Wednesday, January 22, 2025

ರಾಜಸ್ಥಾನ ಕೊಲೆ ಪ್ರಕರಣಕ್ಕೆ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ

ಬೆಂಗಳೂರು: ಮೀಡಿಯಾದಲ್ಲಿ ನೋಡಿದ್ದೇನೆ, ಅದು ನೋಡಬಾರದ ದೃಶ್ಯ. ಅತ್ಯಂತ ಕ್ರೂರ ಹಾಗೂ ಅಮಾನವೀಯವಾಗಿ ಅವರು ಎನ್ ಮಾಡ್ಲಿಕೆ ಸಾಧ್ಯ ಅಂತ ತೋರ್ಸಿದ್ದಾರೆ ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.

ರಾಜಸ್ಥಾನ ಕೊಲೆ ಪ್ರಕರಣ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್​​ನ ರಾಜಸ್ಥಾನ ಸರ್ಕಾರ ಖಂಡಿತವಾಗಿ ಉತ್ತರಕೊಡಬೇಕು. ಈ ವ್ಯಕ್ತಿಗಳು ರಾಜ್ಯದಲ್ಲಿ ಬೆಳೆದಿದ್ದಾರೆ. ಆ ಶಕ್ತಿಗಳನ್ನು ಮಟ್ಟ ಹಾಕುವಲ್ಲಿ ಸರ್ಕಾರ ವಿಫಲವಾಗಿದೆ, ಖಂಡಿತವಾಗಿ ಇಡೀ ಜನ ಸಮುದಾಯ ಎದ್ದು ಖಂಡಿಸಬೇಕು. ಆಗ ಈ ದ್ರೋಹಿಗಳು ತಲೆ ಎತ್ತಲ್ಲ. ಖಡಿವಾಣ ಆಗುತ್ತೆ ಇದು ಅತ್ಯಂತ ದುರದೃಷ್ಟಕರ ಸಂಗತಿ, ಮತಾಂಧ ಶಕ್ತಿಗಳು ಧರ್ಮ ಅಂದರೆ ಕೊಲೆ,‌ ಧರ್ಮ ಅಂದ್ರೆ ರಕ್ತಪಾತ ಈ ರೀತಿಯ ತಿಳುವಳಿಕೆ‌ಯಿಂದ ಇಡೀ ಜಗತ್ತಿನಲ್ಲಿ ಅವರು ಸುಖವಾಗಿಲ್ಲ ಜಗತ್ತಿನಲ್ಲಿಯೂ ಯಾರಿಗೂ ಸುಖವಾಗಿ ಶಾಂತಿಯಿಂದ‌ ಇರಲು ಬಿಡುತ್ತಿಲ್ಲ. ಎಲ್ಲಾ ‌ಕಡೆ ಈ ಕೃತ್ಯ ನಡೆಯುತ್ತಿದೆ ಎಂದರು.

ಆರೋಪಿಗಳನ್ನು ಎನ್ ಕೌಂಟರ್ ಮಾಡಿ ಎಂಬ ಮುತಾಲಿಕ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮುತಾಲಿಕ್ ಏನ್ ಹೇಳ್ತಾರೆ ಎಂಬುವುದು ಮುಖ್ಯ ಅಲ್ಲ. ದೇಶದಲ್ಲಿ ಸಂವಿಧಾನ ಕಾನೂನು ಶಿಕ್ಷೆ ಎಲ್ಲವೂ ಇದೆ. ಕೊಲೆ ಮಾಡಿದವರು ಈ ಸಂವಿಧಾನ ,‌ಕಾನೂನಿಂದ‌ ಲಾಭ ಇಲ್ಲ ಅಂತ ತಿಳಿದುಕೊಂಡವರು, ನಾವೇ ಶಿಕ್ಷೆ ಕೊಡುವವರು ಅಂತಾನೇ ಹೀಗೆ ಮಾಡಿದ್ದು, ಕಾನೂನು ಚೌಕಟ್ಟಿನಲ್ಲಿ ಏನ್ ಮಾಡಬೇಕೋ ಅದನ್ನು ಮಾಡ್ತೀವಿ. ನಮಗೂ ಸಿಟ್ಟು ಬರುತ್ತೆ,‌ ನೋವು ಆಗುತ್ತೆ. ‌ಜಂಗಲ್ ರಾಜ್ಯ ಅಲ್ಲ ಇದು. ಇಂತಹ ಮತಾಂಧ ಶಕ್ತಿಗಳಿಗೆ ಮೆಸೇಜ್ ಕೊಡಬೇಕು. ಇದು‌ ಮಾತನಾಡಲಾರದಂತ ದೃಶ್ಯ, ಮೌನವಾಗಿ ಒಂದ್ ಕ್ಷಣ ಯೋಚನೆ ಮಾಡಬೇಕು. ಮಾತಿನಲ್ಲಿ ಘಟನೆ ಖಂಡಿಸಲು ಆಗಲ್ಲ ಎಂದು ಹೇಳಿದರು.

ಕಲ್ಲಂಗಡಿ ಹಣ್ಣು ಒಡೆದಿದ್ದಕ್ಕೆ ವಿರೋಧ ಪಡೆಸಿದವರು ಇದಕ್ಕೆ ಯಾಕೆ ವಿರೋಧ ಮಾಡಲ್ಲ ಎಂಬ ವಿಚಾರವಾಗಿ ಮಾತನಾಡಿದ ಅವರು, ಬಹಳಷ್ಟು ಬುದ್ದಿ ಜೀವಿಗಳು ಅಂತಹ ಸಂದರ್ಭದಲ್ಲಿ ಮಾತನಾಡಿದ್ರು. ಈಗ ಅವರ ನಾಲಗೆಗೆ ಲಕ್ವಾ ಹೊಡೆದಿದ್ಯಾ..? ಇದು ಮಾತನಾಡಬೇಕು, ಎಲ್ಲಾ ಅಪರಾಧ ಸರಿಯಾಗಿ ಖಂಡಿಸಬೇಕು. ಯಾವುದೋ ಒಂದು ವರ್ಗ ಖಂಡಿಸುವುವುದು ಇನ್ನೊಂದು ವರ್ಗ ಮಾಡಿದಾಗ ಮೌನವಹಿಸುವುದು ಸರಿಯಲ್ಲ. ಇದು ಸಮಾಜದಲ್ಲಿ ಬಹಳ ಅಪಾಯ. ಇದು ಅಪರಾಧ ಅಲ್ವಾ, ಅಮಾನವೀಯ ಸಂಗತಿ ಅಲ್ವಾ..? ಇದಕ್ಕೆ ಏನ್ ಹೇಳ್ತಾರೋ ನೋಡಬೇಕು‌ ಎಂದರು.

RELATED ARTICLES

Related Articles

TRENDING ARTICLES