Wednesday, December 18, 2024

ನಾಯಿ ಬರ್ತ್​ಡೇ ಪಾರ್ಟಿಯಲ್ಲಿ ಹುಡುಗಿಯರ ಭರ್ಜರಿ ಡ್ಯಾನ್ಸ್

ಬೆಳಗಾವಿ : ನಾಯಿ ಬರ್ತ್​ಡೇ ಪಾರ್ಟಿಯಲ್ಲಿ ಹುಡುಗಿಯರಿಂದ ಭರ್ಜರಿ ಡ್ಯಾನ್ಸ್ ಮಾಡಿದ ಘಟನೆ ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ತುಕ್ಕಾನಟ್ಟಿ ಗ್ರಾಮದಲ್ಲಿ ನಡೆದಿದೆ.

ಇನ್ನು, ಬೇರೆ ಕಡೆಗಳಿಂದ ಸಾವಿರಾರು ರೂ. ಖರ್ಚು ಮಾಡಿ ಹುಡುಗಿಯರ ಕರೆಸಿ ನೃತ್ಯ ಮಾಡಿದ್ದು, ಮಾಜಿ.ಹಾಲಿ ಗ್ರಾ.ಪಂ.ಸದಸ್ಯರು ಹುಡುಗಿಯರ ನೃತ್ಯ ಕಣ್ತುಂಬಿಕೊಂಡಿದ್ದಾರೆ. ನಾಯಿ ಹುಟ್ಟುಹಬ್ಬದ ಪಾರ್ಟಿಯಲ್ಲಿ ಹುಡುಗಿಯರು ಸೋಂಟ ಬಳಕಿಸಿದ್ದಾರೆ.

ಅದಲ್ಲದೇ, ಕಳೆದ ಜೂನ್ 22ರಂದು ಸಾಕು ನಾಯಿ ‘ಕ್ರಿಶ್’ ಹುಟ್ಟು ಹಬ್ಬವಾಗಿದ್ದು, ನಾಯಿ ಹುಟ್ಟು ಹಬ್ಬ ಅದ್ದೂರಿಯಾಗಿ ಆಚರಣೆ ಮಾಡಿದ್ದ ಶಿವಪ್ಪ ಮರ್ದಿ ಒಂದು ಕ್ವಿಂಟಲ್ ಕೇಕ್ ಕಟ್ ಮಾಡಿ, ಶುಭಾಶಯ ಕೋರಿದ ಗ್ರಾಮಸ್ಥರು. ನೆಚ್ಚಿನ ನಾಯಿಯ ಗ್ರಾಮದಲ್ಲಿ ವಾದ್ಯಗಳ ಮೂಲಕ ಅದ್ದೂರಿ ಮೆರವಣಿಗೆ ಮಾಡಲಾಯಿತು. ಗ್ರಾಮದ 5 ಸಾವಿರಜನಕ್ಕೆ 3ಕ್ವಿಂಟಲ್ ಚಿಕನ್, 1ಕ್ವಿಂಟಲ್ ಮೊಟ್ಟೆ, ಸಸ್ಯಹಾರಿಗಳಿಗೆ 50ಕೆಜಿ ಕಾಜುಕರಿ ತಯಾರಿಸಿ ಊಟದ ವ್ಯವಸ್ಥೆ ಮಾಡಿದ್ದಾರೆ.

ಸದ್ಯ ನಾಯಿ ಬರ್ತ್​ಡೇ ಪಾರ್ಟಿಗೆ ಹುಡುಗಿಯರನ್ನ ಕರೆಸಿ ಡ್ಯಾನ್ಸ್ ಮಾಡಿಸಿದ್ದಕ್ಕೆ , ಸೋಶಿಯಲ್ ಮೀಡಿಯಾದಲ್ಲಿ ಡ್ಯಾನ್ಸ್ ವಿಡಿಯೋ ಪುಲ್ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES