Monday, December 23, 2024

ಬನಾರಸ್ ವೇದಿಕೆಯಲ್ಲಿ ಪುಷ್ಪ ಡೈರೆಕ್ಟರ್ ಕನ್ನಡ ಗುಣಗಾನ

ಬನಾರಸ್​ನ ಬಣ್ಣದೋಕುಳಿ ದೇಶಾದ್ಯಂತ ರಂಗೇರಿಸ್ತಿದೆ. ಯೆಸ್.. ಕನ್ನಡ ಹಾಗೂ ಮಲಯಾಳಂನಲ್ಲಿ ಹರಿದ ಮಾಯಗಂಗೆ, ಇದೀಗ ಪಕ್ಕದ ಆಂಧ್ರದಲ್ಲೂ ಜೋರಾಗಿ ಹರಿಯುತ್ತಿದೆ. ಪುಷ್ಪ ಡೈರೆಕ್ಟರ್ ಸುಕುಮಾರ್ ಈ ನಮ್ಮ ಸಿನಿಮಾನ ಹಾಡಿ ಹೊಗಳೋದ್ರ ಜೊತೆಗೆ ಕನ್ನಡ ಚಿತ್ರರಂಗದ ಪ್ರೌಢಿಮೆಯನ್ನ ಹೆಮ್ಮೆಯಿಂದ ಮಾತನಾಡಿದ್ದಾರೆ.

ಬನಾರಸ್ ವೇದಿಕೆಯಲ್ಲಿ ಪುಷ್ಪ ಡೈರೆಕ್ಟರ್ ಕನ್ನಡ ಗುಣಗಾನ

ಆಂಧ್ರದಲ್ಲೂ ಜೋರಾಗಿ ಹರಿದ ಬನಾರಸ್ ಬಣ್ಣದೋಕುಳಿ

ಕನ್ನಡ ಇಂಡಸ್ಟ್ರಿ ಎಲ್ಲಿಗೋ ಹೋಗ್ತಿದೆ ಎಂದ ಸುಕುಮಾರ್..!

ಝೈದ್​ಗೆ ಮೊದಲ ಹೆಜ್ಜೆಯಲ್ಲೇ ನಿರೀಕ್ಷೆಗೂ ಮೀರಿದ ಜಯ

ಅಬ್ಬಬ್ಬಾ.. ಕೆಜಿಎಫ್​ನಂತಹ ಆಡಂಬರದ ಸಿನಿಮಾಗಳಷ್ಟೇ ಅಲ್ಲ, ಬನಾರಸ್​​ನಂತಹ ಕಲರ್​ಫುಲ್ ಸಿನಿಮಾಗಳೂ ಪ್ಯಾನ್ ಇಂಡಿಯಾ ಸದ್ದು ಮಾಡಲಿವೆ. ಯೆಸ್.. ರೀಸೆಂಟ್ ಆಗಿ ಲಾಂಚ್ ಆದ ಬನಾರಸ್ ಆಲ್ಬಮ್​ನ ಮೊದಲ ಸಾಂಗ್ ಮಾಯಗಂಗೆ ನಿಜಕ್ಕೂ ಕೇಳುಗರನ್ನ ಮಾಯಾಲೋಕಕ್ಕೆ ಕರೆದೊಯ್ತಿದೆ.

ಕನ್ನಡ ಹಾಗೂ ಮಲಯಾಳಂ ವರ್ಷನ್​ನ ಬನಾರಸ್ ಮೊದಲ ವಿಡಿಯೋ ಸಾಂಗ್​ನ ಅಭಿಷೇಕ್ ಅಂಬರೀಶ್, ವಿನೋದ್ ಪ್ರಭಾಕರ್, ನಿರ್ಮಾಪಕಿ ಶೈಲಜಾ ನಾಗ್ ರಿಲೀಸ್ ಮಾಡಿದ್ರು. ಇದೀಗ ಅದ್ರ ಪ್ಯಾನ್ ಇಂಡಿಯಾ ಪ್ರೊಮೋಷನ್ಸ್ ಶುರುವಾಗಿದೆ. ಪಕ್ಕದ ಹೈದ್ರಾಬಾದ್​​ನಲ್ಲೂ ಜೋರಾಗೇ ಸದ್ದು ಮಾಡಿದೆ ಬನಾರಸ್. ಕನ್ನಡದ ಜೊತೆ ತೆಲುಗು, ತಮಿಳು, ಹಿಂದಿ, ಮಲಯಾಳಂನಲ್ಲಿ ಸಿನಿಮಾ ತಯಾರಾಗ್ತಿದ್ದು, ಇದೀಗ ಆಂಧ್ರದಲ್ಲಿ ತೆಲುಗು ವರ್ಷನ್ ಸಾಂಗ್ ರಿಲೀಸ್ ಆಗಿದೆ. ಗ್ರೇಟ್ ಡೈರೆಕ್ಟರ್ ಸುಕುಮಾರ್ ಈ ಹಾಡನ್ನ ಲಾಂಚ್ ಮಾಡಿ, ಚಿತ್ರದ ಬಗ್ಗೆ ಹಾಗೂ ಕಲಾವಿದರ ಬಗ್ಗೆ ಕೊಂಡಾಡಿದ್ದಾರೆ. ರಂಗಸ್ಥಳಂ ಹಾಗೂ ಪುಷ್ಪ ಸಿನಿಮಾಗಳ ಖ್ಯಾತಿಯ ಮಾಸ್ಟರ್​ಮೈಂಡ್ ಆದಂತಹ ಸುಕುಮಾರ್ ಅವ್ರು ಝೈದ್, ಸೋನಾಲ್ ಜೊತೆ ಸುಜಯ್ ಶಾಸ್ತ್ರಿ ಅಂತಹ ಸಣ್ಣ ಕಲಾವಿದನನ್ನೂ ಪ್ರಶಂಸಿಸಿದ್ದಾರೆ.

ಕನ್ನಡ ಚಿತ್ರರಂಗದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿರೋ ಸುಕುಮಾರ್, ಇದೀಗ ಕನ್ನಡ ಇಂಡಸ್ಟ್ರಿ ಎಲ್ಲಿಗೋ ಹೋಗ್ತಿದೆ ಅಂತ ಹೆಮ್ಮೆಯ ಮಾತುಗಳನ್ನಾಡಿದ್ದಾರೆ. ಅಷ್ಟೇ ಅಲ್ಲ, ಜಯತೀರ್ಥ ಬೆಲ್​ಬಾಟಂ ಸಿನಿಮಾನ ಕೊಂಡಾಡಿ ಅವ್ರ ನಿರ್ದೇಶನಾ ಕೌಶಲ್ಯಗಳ ಬಗ್ಗೆ ಬಹುಪರಾಕ್ ಅಂದಿದ್ದಾರೆ.

ಇದು ನಿಜಕ್ಕೂ ಸುವರ್ಣ ಯುಗದ ಪರ್ವವೇ ಸರಿ. ಕೆಜಿಎಫ್​ನಿಂದ ಪ್ಯಾನ್ ಇಂಡಿಯಾದಾದ್ಯಂತ ಸದ್ದು ಗದ್ದಲ ಮಾಡ್ತಿರೋ ನಮ್ಮ ಸಿನಿಮಾಗಳು, ಬರೀ ಮಾಸ್ ವೆಂಚರ್​ಗಳಷ್ಟೇ ಆಗದೆ, ಇಂತಹ ಪ್ರೇಮದೃಶ್ಯಕಾವ್ಯಗಳೂ ಹುಬ್ಬೇರಿಸುತ್ತಿರೋದು ಖುಷಿಯ ವಿಚಾರ. ನಾಗೇಂದ್ರ ಪ್ರಸಾದ್​ರ ಸಾಹಿತ್ಯ, ಅಜನೀಶ್​ರ ಸಂಗೀತ, ಅದ್ವೈತ್ ಸಿನಿಮಾಟೋಗ್ರಫಿ ಹಾಡಿನ ಜೊತೆ ಸಿನಿಮಾದ ಮೈಲೇಜ್ ಹೆಚ್ಚಿಸಿವೆ. ಸದ್ಯದಲ್ಲೇ ಮಾಯಗಂಗೆ ದೇಶಾದ್ಯಂತ ಹರಿಯಲಿದ್ದು, ಸಿನಿರಸಿಕರ ಕಣ್ಣಿನ ಜೊತೆ ಹೃದಯ ಮುಟ್ಟಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES