Sunday, December 22, 2024

ಹಾಕಿ ಆಟಗಾರ ʻವರೀಂದರ್ ಸಿಂಗ್ʼ ನಿಧನ

ಪಂಜಾಬ್‌ : 1970 ರ ದಶಕದಲ್ಲಿ ಭಾರತದ ಕೆಲವು ಸ್ಮರಣೀಯ ವಿಜಯಗಳಲ್ಲಿ ಅವಿಭಾಜ್ಯ ಅಂಗವಾಗಿದ್ದ ಒಲಿಂಪಿಕ್ ಮತ್ತು ವಿಶ್ವಕಪ್ ಪದಕ ವಿಜೇತ ವರೀಂದರ್ ಸಿಂಗ್ ಇಂದು ಬೆಳಿಗ್ಗೆ ಪಂಜಾಬ್‌ನ ಜಲಂಧರ್‌ನಲ್ಲಿ ನಿಧನರಾಗಿದ್ದಾರೆ.

75 ವರ್ಷದ ವರೀಂದರ್ ಸಿಂಗ್ ಅವರು 1975ರಲ್ಲಿ ಕೌಲಾಲಂಪುರದಲ್ಲಿ ನಡೆದ ಪುರುಷರ ಹಾಕಿ ವಿಶ್ವಕಪ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತೀಯ ತಂಡದ ಭಾಗವಾಗಿದ್ದರು. ಇದು ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಭಾರತಕ್ಕೆ ಏಕೈಕ ಚಿನ್ನದ ಪದಕವಾಗಿ ಉಳಿದಿದೆ. ಸಿಂಗ್ ಅವರು 1972 ರ ಮ್ಯೂನಿಚ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು ಮತ್ತು 1973 ರ ಆಮ್ಸ್ಟರ್‌ಡ್ಯಾಮ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.

ಅಷ್ಟೇ ಅಲ್ಲದೇ, ಅವರು ಕ್ರಮವಾಗಿ 1974 ಮತ್ತು 1978 ರ ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದರು. 2007 ರಲ್ಲಿ ವರೀಂದರ್ ಅವರಿಗೆ ಪ್ರತಿಷ್ಠಿತ ಮೇಜರ್‌ ಧ್ಯಾನ್ ಚಂದ್ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಯಿತು. ಸಿಂಗ್ ನಿಧನಕ್ಕೆ ಹಾಕಿ ಇಂಡಿಯಾ ಸಂತಾಪ ಸೂಚಿಸಿದೆ. ‘ವರಿಂದರ್ ಸಿಂಗ್ ಅವರ ಸಾಧನೆಗಳನ್ನು ವಿಶ್ವಾದ್ಯಂತ ಹಾಕಿ ಸಹೋದರರು ನೆನಪಿಸಿಕೊಳ್ಳುತ್ತಾರೆ’ ಎಂದು ಅದು ಪ್ರಕಟಣೆಯಲ್ಲಿ ತಿಳಿಸಿದೆ.

RELATED ARTICLES

Related Articles

TRENDING ARTICLES