ್ ಹೇಳಿದರು.

RELATED ARTICLES

Related Articles

TRENDING ARTICLES