Monday, December 23, 2024

ಸೈಲೆಂಟ್ ಆಗಿ ‘ಕೈವಾ’ ಶೂಟಿಂಗ್ ಮುಗಿಸಿದ ಧನ್ವೀರ್

ಬಜಾರ್​ ಸಿನಿಮಾ ಮೂಲಕ ಭರ್ಜರಿಯಾಗಿ ಎಂಟ್ರಿ ಕೊಟ್ಟ ನಟ ಧನ್ವೀರ್​ ಕೈವಾ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಜೊತೆ ಜೊತೆಯಲಿ ಸೀರಿಯಲ್​ ಮೂಲಕ ಜನಮನ ಗೆದ್ದಿರುವ ಬ್ಯುಟಿ ಕ್ವೀನ್ ​ಮೇಘಾಶೆಟ್ಟಿ  ಧನ್ವೀರ್​ ಗೌಡ ಜೊತೆ ಡ್ಯುಯೆಟ್​ ಆಡಿದ್ದಾರೆ.  ಕೈವಾ ಟೈಟಲ್​​ ಕೇಳಿದ್ರೆ ಸಾಕು ಸಿನಿಮಾ ಮೇಲಿನ ಕ್ಯೂರಿಯಾಸಿಟಿ ಡಬಲ್ ಆಗುತ್ತೆ.

ಸೈಲೆಂಟ್ ಆಗಿ ‘ಕೈವಾ’ ಶೂಟಿಂಗ್ ಮುಗಿಸಿದ ಧನ್ವೀರ್

ಕರಗ ಮರುಸೃಷ್ಟಿ​ ಮಾಡಿದ ಆ್ಯಕ್ಷನ್​ ಡ್ರಾಮ ಸಿನಿಮಾ..!

ಏನಿದು ಕೈವ..? ಟೈಟಲ್​​ ಹಿಂದಿನ ರಹಸ್ಯವೇನು..?

ಸ್ಟಾರ್​ ನಟರ ನೆಚ್ಚಿನ  ಕಥೆ ಧನ್ವೀರ್​ ಗೌಡ ಪಾಲಾಯ್ತು

ಶೋಕ್ದಾರ್​​​, ಬಜಾರ್​​ ಹಾಗೂ ಬೈ ಟು ಲವ್​ ಚಿತ್ರಗಳ ಮೂಲಕ ಕನ್ನಡಿಗರ ದಿಲ್​ ದೋಚಿರೋ ಹ್ಯಾಂಡ್ಸಮ್​ ನಟ ಧನ್ವೀರ್​​​​ ಗೌಡ. ಇದಾದ ನಂತ್ರ ವಾಮನ   ಸಿನಿಮಾ ಕೈಗೆತ್ತಿಕೊಂಡಿದ್ದ ಧನ್ವೀರ್ ಇದೀಗ ​ ಮೋಸ್ಟ್​ ಫೇಮಸ್​ ಡೈರೆಕ್ಟರ್​ ಜಯತೀರ್ಥ ಚಿತ್ರದಲ್ಲಿ ಕಾಣಿಸಿದ್ದಾರೆ. ಜಯತೀರ್ಥ ಸಿನಿಮಾಗಳಂದ್ರೆ ಅಲ್ಲೊಂದು ವಿಭಿನ್ನತೆ, ಹೊಸತನ, ಸೂಕ್ಷ್ಮ ಸಂವೇದೆಯ ಹಲವಾರು ಅಂಶಗಳಿರುತ್ತವೆ. ಬೆಲ್​ಬಾಟಮ್​​, ಬ್ಯೂಟಿಫುಲ್​ ಮನಸುಗಳು, ಒಲವೇ ಮಂದಾರ  ಚಿತ್ರಗಳೇ ಇದಕ್ಕೆ ಸಾಕ್ಷಿ.

ಸೂಪರ್ ಹಿಟ್​ ಸಿನಿಮಾಗಳನ್ನು ಕೊಟ್ಟಿರುವ ಜಯತೀರ್ಥ ಕೈವಾ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಈ ಸಿನಿಮಾದಲ್ಲಿ ನಟ ಧನ್ವೀರ್​ ವಿಭಿನ್ನ ಗೆಟಪ್​ನಲ್ಲಿ ಕಾಣಿಸಲಿದ್ದಾರೆ. ಬೆಂಗಳೂರಿನ ತಿಗಳರ ಪೇಟೆಯಲ್ಲಿ ನೆಡಯುವ ಕಥೆ ಇದಾಗಿದ್ದು. ಈ ಸಿನಿಮಾಗಾಗಿಯೇ ಕರಗವನ್ನು ಮರುಸೃಷ್ಟಿ ಮಾಡಲಾಗಿದೆಯಂತೆ. 1983 ರಲ್ಲಿ ನಡೆದ ನೈಜ ಕತೆಯನ್ನು ಆದರಿಸಿ ಈ ಸಿನಿಮಾ ಮಾಡಲಾಗಿದೆ.  ಆ ಕಾಲದ ಬೆಂಗಳೂರನ್ನು ಕಣ್ಣಿಗೆ ಕಟ್ಟಿದಂತೆ ಮರುಸೃಷ್ಟಿ ಮಾಡಲಾಗಿದೆಯಂತೆ. ಸದ್ಯ ಈ ಸಿನಿಮಾದ ಶೂಟಿಂಗ್​ ಕಂಪ್ಲೀಟ್​ ಆಗಿದ್ದು ಸಖತ್​ ಕ್ಯೂರಿಯಾಸಿಟಿ ಮೂಡಿಸಿದೆ.

ಸ್ಯಾಂಡಲ್​ವುಡ್​ನಲ್ಲಿ ತಮ್ಮ ಅಭಿನಯದ ಮೂಲಕ ವಿಭಿನ್ನ ಛಾಪು ಮೂಡಿಸಿರೋ ಧನ್ವೀರ್​ ಕಥೆಗಳ ಆಯ್ಕೆಯಲ್ಲಿ ಸಖತ್​ ಚ್ಯುಸಿಯಾಗಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ  ಬೈ ಟು ಲವ್​ ಸಿನಿಮಾ ಕೂಡ ಸಖತ್​ ಹೆಸರು ಮಾಡಿತ್ತು. ಇದೀಗ ಕೈವಾ ಅನ್ನೋ ಸಿನಿಮಾ ರಿಲೀಸ್​ಗೂ ಮುನ್ನವೇ ಕುತೂಹಲ ಕೆರಳಿಸಿದೆ. ಕೈವಾ ಎಂದರೆ ಕೈವಾರ ಭೀಮ ಎಂದರ್ಥ. ತಿಗಳರ ಪೇಟೆಯ ಜನರಿಗೆ ಕರಗ ಜೀವನದ ಒಂದು ಭಾಗ. ಅವರ ಜೀವನ ಶೈಲಿಯನ್ನು ತೋರಿಸುವ ಪ್ರಯತ್ನ ಮಾಡಲಾಗಿದೆಯಂತೆ.

ಕರಗ ಹೇಗೆ ನಡೆಯುತ್ತದೆ. ಅದರ ತಯಾರಿ ಹೇಗಿರುತ್ತದೆ ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಅದಕ್ಕಾಗಿ ಸಿಕ್ಕಾಪಟ್ಟೆ ಅಧ್ಯಯನ  ಮಾಡಿ ರೆಟ್ರೋ ಸ್ಟೈಲ್​ನಲ್ಲಿ ಚಿತ್ರೀಕರಿಸಲಾಗಿದೆಯಂತೆ. ಅದಕ್ಕಾಗಿಯೇ ಮೈಸೂರು ಬಳಿ ಸೆಟ್​ ಹಾಕಿ ಕರಗವನ್ನು ಮರುಸೃಷ್ಟಿ ಮಾಡಿದ್ದಾರಂತೆ. ಸಿನಿಮಾದ ನಾಯಕಿ ಮೇಘಾಶೆಟ್ಟಿ ಕಥೆಯ ಜೀವಾಳ. ರೆಟ್ರೋ ಲುಕ್​ನಲ್ಲಿ ಸಖತ್​ ಶೈನಿಂಗ್​ ರೋಲ್​ನಲ್ಲಿ ಕಾಣಿಸಲಿದ್ದಾರೆ.

ಈ ಸಿನಿಮಾದ ಶೂಟಿಂಗ್​ ಕರ್ನಾಟಕದ ಹಲವಾರು ಭಾಗಗಳಲ್ಲಿ ನಡೆದಿದೆ. ಈ ಚಿತ್ರದಲ್ಲಿ ಶ್ವೇತಾ ಪ್ರಿಯಾ ನಾಯಕ್​ ಅನ್ನೋ ಹೊಸ ಕೋರಿಯೋಗ್ರಾಫರ್​ ಚಿತ್ರರಂಗಕ್ಕೆ ಪರಿಚಯವಾಗ್ತಿದ್ದಾರೆ. ಅಜನೀಶ್​ ಲೋಕನಾಥ್​ ಮ್ಯೂಸಿಕ್​ ಕಂಪೋಸಿಂಗ್​ ಚಿತ್ರಕ್ಕಿದೆ. ಸದ್ಯದಲ್ಲೇ ಈ ಸಿನಿಮಾದ ಇನ್ನಷ್ಟು ಅಪ್ಡೇಟ್​ ಕೊಡಲಿದೆ ಚಿತ್ರತಂಡ. ಒಟ್ಟಾರೆ ಶ್ರೀಮಂತರ ಅಟ್ಟಹಾಸ ಹೆಚ್ಚಾದಾಗ, ಮಧ್ಯಮ ವರ್ಗದ  ಪ್ರೇಮಿಗಳಿಬ್ಬರು ಹೇಗೆ ರಿಯಾಕ್ಟ್​ ಮಾಡ್ತಾರೆ ಅನ್ನೋ ವಿಭಿನ್ನ ಕಥೆಯ ಸಿನಿಮಾ ಇದು. ಶೂಟಿಂಗ್​ ಮುಗಿಸಿರೋ ಕೈವಾ ಚಿತ್ರತಂಡ ಆದಷ್ಟು ಬೇಗ ಗುಡ್​ ನ್ಯೂಸ್​ ಕೊಡಲಿ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES