Monday, December 23, 2024

ಚಪಲಚೆನ್ನಿಗರಾಯ ನಟ ನರೇಶ್ ಲೀಲೆಗಳು !

ಕರ್ನಾಟಕದಲ್ಲಿಯೂ ಈಗ ಪವಿತ್ರ ಲೋಕೇಶ್ ಹಾಗೂ ನರೇಶ್ ಬಗ್ಗೆ ಚರ್ಚೆ ಆಗಲು ಶುರುವಾಗಿದೆ. ಇಲ್ಲೂ ಬಿಸಿ ಬಿಸಿ ಚರ್ಚೆಯಾಗಲು ಕಾರಣ ಮತ್ಯಾರೂ ಅಲ್ಲ ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ. ಕನ್ನಡ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಮ್ಯಾ ರಘುಪತಿ ಸ್ಟೋಟಕ ವಿಷಯಗಳನ್ನು ಹೊರಹಾಕಿದ್ದಾರೆ.

ಒಂದು ಕಡೆ ಪ್ರತಿಷ್ಠಿತ ಕುಟುಂಬ, ಮತ್ತೊಂದು ಕಡೆ ನಟನಾಗಿ ಜನಪ್ರಿಯತೆ. ರಾಜಕಾರಣದಲ್ಲೂ ಹೆಸರು ಮಾಡಲು ನಟ ನರೇಶ್ ಇನ್ನಿಲ್ಲದ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಹೆಸರು, ಜನಪ್ರಿಯತೆ, ಹಣಬಲ, ಪ್ರಭಾವ ಹೊಂದಿದ್ದ ನರೇಶ್​​​ಗೆ ಹೆಣ್ಣು ಮಕ್ಕಳ ಚಪಲ ಜಾಸ್ತಿಯೇ ಇತ್ತು. ಈಗಾಗಲೇ ಎರಡು ಮದುವೆ ಮಾಡಿಕೊಂಡು ಡೈವೋರ್ಸ್ ಪಡೆದುಕೊಂಡು ಮೂರನೇ ಮದುವೆಯಾಗಿ ಆ ಪತ್ನಿ ಜೊತೆಯಲ್ಲಿದ್ದರೂ ಹಲವು ಟಾಲಿವುಡ್ ನಟಿಯರು, ಸಹ ನಟಿಯರೊಂದಿಗೆ ನಟ ನರೇಶ್ ಅಫೇರ್ ಮೇಲೆ ಅಫೇರ್ ಇಟ್ಟುಕೊಂಡು ಕಚ್ಚೆಹರುಕ ಎಂದೇ ಕುಖ್ಯಾತಿ ಗಳಿಸಿದ್ದರು.

ಇನ್ನು ನಟ ನರೇಶ್ ರಾಸಲೀಲೆಗಳ ಸ್ಫೋಟಕ ಸುದ್ದಿ ಈ ನಿಮ್ಮ ಪವರ್ ಟಿವಿ ಬಿಚ್ಚಿಟ್ಟಿದೆ. ನಟಿಯರನ್ನ ಹೇಗೆ ಪಟಾಯಿಸುತ್ತಿದ್ದ ಗೊತ್ತಾ ಈ ಚಪಲಚೆನ್ನಿಗರಾಯ ನರೇಶ್..? ಮಾತಿನಿಂದಲೇ ಮೋಡಿ ಮಾಡಿ ಬುಟ್ಟಿಗೆ ಬೀಳಿಸಿಕೊಳ್ಳುತ್ತಿದ್ದ.

ನರೇಶ್ ಯಾವೆಲ್ಲ ನಟಿಯರ ಜೊತೆ ಅಫೇರ್ ಇಟ್ಟುಕೊಂಡಿದ್ದ. ಫ್ಯಾಷನ್ ಡಿಸೈನರ್ ಜೊತೆ ಚಕ್ಕಂದವಾಡಿದ್ದ ಹಿರಿಯ ನಟ. ಮನೆಗೆಲಸದವಳೊಂದಿಗೂ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಮ್ಯಾನೇಜರ್ ಜೊತೆಗೂ ನಡೆದಿತ್ತು ನಟ ನರೇಶ್​​​ನ ಕರ್ಮಕಾಂಡವನ್ನೆಲ್ಲಾ ಸಾಕ್ಷ್ಯ ಸಮೇತ ನರೇಶ್​​ನ ಪುರಾಣವನ್ನ ಪವರ್ ಟಿವಿ ಬಿಚ್ಚಿಟ್ಟಿತ್ತು.

ನಟ ನರೇಶ್​​ನ ಎಲ್ಲಾ ರಾಸಲೀಲೆಗಳ ಬಗ್ಗೆ ಗೊತ್ತಿದ್ದೂ ಪತ್ನಿ ರಮ್ಯಾ ರಘುಪತಿ ಅವರು ಮೌನವಾಗಿದ್ದರು. ಮೂರನೇ ಪತ್ನಿ ರಮ್ಯಾ ರಘುಪತಿಗೆ ಡೈವೋರ್ಸ್ ನೀಡಲು ಆಡಿದ ನಾಟಕದ ಅಸಲಿ ಸತ್ಯ ರಹಸ್ಯ ಕಾರ್ಯಾಚರಣೆ ಮೂಲಕ ಬಯಲಿಗೆ ಎಳೆಯಲಾಗಿದೆ. ರಮ್ಯಾ ರಘುಪತಿ ವಿರುದ್ಧ ಹೊರಿಸಿರುವ 500 ಕೋಟಿ ರೂ. ವಂಚನೆ ಆರೋಪ ಸತ್ಯಕ್ಕೆ ದೂರವಾದುದು ಎಂಬುದನ್ನು ದೂರುದಾರರೇ ಒಪ್ಪಿಕೊಂಡಿದ್ದು, ಈ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಈ ವಿಷಯವನ್ನು ನಿಮ್ಮ ‘ಪವರ್ ಟಿವಿ’ ಬಯಲಿಗೆ ಎಳೆದಿದೆ.

ಇಷ್ಟೆಲ್ಲಾ ನೊಂದು, ಬೆಂದು, ಅವಮಾನ ಅನುಭವಿಸಿದ ಅವರು,ತನಗಾದ ಸಂಕಟ, ಅವಮಾನ, ಚಿತ್ರಹಿಂಸೆ ಯಾರಿಗೂ ಆಗಬಾರದು ಹಾಗೂ ಅಲ್ಲದೇ ಆಂಧ್ರದಲ್ಲಿ ತನಗಾದ ಅವಮಾನಗಳು ಎಂಬ ಕಳಕಳಿಯಿಂದ ನರೇಶ್ ವಿರುದ್ಧವೇ ಯುದ್ಧ ಸಾರಿದ್ದಾರೆ ರಮ್ಯಾ ಅವರು.
ತಾನೇನೂ ತಪ್ಪು ಮಾಡಿಲ್ಲ ಎಂದು ನೀಲಕಂಠಪುರಂ ಕುಟುಂಬಕ್ಕೆ ಹೇಳುವ ಛಲದಿಂದ ಮತ್ತು ಎರಡು ಪ್ರತಿಷ್ಠಿತ ಕುಟುಂಬಗಳ ಪ್ರತಿಷ್ಠೆಗೆ ಧಕ್ಕೆ ತರಬಾರದೆಂಬ ಎಚ್ಚರಿಕೆಯ ನಡೆಯೊಂದಿಗೆ ವಿಧಿಯಿಲ್ಲದೆ ತನ್ನ ಗಂಡನ ಎಲ್ಲಾ ಕಳ್ಳಾಟ, ಕಾಮಕಾಂಡವನ್ನು ರಮ್ಯಾ ಅವರು ಬಿಚ್ಚಿಟ್ಟರು.

RELATED ARTICLES

Related Articles

TRENDING ARTICLES