Wednesday, January 22, 2025

ನರೇಶ್​​ ಪತ್ನಿ ರಮ್ಯಾ ರಘುಪತಿ ಹಿನ್ನೆಲೆ ಏನು ಗೊತ್ತಾ..?

ಟಾಲಿವುಡ್ ಹಿರಿಯ ನಟ ನರೇಶ್ ಅವರ 3ನೇ ಪತ್ನಿಯೇ ರಮ್ಯಾ ರಘುಪತಿ. ರಮ್ಯಾ ರಘುಪತಿ ಕರ್ನಾಟಕ ಮೂಲದ ಹೆಣ್ಣುಮಗಳು. ಬೆಂಗಳೂರಿನಲ್ಲೇ ಹುಟ್ಟಿ ಬೆಳೆದು, ವಿದ್ಯಾಭ್ಯಾಸ ಮಾಡಿದ ರಮ್ಯಾ, ಆನಂತರ ಮೆಲ್ಬರ್ನ್​​ನಲ್ಲಿ ಉನ್ನತ ಶಿಕ್ಷಣ ಪಡೆದುಕೊಂಡ್ರು. ಜರ್ನಲಿಸಂ ಕೂಡ ವ್ಯಾಸಂಗ ಮಾಡಿದ್ದಾರೆ.

ರಮ್ಯಾ ಬೆಂಗಳೂರಿನ ಪ್ರತಿಷ್ಠಿತ ಮೋತಿಮಹಲ್ ಹೋಟೆಲ್​​ ಮಾಲೀಕ ದಿವಂಗತ ರಘುಪತಿಯವರ ಹಿರಿಯ ಪುತ್ರಿ. ಈ ಹಿಂದೆ ಜನಪ್ರಿಯವಾಗಿದ್ದ ಹೈಲ್ಯಾಂಡ್ಸ್​ ಹೋಟೆಲ್​​​ ಇವರ ಕುಟುಂಬಕ್ಕೆ ಸೇರಿದ್ದು. ಈಗ ಆ ಹೋಟೆಲ್ ಇದ್ದ ಜಾಗದಲ್ಲಿ ರಿನೈಸಾನ್ಸ್ ಎಂಬ ಫೈವ್ ಸ್ಟಾರ್ ಹೋಟೆಲ್ ಎದ್ದುನಿಂತಿದೆ. ಕನ್ನಡ ಚಿತ್ರರಂಗದ ಬಹುತೇಕ ಸ್ಟಾರ್ ನಟರಿಗೆ ಆಶ್ರಯ ಒದಗಿಸಿದ್ದ ಈ 2 ಹೋಟೆಲ್​ಗಳಲ್ಲಿ ಬಹುತೇಕ ಸ್ಟಾರ್ ನಟರು ಉಳಿದುಕೊಳ್ಳುತ್ತಿದ್ರು. ಈ ಎರಡು ಹೋಟೆಲ್​​ಗಳು ಡಾ.ರಾಜ್​ಕುಮಾರ್​, ರಜನಿಕಾಂತ್, ಅಂಬರೀಶ್ ಸೇರಿದಂತೆ ಬಹುಪಾಲು ನಟರ ಫೇವರಿಟ್ ಆಗಿದ್ವು.

ಶ್ರೀಮಂತ ಹಿನ್ನೆಲೆಯ ಕುಟುಂಬದಿಂದ ಬಂದ ರಮ್ಯಾ ರಘುಪತಿ 2009ರಲ್ಲಿ ಟಾಲಿವುಡ್ ನಟ ನರೇಶ್ ಅವರನ್ನ ಮದುವೆಯಾಗಿದ್ದಾರೆ. ಇವರಿಬ್ಬರಿಗೆ ರಣವೀರ್ ಎಂಬ 8 ವರ್ಷದ ಮಗನಿದ್ದಾನೆ. ರಮ್ಯಾ ಚಿಕ್ಕಪ್ಪ ಡಾ. ರಘುವೀರ್ ರೆಡ್ಡಿ ಆಂಧ್ರ ಪ್ರದೇಶದಲ್ಲಿ ಪ್ರಭಾವಿ ರಾಜಕಾರಣಿಯಾಗಿದ್ದಾರೆ. ಅವರ ಚಿಕ್ಕಪ್ಪ ರಘುವೀರ್ ರೆಡ್ಡಿ ಸಚಿವರಾಗಿ, ಆಂಧ್ರಪ್ರದೇಶ ಕಾಂಗ್ರೆಸ್ ಸಮಿತಿಯ​ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ರಮ್ಯಾ ತಾತಾ ರಾಮರೆಡ್ಡಿ ಕೂಡ ಲೋಕಸಭಾ ಸದಸ್ಯರಾಗಿದ್ರು.

ಕೆಜಿಎಫ್​​​​-2 ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಕೂಡ ರಮ್ಯಾಗೆ ಸೋದರ ಸಂಬಂಧಿ. ರಮ್ಯಾ ಅವರು ಪ್ರತಿಷ್ಠಿತ ನೀಲಕಂಠಪುರಂ ಕುಟುಂಬಕ್ಕೆ ಸೇರಿದವರು. ರಮ್ಯಾ ರಘುಪತಿ. ಹಿಂದೂಪುರದಲ್ಲಿ ಎನ್​​ಜಿಒ ನಡೆಸಿ ಯಶಸ್ವಿಯಾಗಿದ್ದಾರೆ. ರಂಭಾ ಉನ್ನತಿ ಆರೋಮ ಪ್ರೈವೇಟ್ ಕಂಪನಿ ಮೂಲಕ ಉದ್ಯಮಿಯಾಗಿಯೂ ರಮ್ಯಾ ಗುರುತಿಸಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES