Sunday, January 19, 2025

ಹಳ್ಳಿಮೇಷ್ಟ್ರಿಗೆ ನಿಶ್ವಿಕಾ ನಾಯ್ಡು ಆಣೆ ಮಾಡಿ ಹೇಳಿದ್ದೇನು..?

ಮೀಸೆ ಇರೋ ಹುಡುಗನಾಗಿ ಶರಣ್​​ ಮೊದಲ ಬಾರಿಗೆ ಹಳ್ಳಿ ಮೇಷ್ಟ್ರು ಗೆಟಪ್​ನಲ್ಲಿ ಮಿಂಚ್ತಿದ್ದಾರೆ. ಪೀಟಿ ಮಾಸ್ತರ್​ ಪಟ್ಟಾಯಿಸೋಕೆ ನಟಿ ನಿಶ್ವಿಕಾ ಹಾಲು ಮಾರೋ ಚೆಲುವೆಯಾಗಿ ಹಿಂದಿಂದ್ದೆ ಬಿದ್ದಿದ್ದಾರೆ. ಗುರು ಶಿಷ್ಯರು ಸಿನಿಮಾದಲ್ಲಿ ಶರಣ್​​ಗೆ ಕಾಳು ಹಾಕ್ತಿರೋದು ಹಳ್ಳಿಹುಡುಗಿ. ಸದ್ಯ ಈ ಹಾಡು ಎಲ್ಲರಿಗೂ ಕಂಠಪಾಟವಾಗಿದ್ದು ಯ್ಯೂಟ್ಯೂಬ್​ನಲ್ಲಿ ಸಖತ್​ ಟ್ರೆಂಡಿಂಗ್​​ನಲ್ಲಿದೆ.

ಹಳ್ಳಿಮೇಷ್ಟ್ರಿಗೆ ನಿಶ್ವಿಕಾ ನಾಯ್ಡು ಆಣೆ ಮಾಡಿ ಹೇಳಿದ್ದೇನು..?

ಇಪ್ಪತ್ತು ಲಕ್ಷಕ್ಕೂ ಅಧಿಕ ವೀಕ್ಷಣೆ.. ಗುರು ಶಿಷ್ಯರ ಮ್ಯಾಜಿಕ್​​​​..!

ಗುರು ಶಿಷ್ಯರ ಗಾನಬಜಾನಕ್ಕೆ ತಲೆದೂಗಿದ ಫ್ಯಾನ್ಸ್

PT ಮಾಸ್ಟರ್​​ನ ಕ್ಯಾಚ್ ಹಾಕೋಕೆ ನಿಶ್ವಿಕಾ ಪ್ಲಾನ್​​

ಮೊದಲ ಬಾರಿಗೆ ನಟ ಶರಣ್​ ಪಿಟಿ ಮಾಸ್ತರ್​ ಆಗಿ ಡಿಫರೆಂಟ್​  ಕಥೆ ಹೇಳೋಕೆ ಹೊರಟಿದ್ದಾರೆ. ಗುರು ಶಿಷ್ಯರು ಚಿತ್ರಕ್ಕಾಗಿ ಹಳ್ಳಿ ಹುಡುಗಿಯಾಗಿದ್ದಾರೆ ನಟಿ ನಿಶ್ವಿಕಾ. ಶರಣ್ ಸಿನಿಮಾಗಳಂದ್ರೆ ಅಲ್ಲಿ ಹೊಟ್ಟೆ ಹುಣ್ಣಾಗೋ ಕಾಮಿಡಿ. ಒಂದೊಳ್ಳೆ ಸಂದೇಶ, ಕ್ಯಾಚಿ ಸಾಲಿನ ಜವಾರಿ ಹಾಡುಗಳು ಪಕ್ಕಾ. ಮನರಂಜನೆಯ ರಸದೌತಣ ಉಣಬಡಿಸೋ ಕನ್ನಡದ ಪ್ರತಿಭಾನ್ವಿತ ಕಾಮಿಡಿ ಕಲಾವಿದ ಶರಣ್.

ಪೋಷಕ ಪಾತ್ರಗಳಿಂದ ನಿವೃತ್ತಿ ಪಡೆದು, ಹೀರೋ ಆಗಿ ಮಿಂಚ್ತಿರೋ ಶರಣ್ ಸಿನಿಮಾಗಳಂದ್ರೆ ಪ್ರೇಕ್ಷಕರಿಗೆ ಬೆಟ್ಟದಷ್ಟು ನಿರೀಕ್ಷೆ. ಇದೀಗ, ಶರಣ್​ ಅಭಿನಯದ ಗುರು ಶಿಷ್ಯರ ಜುಗಲ್ ಬಂದಿ ನೋಡೋಕೆ ಚಿತ್ರರಸಿಕ ತುದಿಗಾಲಲ್ಲಿ ಕಾಯ್ತಿದ್ದಾ‌ನೆ. 1995ರ ಕಥೆ ಆದರಿಸಿ ಶಾಲೆಗಳ ನಡುವೆ ನಡೆಯುವ ಕ್ರೀಡೆಯ ಮೇಲೆ ಸಿನಿಮಾ ತಯಾರಾಗಿದೆ. ಎಲ್ಲರ ಲೈಫಲ್ಲೂ ಸ್ಕೂಲ್ ಲೈಫ್ ಇಸ್ ಗೋಲ್ಡನ್ ಲೈಫ್. ಹಾಗಾಗಿ ಈ ಸಿನಿಮಾ ಕೂಡ ಎಲ್ಲರ ಮನಸ್ಸಿಗೂ ಟಚ್ ಆಗಲಿದೆ. ಆಣೆ ಮಾಡಿ ಹೇಳುತೀನಿ ಹಾಡನ್ನು ಚಿತ್ರತಂಡ ರಿಲೀಸ್ ಮಾಡಿದ್ದು ಯ್ಯೂ ಟ್ಯೂಬ್​​ನಲ್ಲಿ 2 ಮಿಲಿಯನ್​​ ವ್ಯೂ ಕಂಡು ಮುನ್ನುಗ್ತಿದೆ.

ಗುರು ಶಿಷ್ಯರು ಸಿನಿಮಾ, ಟೈಟಲ್​​ಗೆ ತಕ್ಕಂತೆ  ಶಾಲೆಯಲ್ಲಿ ನಡೆಯೋ ಮಾಸ್ತರ್ ಮತ್ತು ಶಾಲಾ ಮಕ್ಕಳ ನಡುವಿನ ಕಥೆ. ಇದ್ರ ಜೊತೆ ಹಳ್ಳಿ ಹುಡುಗಿ ನಿಶ್ವಿಕಾಗೆ ಸೀಟಿ ಮಾಸ್ಟರ್ ಶರಣ್ ಮೇಲೆ ಪ್ರೇಮ ಕಲರವ. ಕ್ಯಾಚ್ ಹಾಕಿ ಪಟ್ಟಾಯಿಸೋ ಪೋರಿಯಾಗಿ ನಿಶ್ವಿಕಾ ಆಣೆ ಮಾಡಿ ಹೇಳುತೀನಿ ಹಾಡಿನಲ್ಲಿ ಕಾಣಿಸಿದ್ದಾರೆ. ಈ ಹಾಡು ಪ್ರೇಕ್ಷಕರ ಎದೆಯಲ್ಲಿ ಪ್ರೀತಿಯ ಸೋನೆ ಮಳೆ ಸುರಿಸಿದೆ. ಜೊತೆಯಲ್ಲಿ ಸಿನಿಮಾ ಕುರಿತು ಕುತೂಹಲದ ತಂಗಾಳಿ ಕೂಡ ಬೀಸಿದೆ.

ಮೈಸೂರಿನ ಹಳ್ಳಿಯಲ್ಲಿನ 1995ರ ದಶಕದ ಕಥೆ ಇದು. ಪಿಟಿ ಮಾಸ್ಟರ್ ಆಗಿ ಶರಣ್ ಮಿಂಚಿದ್ರೆ ನೆಚ್ಚಿನ ಶಿಷ್ಯರಾಗಿ ಶಾಲಾ ಮಕ್ಕಳಿದ್ದಾರೆ. ಗುರು ಶಿಷ್ಯರ ನಡುವಿನ ಭಾಂದ್ಯವ್ಯದ ಕಥೆಯನ್ನು ನಿರ್ದೇಶಕ ಜಡೇಶಕುಮಾರ್ ಹಂಪಿ ತೋರಿಸೋ ಪ್ರಯತ್ನ ಮಾಡಿದ್ದಾರೆ. 13 ಮಕ್ಕಳಲ್ಲಿ ಆರು ಜನ ಮಕ್ಕಳು ಸ್ಟಾರ್ ನಟರ ಮಕ್ಕಳಾಗಿದ್ದು ಸಿನಿಮಾ ಅದ್ದೂರಿಯಾಗಿ ಮೂಡಿ ಬಂದಿದೆ.  ಈ ಸಿನಿಮಾದ ಹಾಡು ಸಕ್ಸಸ್​ ಅಗಿರೋ ಖುಷಿಯನ್ನು ಪೋಸ್ಟರ್​ ಮೂಲಕ ಖುಷಿ ಹಂಚಿಕೊಂಡಿದೆ ಚಿತ್ರತಂಡ.

ನಟ ಶರಣ್ ಸಹಭಾಗಿತ್ವದಲ್ಲಿ ತರುಣ್ ಕಿಶೋರ್ ಸುಧೀರ್ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ರೆಟ್ರೋ ಸ್ಟೈಲ್​ನಲ್ಲಿ ಸಿನಿಮಾ ಅದ್ಭುತವಾಗಿ ಮೂಡಿ ಬಂದಿದ್ದು ತೆರೆಯ ಮೇಲೆ ಮ್ಯಾಜಿಕ್ ಮಾಡೋಕೆ ಸಜ್ಜಾಗಿದೆ. ಅಜನೀಶ್ ಲೋಕನಾಥ್ ಮ್ಯೂಸಿಕ್, ಮಾಸ್ತಿ ಸಂಭಾಷಣೆ ಚಿತ್ರಕ್ಕೆ ಮೈನ್ ಹೈಲೇಟ್ ಆಗಲಿದೆ. ಒಟ್ಟಾರೆ ಗುರು ಶಿಷ್ಯರ ಪ್ರೀತಿಯ ಬ್ರಹ್ಮಗಂಟಿನ ಬಾಂಧವ್ಯ ತಿಳಿಬೇಕಾದ್ರೆ ಸ್ವಲ್ಪ ದಿನ ಕಾಯಲೇ ಬೇಕು.

ರಾಕೇಶ್ ಆರುಂಡಿ, ಫಿಲ್ಮ್ ಬ್ಯುರೋ, ಪವರ್ ಟಿವಿ

RELATED ARTICLES

Related Articles

TRENDING ARTICLES