Thursday, December 19, 2024

ಇಸ್ಲಾಂನ ಭಯೋತ್ಪಾದಕ ಮನಸ್ಥಿತಿಯನ್ನ ಖಂಡಿಸಬೇಕಿದೆ : ಸುನೀಲ್ ಕುಮಾರ್

ಉದಯಪುರ : ನಮ್ಮ ಶಾಸಕರ ಮನೆಗೆ ಬೆಂಕಿ ಹಾಕಿದ್ರು, ಉದಯಪುರ ಘಟನೆಯ ಮನಸ್ಥಿತಿಗಳು ಇದಾವೆ ಎಂದು ವಿಧಾನಸೌಧದಲ್ಲಿ ಇಂಧನ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.

ಇದು ಅತ್ಯಂತ ಹೇಯವಾದ ಕೃತ್ಯ, ಇಡೀ ದೇಶ ಒಂದು ಸಮಾಜವಾಗಿ ಎದ್ದು ನಿಲ್ಲಬೇಕಿದೆ. ಇಸ್ಲಾಂನ ಮುಂದುವರಿದ ಕೃತ್ಯ ಇದಾಗಿದೆ. ಕೇರಳ, ಕಾಶ್ಮೀರದಲ್ಲಿ ಇಂತ ಘಟನೆಗಳಾಗಿದೆ. ಇಸ್ಲಾಂನ ಭಯೋತ್ಪಾದಕ ಮನೋಭಾವನೆ ಇದಾಗಿದೆ. ಕೇವಲ ಇಬ್ಬರಷ್ಪೇ ಅಲ್ಲ, ಈ ಕೃತ್ಯದ ಹಿಂದೆ ಸಾಕಷ್ಟು ಮನಸ್ಥಿತಿಗಳಾಗಿವೆ. ನಮ್ಮ ಶಾಸಕರ ಮನೆಗೆ ಬೆಂಕಿ ಹಾಕಿದ್ರು, ಉದಯಪುರ ಘಟನೆಯ ಮನಸ್ಥಿತಿಗಳು ಇದಾವೆ ಎಂದರು.

ಅದಲ್ಲದೇ, ಕಾಂಗ್ರೆಸ್​​ನ ಮುಖಂಡರೂ ಖಂಡಿಸಿದ್ದಾರೆ. ಸಿದ್ದರಾಮಯ್ಯನವರ ಎದೆ ಖಂಡಿತವಾಗಿಯೂ ನಡುಗಿದೇಯೋ ನೋಡಬೇಕಿದೆ. ಇಸ್ಲಾಂನ ಭಯೋತ್ಪಾದಕ ಮನಸ್ಥಿತಿಯನ್ನ ಖಂಡಿಸಬೇಕಿದೆ. ಈ ಬಗ್ಗೆ ಧರ್ಮ ಗುರುಗಳು ಬುದ್ದಿ ಹೇಳಬೇಕಿದೆ. ಈ ಘಟನೆ ದಿಢೀರ್ ಎಂದು ಆಗಿಲ್ಲ, ತುಷ್ಟೀಕರಣದ ರಾಜಕಾರಣ ಆಗಿದೆ. ಕಲ್ಲಂಗಡಿ ಘಟನೆ ಆದಾಗ, ಹರ್ಷ ಹತ್ಯೆ ಆದಾಗ ಕಾಂಗ್ರೆಸ್​​ನವರಿಗೆ ಏನೂ ಅನ್ನಿಸಲಿಲ್ಲ ಎಂದು ಹೇಳಿದರು.

ಇನ್ನು, ಈ ಕತ್ತಿ ಎಲ್ಲರ ಕುತ್ತಿಗೆಗೆ ಬರುವ ಆತಂಕ ಇದೆ. ತುಷ್ಟೀಕರಣ ರಾಜಕಾರಣ ಬಿಡಬೇಕಿದೆ. ಬೆಲೆ ಏರಿಕೆ ಸಭೆ ಅಲ್ಲ. ಬೆಲೆಯ ಹೊಂದಾಣಿಕೆ ಸಭೆ ಆಗಿದೆಯಾ. ಕಲ್ಲಿದ್ದಲ ಬಗ್ಗೆ KRC ಸಭೆ ಆಗಿದೆ. ಹಿಂದಿನ ಸರ್ಕಾರವೇ ಬೆಲೆ ಹೊಂದಾಣಿಕೆ ಸಭೆ ಮಾಡಿತ್ತು ಎಂದರು.

RELATED ARTICLES

Related Articles

TRENDING ARTICLES