Monday, December 23, 2024

ಶೀತಲ್ ವಿಂಡೋಸೀಟ್ ಹಿಂದಿನ ಕೈ ಅಭಿನಯ ಚಕ್ರವರ್ತಿ

ಸಿನಿದುನಿಯಾದ ಸೆನ್ಸೇಷನ್ ವಿಕ್ರಾಂತ್ ರೋಣ ರಿಲೀಸ್​ಗೂ ಮುನ್ನ ನಿರೂಪ್ ಭಂಡಾರಿಯ ವಿಂಡೋಸೀಟ್ ತೆರೆಗಪ್ಪಳಿಸುತ್ತಿದೆ. ಡಾಲಿಯ ಪೋರಿ ಅಮೃತಾ ಮ್ಯಾಜಿಕ್ ಮಾಡಲಿದ್ದು, ಪ್ರೊಮೋಷನ್ ಪಡೆಯುತ್ತಿರೋ ಶೀತಲ್​ಗೆ ಅಭಿನಯ ಚಕ್ರವರ್ತಿ ಕಿಚ್ಚ ಸಾಥ್ ನೀಡಿದ್ದಾರೆ.

ಶೀತಲ್ ವಿಂಡೋಸೀಟ್​ ಹಿಂದಿನ ಕೈ ಅಭಿನಯ ಚಕ್ರವರ್ತಿ

ಡಾಲಿ ಪೋರಿ- ರಂಗಿತರಂಗ ಪೋರ.. 6 ವರ್ಷದ ಡ್ರೀಮ್

ಮರ್ಡರ್ ಮಿಸ್ಟರಿಯ ಸಸ್ಪೆನ್ಸ್ ಥ್ರಿಲ್ ಕೊಡಲಿರೋ ಸೀಟ್

ಇಂಡಸ್ಟ್ರಿಯಲ್ಲಿ ಸಖತ್ ಬ್ಯುಸಿ ಆಗ್ತಿದ್ದಾರೆ ಜಾಕ್ ಮಂಜು..!

ವಿಂಡೋಸೀಟ್.. ಈ ವಾರ ರಾಜ್ಯಾದ್ಯಂತ ರಿಲೀಸ್ ಆಗ್ತಿರೋ ನಿರೀಕ್ಷಿತ ಸಿನಿಮಾ. ಈ ಚಿತ್ರ ಒಂದಷ್ಟು ಹಿಟ್ ಕಾಂಬೋಗಳನ್ನ ಒಂದು ಮಾಡಿದೆ. ಒಂದ್ಕಡೆ ರಂಗಿತರಂಗ ಖ್ಯಾತಿಯ ನಿರೂಪ್ ಭಂಡಾರಿ ನಾಯಕನಾದ್ರೆ, ಮತ್ತೊಂದ್ಕಡೆ ಬಡವ ರಾಸ್ಕಲ್ ಫೇಮ್ ಅಮೃತಾ ಅಯ್ಯಂಗಾರ್ ಹಾಗೂ ಸಲಗ ಸಂಜನ ನಾಯಕಿಯರು.

ಇನ್ನು ನ್ಯೂಸ್ ಆಂಕರ್ ಆಗಿದ್ದ ಶೀತಲ್ ಶೆಟ್ಟಿ, ಬಿಗ್​ಬಾಸ್ ಕಂಟೆಸ್ಟೆಂಟ್ ಆಗೋದ್ರ ಜೊತೆಗೆ ಒಂದಷ್ಟು ಸಣ್ಣಪುಟ್ಟ ಪಾತ್ರಗಳ ಮೂಲಕ ಚಿತ್ರರಂಗದಲ್ಲಿ ಉಳಿದುಕೊಳ್ಳೋ ಮನಸ್ಸು ಮಾಡಿದ್ರು. 2016ರಲ್ಲಿ ಬಿಗ್​ಬಾಸ್​ನಿಂದ ಹೊರಬಂದ ಶೀತಲ್ ಶೆಟ್ಟಿ, ಸಿನಿಮಾ ಮಾಡೋಕೆ ಮುಂದಾದಾಗ, ಪ್ರೊಡ್ಯೂಸರ್ ಹುಡುಕಾಟ ತುಂಬಾ ಕಷ್ಟವಾಯ್ತು. ಆಗ ಜಾಕ್ ಮಂಜು ಅವ್ರನ್ನ ರೆಫರ್ ಮಾಡಿದ್ದೇ ಕಿಚ್ಚ ಸುದೀಪ್ ಅಂತೆ. ಅಂದ್ರೆ ವಿಂಡೋಸೀಟ್ ಆಗೋದ್ರ ಹಿಂದೆ ಕಿಚ್ಚನ ಕೈಚಳಕವಿದೆ.

ನಿರ್ಮಾಪಕ ಜಾಕ್ ಮಂಜು ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿದ ಬಳಿಕ ಅವ್ರ ನಸೀಬು ಬದಲಾಗೋ ಸಮಯ ಈಗ ಸನಿಹ ಆಗ್ತಿದೆ. ಕಾರಣ ಬರೀ ಡಿಸ್ಟ್ರಿಬ್ಯೂಷನ್​ಗೆ ಸೀಮಿತವಾಗಿದ್ದ ಅವ್ರು, ಇದೀಗ ಸುದೀಪ್ ಜೊತೆ ವಿಕ್ರಾಂತ್ ರೋಣ ಅನ್ನೋ ಮೆಗಾ ಪ್ಯಾನ್ ವರ್ಲ್ಡ್​ ಸಿನಿಮಾ ಮಾಡ್ತಿದ್ದಾರೆ. ಜೊತೆಗೆ ಕಂಟೆಂಟ್ ಬೇಸ್ಡ್ ವಿಂಡೋಸೀಟ್​ ಕೂಡ ಮಾಡಿ ರಿಲೀಸ್ ಮಾಡ್ತಿದ್ದಾರೆ.

ಒಳ್ಳೆಯ ಕಥೆಗಳ ಆಯ್ಕೆ ಜೊತೆ ಅದ್ಭುತ ಪ್ರತಿಭೆಗಳಿಗೆ ವೇದಿಕೆ ಆಗ್ತಿರೋದು ನಿಜಕ್ಕೂ ಗ್ರೇಟ್. ಇತ್ತ ನಿರೂಪ್ ಭಂಡಾರಿಗೂ ಇದೊಂದು ಒಳ್ಳೆಯ ಪ್ಲಾಟ್​ಫಾರ್ಮ್​. ಕಾರಣ ಸುದೀಪ್ ಜೊತೆಗಿನ ಬಾಂಧವ್ಯದ ಜೊತೆ ಸಪೋರ್ಟ್​ ಕೂಡ ಮುಂದುವರೆಯುತ್ತಿದೆ. ರೋಣಗೂ ಮುನ್ನ ನಿರೂಪ್​ಗೆ ವಿಂಡೋಸೀಟ್ ಬಿಗ್ ಬ್ರೇಕ್ ನೀಡೋ ಸಾಧ್ಯತೆಯಿದೆ.

ಶೀತಲ್ ಶೆಟ್ಟಿಯಲ್ಲಿದ್ದ ಸಿನಿಮಾದ ಹಸಿವು ಎಂಥದ್ದು ಅನ್ನೋದು ಪ್ರತಿ ಫ್ರೇಮ್​ನಲ್ಲೂ ಎದ್ದು ಕಾಣ್ತಿದೆ. ಇದೊಂದು ಲವ್ ಸ್ಟೋರಿ ಆಗಿರಲಿದೆ ಅಂದುಕೊಂಡಿದ್ದವ್ರಿಗೆ ಸಸ್ಪೆನ್ಸ್ ಥ್ರಿಲ್ಲರ್ ಮಿಸ್ಟರಿ ಮೂವಿ ಅನ್ನೋದನ್ನ ಟ್ರೈಲರ್​ನಿಂದ ಅರ್ಥೈಸಿದ್ರು. ಪಾತ್ರಗಳು, ಲೊಕೇಷನ್ಸ್, ಮೇಕಿಂಗ್ ಕ್ವಾಲಿಟಿ ಹೀಗೆ ಎಲ್ಲವೂ ವ್ಹಾವ್ ಪೀಲ್ ಕೊಡ್ತಿದ್ದು, ಶುಕ್ರವಾರ ಅಸಲಿ ಸತ್ಯ ರಿವೀಲ್ ಆಗಲಿದೆ.

ಹೊಸ ಸಿನಿಮೋತ್ಸಾಹಿಗಳ ಕನಸುಗಳು ಹೀಗೆ ನನಸಾಗ್ತಿರೋದು ನಿಜಕ್ಕೂ ಹೊಸ ಪೀಳಿಗೆಯ ಭವಿಷ್ಯದ ಪ್ರತೀಕವಾಗಿದೆ. ವಿಂಡೋಸೀಟ್ ಗೆಲ್ಲಲಿ, ಶೀತಲ್ ಶೆಟ್ಟಿಯ ನಿರ್ದೇಶನ ಕನಸಿಗೆ ನೀರೆರೆಯಲಿ, ಜಾಕ್ ಮಂಜು ಅವ್ರಿಗೂ ಒಳ್ಳೆಯ ಲಾಭ ಬರಲಿ ಅನ್ನೋದು ಕಿಚ್ಚ ಹಾಗೂ ಅವ್ರ ಫ್ಯಾನ್ಸ್ ಜೊತೆ ಕನ್ನಡ ಸಿನಿಪ್ರಿಯರ ಅಭಿಲಾಷೆ ಆಗಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES