ಇದು ಟಾಲಿವುಡ್ ಸೂಪರ್ ಸ್ಟಾರ್ ಕೃಷ್ಣ ಕುಟುಂಬದ ಕಥೆಯಾಗಿದ್ದು, ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಸೋದರ ನರೇಶ್ನ ಮೋಸದ ಪುರಾಣವಾಗಿದೆ. ಆತನ ಮಲ ತಂದೆ ಕೃಷ್ಣ, ತೆಲುಗು ಚಿತ್ರರಂಗದಲ್ಲಿ ಒಂದು ಕಾಲದ ತುಂಬ ಜನಪ್ರಿಯರಾಗಿದ್ದವರು. ಆತನ ತಾಯಿ ವಿಜಯ ನಿರ್ಮಲ ಚಿತ್ರರಂಗದ ಹಿರಿಯ ನಟಿ ಹಾಗೂ ನಿರ್ದೇಶಕಿಯಾಗಿ ಸಹ ಗುರುತಿಸಿಕೊಂಡವರು. ಸ್ವತಃ ಆತ ಕೂಡ ನಟನಾಗಿ 4 ದಶಕಗಳಿಗೂ ಹೆಚ್ಚುಕಾಲ ತೆರೆ ಮೇಲೆ ಮಿಂಚಿದವರು. ಈತನೇ ನಮ್ಮ ಕನ್ನಡದ ಹೆಣ್ಣು ಮಗಳಿಗೆ ಅನ್ಯಾಯ ಮಾಡಿದನು. ತಾನೇ ಪ್ರೀತಿಸಿ ಮದುವೆಯಾದ ಪತ್ನಿಗೆ ನಟ ನರೇಶ್ನಿಂದ ಘೋರ ಅನ್ಯಾಯ ಮಾಡಿದ್ದಾರೆ.
ನರೇಶ್ ಬೆಳೆದು ಬಂದ ಹಾದಿ!
ವಿಜಯ ಕೃಷ್ಣ ನರೇಶ್. ಇದು ಟಾಲಿವುಡ್ನಲ್ಲಿ ಅತ್ಯಂತ ಪರಿಚಿತ ಹೆಸರು. ವಿಜಯಕೃಷ್ಣ ನರೇಶ್ ತೆಲುಗು ಚಿತ್ರರಂಗದ ಖ್ಯಾತ ನಟ. ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ ನರೇಶ್, ಆನಂತರ ಹೀರೋ ಆಗಿ ಕೂಡ ತೆಲುಗು ಚಿತ್ರರಂಗದಲ್ಲಿ ಜನಪ್ರಿಯತೆ ಪಡೆದುಕೊಂಡವರು. ತನ್ನ ತಾಯಿ ವಿಜಯ ನಿರ್ಮಲ ನಿರ್ದೇಶನದ ನಲುಗು ಸ್ತಂಭಲತಾ ಚಿತ್ರದ ಮೂಲಕ ಹೀರೋ ಆಗಿ ಸಕ್ಸಸ್ ಕಂಡರು. ಶ್ರೀವಾರಿಕಿ ಪ್ರೇಮಲೇಖ, ಸೊಗಸು ಚೂಡಾ ತರಮ, ಅಲ್ಲರಿ ರಾಮುಡು, ಪೊಲೀಸ್ ಬಾರ್ಯ, ಮಲ್ಲೇಶ್ವರಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿ ಕೆಲವು ಹಿಟ್ ಚಿತ್ರಗಳನ್ನ ನೀಡಿದ್ದಾರೆ.
ಬಳಿಕ ಹಾಸ್ಯ ನಟರಾಗಿಯೂ ಛಾಪು ಮೂಡಿಸಿದ ನರೇಶ್, ಚಿತ್ರಂ ಭಳಾರೆ ವಿಚಿತ್ರಂ, ಜಂಬಲಕ್ಕಿಡಿ ಪೊಂಬದಂಥ ಕಾಮಿಡಿ ಚಿತ್ರಗಳ ಮೂಲಕ ತೆಲುಗು ಪ್ರೇಕ್ಷಕರ ಮನಗೆದ್ದವರು. ಯಮದೊಂಗ, ಗುಂಟೂರು ಟಾಕೀಸ್, ರಂಗಸ್ಥಳಂ, ಪರಂಪರಾ, ದೃಶ್ಯಂ-2 ಸೇರಿದಂತೆ ಹಲವು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಮಿಂಚಿದ್ದಾರೆ. ಕಿರುತೆರೆಯಲ್ಲೂ ಅಮೃತಂ, ಮಾ ನಾನಾ, ಮಹಾಲಕ್ಷ್ಮಿ ನಿವಾಸಂನಂಥ ಸೀರಿಯಲ್ಗಳ ಮೂಲಕ ಹೆಸರು ಗಳಿಸಿದ್ದಾರೆ.
ನರೇಶ್ ಮಲ ತಂದೆ ಕೃಷ್ಣ ತೆಲುಗು ಚಿತ್ರರಂಗದಲ್ಲಿ ಒಂದು ಕಾಲದ ಸೂಪರ್ ಸ್ಟಾರ್. ಮಲ ಸೋದರ ಮಹೇಶ್ ಬಾಬು ತೆಲುಗು ಚಿತ್ರರಂಗದ ಹಾಲೀ ಸೂಪರ್ ಸ್ಟಾರ್. ತಾಯಿ ವಿಜಯ ನಿರ್ಮಲ ಅವರದ್ದು ತೆಲುಗು ಚಿತ್ರರಂಗದಲ್ಲಿ ಬಹುದೊಡ್ಡ ಹೆಸರು. ಕೃಷ್ಣ ಅವರ ಜೊತೆ ದಾಖಲೆಯ 47 ಚಿತ್ರಗಳಲ್ಲಿ ಅಭಿನಯಿಸಿದ ಹೆಗ್ಗಳಿಕೆ ವಿಜಯ ನಿರ್ಮಲ ಅವರದ್ದು. ಒಟ್ಟು 42 ಚಿತ್ರಗಳನ್ನ ನಿರ್ದೇಶಿಸಿ ಅತಿಹೆಚ್ಚು ಸಿನಿಮಾಗಳನ್ನ ನಿರ್ದೇಶಿಸಿದ ನಿರ್ದೇಶಕಿ ಎಂಬ ದಾಖಲೆ ವಿಜಯ ನಿರ್ಮಲ ಅವರ ಹೆಸರಲ್ಲಿದೆ. ಇನ್ನು ಅವರ ಮೊದಲ ಪತಿ ಕೃಷ್ಣ ಮೂರ್ತಿ ಅವರು ನರೇಶ್ ಚಿಕ್ಕವರಿದ್ದಾಗಲೇ ತೀರಿಹೋಗಿದ್ರು. ಆನಂತರ ನಟ ಕೃಷ್ಣ ಅವರು ವಿಜಯ ನಿರ್ಮಲ ಅವರನ್ನ 2ನೇ ಮದುವೆಯಾದ್ರು. ಕೃಷ್ಣ ಅವರಿಗೂ ಇದು 2ನೇ ಮದುವೆ. ಅದಾಗಲೇ ಅವರು ಇಂದಿರಾ ಅವರನ್ನ ಮದುವೆಯಾಗಿದ್ರು. ಅವರ ಮಗನೇ ಸೂಪರ್ ಸ್ಟಾರ್ ಮಹೇಶ್ ಬಾಬು.
ತಾಯಿ ವಿಜಯ ನಿರ್ಮಲ ಸಾಧನೆ, ಮಲ ತಂದೆ ಕೃಷ್ಣ ಅವರ ಜನಪ್ರಿಯತೆ ಅಡಿಯಲ್ಲೇ ಬೆಳೆದ ನಟ ನರೇಶ್, ಮೂರು ಬಾರಿ ಮದುವೆಯಾಗಿದ್ದಾರೆ. ಮೊದಲ ಪತಿ ಆಂಧ್ರ ಪ್ರದೇಶದವರು. ಅವರಿಗೆ ನವೀನ್ ಎಂಬ ಪುತ್ರನಿದ್ದಾನೆ. ಅವರಿಗೆ ಡೈವೋರ್ಸ್ ಕೊಟ್ಟ ನಂತರ ಚೆನ್ನೈ ಮೂಲದ ರೇಖಾ ಎಂಬುವರನ್ನ ಮದುವೆಯಾದ್ರು. ಅವರಿಗೆ ತೇಜ ಎಂಬ ಮಗನಿದ್ದಾನೆ. ಆನಂತರ ರೇಖಾಗೂ ಡೈವೋರ್ಸ್ ನೀಡಿದ್ರು. ಬಳಿಕ ರೇಖಾ ಅನಾರೋಗ್ಯದಿಂದ ಸಾವನ್ನಪ್ಪಿದ್ರು. ಅದಾದ ಬಳಿಕ ಬೆಂಗಳೂರು ಮೂಲದ ರಮ್ಯಾ ರಘುಪತಿ ಅವರನ್ನ ಮದ್ವೆಯಾದ್ರು. ಇವರಿಬ್ಬರಿಗೆ ರಣವೀರ್ ಎಂಬ ಮಗನಿದ್ದಾನೆ.
ನಟನೆ ಮಾತ್ರವಲ್ಲ, ರಾಜಕಾರಣದಲ್ಲೂ ನರೇಶ್ ಒಂದು ಕೈ ನೋಡಿದ್ದಾರೆ. ಬಹಳ ವರ್ಷಗಳ ಕಾಲ ಬಿಜೆಪಿಯಲ್ಲಿದ್ದ ನರೇಶ್, ಆಂಧ್ರ ಪ್ರದೇಶ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹಾಗೂ ಆಂಧ್ರ ಪ್ರದೇಶ ರಾಜ್ಯ ಬಿಜೆಪಿಯ ಉಪಾಧ್ಯಕ್ಷರೂ ಆಗಿದ್ರು. ಒಮ್ಮೆ ಹಿಂದೂಪುರ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಸೋಲು ಕಂಡಿದ್ದಾರೆ. ಸದ್ಯಕ್ಕೆ ತೆಲುಗು ಚಿತ್ರರಂಗದ ಮೂವಿ ಆರ್ಟಿಸ್ಟ್ ಅಸೋಸಿಯೇಶನ್ನ ಅಧ್ಯಕ್ಷರಾಗಿದ್ದಾರೆ. 60 ವರ್ಷದ ನರೇಶ್, ಗಚ್ಚಿಬೌಳಿ ಪ್ರದೇಶದಲ್ಲಿರುವ ವಿಜಯಕೃಷ್ಣ ಸ್ಡುಡಿಯೋ ಮಾಲೀಕರಾಗಿದ್ದಾರೆ.