Monday, December 23, 2024

Chapter-2: ನರೇಶ್ & ಪವಿತ್ರಾ ಲೋಕೇಶ್​​ ಸಂಬಂಧದ ಬಗ್ಗೆ ಪತ್ನಿ ರಮ್ಯಾ ರಘುಪತಿ ಹೇಳಿದ್ದೇನು ಗೊತ್ತಾ..?

ಪವಿತ್ರಾ ಲೋಕೇಶ್ ಹಾಗೂ ಪತಿ ನರೇಶ್ ಬಗ್ಗೆನೂ ರಮ್ಯಾ ರಘುಪತಿ ಸ್ಟೋಟಕ ಹೇಳಿಕೆ ಕೊಟ್ಟಿದ್ದಾರೆ. ‘ಪವಿತ್ರಾ ಲೋಕೇಶ್ ಹಾಗೂ ನರೇಶ್ ಕಳೆದ 6 ವರ್ಷಗಳಿಂದ ಲಿವ್ ಇನ್ ರಿಲೇಷನ್‌ಶಿಫ್‌ನಲ್ಲಿದ್ದಾರೆ. ಈಗ ಅವರು ಮದುವೆ ಆಗಲು ಹೊರಟಿದ್ದಾರೆ’ ಎಂದು ಅವರು ಆರೋಪ ಮಾಡಿದ್ದಾರೆ.

ಕಳೆದ ಒಂದು ವಾರದಿಂದ ಕನ್ನಡ ಚಿತ್ರರಂಗದ ಪವಿತ್ರ ಲೋಕೇಶ್​ ಹಾಗೂ ಮಹೇಶ್​ ಬಾಬು ಅಣ್ಣ ನರೇಶ್​ ಮದುವೆ ವಿಚಾರ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ. ಎಲ್ಲಿ ನೋಡಿದರೂ ಇವರಿಬ್ಬರ ಮದುವೆ ವಿಚಾರದ್ದೆ ಮಾತು. ತಮ್ಮ ಅಭಿನಯದ ಮೂಲಕವೇ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡಿದ್ದರು. ಕೇವಲ ಕನ್ನಡ ಚಿತ್ರರಂಗಷ್ಟೇ ಅಲ್ಲದೇ, ತಮಿಳು ತೆಲುಗು ಸಿನಿಮಾಗಳಲ್ಲೂ ತಮ್ಮ ಪ್ರಭಾವ ಬೀರುತ್ತಿದ್ದಾರೆ. ಆದರೆ, ಇತ್ತೀಚೆಗೆ ವೈಯಕ್ತಿಕ ವಿಚಾರಕ್ಕೆ ಸಾಕಷ್ಟು ಸುದ್ದಿಯಾಗುತ್ತಿದ್ದಾರೆ. ನರೇಶ್​ ಮತ್ತು ಪವಿತ್ರ ಲೋಕೇಶ್​ ಒಟ್ಟಿಗೆ ಇದ್ದಾರೆ ಎಂದು ನರೇಶ್​ ಮೂರನೇ ಪತ್ನಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ಪತಿ ಬಗ್ಗೆ ಸ್ಪೋಟಕ ಮಾಹಿತಿಯನ್ನು ನೀಡಿದ್ದಾರೆ. ನರೇಶ್ ಹಾಗೂ ಪವಿತ್ರಾ ಲೋಕೇಶ್ ಇಬ್ಬರೂ ಈಗಾಗಲೇ ಮದುವೆಯಾಗಿದ್ದಾರೆ ಎನ್ನುವ ಮಾತು ಟಾಲಿವುಡ್‌ನಲ್ಲಿ ಜೋರಾಗಿ ಚರ್ಚೆಯಾಗುತ್ತಿದೆ. ಇನ್ನೂ ಮೂರನೇ ಪತ್ನಿಗೆ ವಿಚ್ಛೇದನ ನೀಡದೆ ನಾಲ್ಕನೇ ಮದುವೆಯಾಗಿದ್ದಾರೆ ಎನ್ನುವ ಸುದ್ದಿಯಾಗಿತ್ತು. ಆದರೆ, ಈ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಈಗ ಸ್ವತ: ನರೇಶ್ ಮೂರನೇ ಪತ್ನಿ ರಮ್ಯಾ ಪತಿಯ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ. ನರೇಶ್​ ಯಾವ ರೀತಿಯ ವ್ಯಕ್ತಿ ಎಂದು ಎಲ್ಲರ ಮುಂದೆ ತೆರೆದಿಟ್ಟಿದ್ದಾರೆ.

ಪವಿತ್ರಲೋಕೇಶ್​​ ನಡೆದು ಬಂದ ಹಾದಿ..! :

ಪವಿತ್ರಾ ಲೋಕೇಶ್ ಇದು ಚಿತ್ರರಂಗದ ಪರಿಚಿತ ಹೆಸರು. ಕಳೆದ 26 ವರ್ಷಗಳಿಂದ ಕನ್ನಡ, ತೆಲುಗು, ತಮಿಳು ಚಿತ್ರರಂಗಗಳಲ್ಲಿ ಸಕ್ರಿಯವಾಗಿರುವ ಪವಿತ್ರಾ ಲೋಕೇಶ್ ಪೋಷಕ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ತೆಲುಗು ಅತ್ಯಂತ ಬೇಡಿಕೆಯ ಪೋಷಕ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದ ಖ್ಯಾತ ಪೋಷಕ ನಟ ಮೈಸೂರು ಲೋಕೇಶ್ ಪುತ್ರಿಯೇ ಪವಿತ್ರಾ ಲೋಕೇಶ್. ಇವರು ಕಳೆದ ಎರಡೂವರೆ ದಶಕದಿಂದ ಬ್ಯುಸಿ ನಟಿ. ಸೋದರ ಆದಿ ಲೋಕೇಶ್ ಕೂಡ ಕನ್ನಡದ ನಟ. ಮೈಸೂರಿನಲ್ಲಿ ಹುಟ್ಟಿ ಬೆಳೆದ ಪವಿತ್ರಾ ಲೋಕೇಶ್, ಆರಂಭದಲ್ಲಿ ಸಿವಿಲ್ ಸರ್ವೀಸ್ ಹುದ್ದೆಯ ಕನಸು ಕಂಡಿದ್ರು. ಆದ್ರೆ ತಂದೆಯ ನಿಧನದಿಂದಾಗಿ ಆ ಕನಸು ಕೈಗೂಡಲಿಲ್ಲ.

1996ರಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅಭಿನಯದ ಮಿಸ್ಟರ್ ಅಭಿಷೇಕ್ ಚಿತ್ರದ ನಾಯಕಿಯಾಗಿ ಪವಿತ್ರಾ ಲೋಕೇಶ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ರು. ಆದರೆ ಅವರಿಗೆ ಹೆಚ್ಚು ಹೆಸರು ತಂದುಕೊಟ್ಟಿದ್ದು ಶಿವರಾಜ್ ಕುಮಾರ್ ನಟನೆಯ ಜನುಮದ ಜೋಡಿ ಚಿತ್ರ. ಮುಂದೆ ಕನ್ನಡದ ನಾಯಿ ನೆರಳು ಚಿತ್ರಕ್ಕಾಗಿ ಶ್ರೇಷ್ಠ ನಟಿ ಪ್ರಶಸ್ತಿ ಗಿಟ್ಟಿಸಿದ್ರು. ನೂರಾರು ಚಿತ್ರಗಳಲ್ಲಿ ಪೋಷಕ ಪಾತ್ರಗಳ ಮೂಲಕ ಛಾಪು ಮೂಡಿಸಿರುವ ಪವಿತ್ರಾ, ಕನ್ನಡದ ದಿಯಾ ಚಿತ್ರದಲ್ಲಿ ಮನೋಜ್ಞ ಅಭಿನಯ ನೀಡಿದ್ದಾರೆ. ಮಹೇಶ್ ಬಾಬು ನಟನೆಯ ತೆಲುಗು ಚಿತ್ರ ಸರ್ಕಾರಿ ವಾರಿ ಪಾಟ ಅವರ ಇತ್ತೀಚಿನ ಸಿನಿಮಾ. ಕಿರುತೆರೆಯಲ್ಲೂ ಹೆಸರು ಮಾಡಿರುವ ಪವಿತ್ರಾ ಲೋಕೇಶ್, ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

2007ರಲ್ಲಿ ಕನ್ನಡ ಚಿತ್ರರಂಗದ ಪೋಷಕ ನಟ ಸುಚೇಂದ್ರ ಪ್ರಸಾದ್ ಮದುವೆಯಾಗಿರುವ ಪವಿತ್ರಾ ಲೋಕೇಶ್, ಅದಾಗಲೇ ಸಾಫ್ಟ್​ವೇರ್​ ಎಂಜಿನಿಯರ್​ ಒಬ್ಬರನ್ನ ಮದುವೆಯಾಗಿ ಡೈವೋರ್ಸ್ ನೀಡಿದ್ರು. ಪವಿತ್ರಾ ಲೋಕೇಶ್-ಸುಚೇಂದ್ರ ಪ್ರಸಾದ್ ಇಬ್ಬರಿಗೂ ಇದು 2ನೇ ಮದುವೆ. ನಟಿ ಪವಿತ್ರಾ ಲೋಕೇಶ್​ಗೆ ಇಬ್ಬರು ಗಂಡು ಮಕ್ಕಳಿದ್ದಾರೆ.

RELATED ARTICLES

Related Articles

TRENDING ARTICLES