Monday, December 23, 2024

ಕುಮಾರಣ್ಣ ಸಿಎಂ ಆಗೋದು ಸತ್ಯ : ಶಾಸಕ ದೇವಾನಂದ್ ಚವ್ಹಾಣ್

ವಿಜಯಪುರ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತೆ ಸಿಎಂ ಆಗ್ತೀನಿ ಎಂಬ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯಪುರದಲ್ಲಿ ಜೆಡಿಎಸ್ ಶಾಸಕ ದೇವಾನಂದ್ ಚವ್ಹಾಣ ಹೆಚ್ಡಿಕೆ ಪರ ಬ್ಯಾಟಿಂಗ್ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಣ್ಣ ನೂರಕ್ಕೆ ನೂರು ಸಿಎಂ ಆಗೋದು ಸತ್ಯ. 2023ರ ಕರ್ನಾಟಕ ಚುನಾವಣೆಯಲ್ಲಿ ಗೆದ್ದು ಸಿಎಂ ಆಗ್ತಾರೆ. ಜೆಡಿಎಸ್ ಸ್ವಂತ ಬಲದಿಂದಾಗಲಿ, ಬೆಂಬಲದಿಂದಾಗಲಿ ನೂರಕ್ಕೆ ನೂರು ಅವರು ಸಿಎಂ ಆಗೋದು ಸತ್ಯ ಎಂದು ಹೇಳಿದರು.

ಕಾಂಗ್ರೆಸ್, ಬಿಜೆಪಿ ರಾಷ್ಟ್ರೀಯ ಪಕ್ಷಗಳಿವೆ. ಕಾಂಗ್ರೆಸ್​ನಲ್ಲಿ ಸಿದ್ದರಾಮಯ್ಯ, ಡಿಕೆಶಿ ಎಂಬ ಎರಡು ಬಣಗಳಿವೆ. ಕಾಂಗ್ರೆಸ್​ನಲ್ಲಿ ಕಚ್ಚಾಟದ ಪರಿಸ್ಥಿತಿಯಿದೆ. ಬಿಜೆಪಿಯಲ್ಲೂ ಒಳಜಗಳ ಬಹಳ ಇವೆ. RSS, ಬಿಜೆಪಿ ಎರಡು ಗುಂಪುಗಳಾಗಿ ಕೆಲ್ಸ ಮಾಡ್ತೀವೆ. ಬಿಜೆಪಿಗೆ ತಕ್ಕಮಟ್ಟಿಗೆ ಸಹಕಾರ ಇಲ್ಲ. ಇವರ ಕಚ್ಚಾಟದಲ್ಲಿ ಪ್ರಾದೇಶಿಕ ಪಕ್ಷ ಜೆಡಿಎಸ್​ಗೆ ಜನ ಬೆಂಬಲಿಸ್ತಾರೆ ಎಂದರು.

ನೆರೆಯ ಆಂಧ್ರಪ್ರದೇಶದಲ್ಲಿ ಜನ ಪ್ರಾದೇಶಿಕ ಪಕ್ಷಕ್ಕೆ ಬೆಂಬಲಿಸಿದ್ದಾರೆ. ಕುಮಾರಸ್ವಾಮಿ ಅವರ ಜನಪರ ಆಡಳಿತ ನೀಡಿದ್ದಾರೆ, ಯುವಕರಿಗೆ ಉದ್ಯೋಗ ಕೊಟ್ಟಿದ್ದಾರೆ. ಕಾಂಗ್ರೆಸ್, ಬಿಜೆಪಿ ಆಡಳಿತದಲ್ಲಿ ಯುವಕರಿಗೆ ಉದ್ಯೋಗ ಕೊಟ್ಟಿಲ್ಲ. ಯುವಕರನ್ನು ನಿರುದ್ಯೋಗಿಗಳನ್ನಾಗಿ ಮಾಡಿದ್ದಾರೆ. ಈಗ ಅಗ್ನಿಪಥ್ ಯೋಜನೆ ತರುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದರು.

RELATED ARTICLES

Related Articles

TRENDING ARTICLES