Sunday, January 19, 2025

ಬಿಜೆಪಿಯವರಿಗೆ ಸ್ವಂತ ಮಕ್ಕಳಿಲ್ಲ : ಮಾಜಿ ಸಚಿವ ಶಿವರಾಜ್ ತಂಗಡಗಿ

ಕೊಪ್ಪಳ: ಬಿಜೆಪಿಯವರಿಗೆ ಸ್ವಂತ ಮಕ್ಕಳು ಇಲ್ಲ. ಅಲ್ಲಿ ಇರುವವರೆಲ್ಲಾ ಬಾಡಿಗೆ ಮಕ್ಕಳು ಎಂದು ಬಿಜೆಪಿ ವಿರುದ್ಧ ಕೊಪ್ಪಳದಲ್ಲಿ ಬಿಜೆಪಿ ವಿರುದ್ದ ಮಾಜಿ ಸಚಿವ ಶಿವರಾಜ್ ತಂಗಡಗಿ ವ್ಯಂಗ್ಯವಾಡಿದ್ದಾರೆ.

ಇಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಬಾಡಿಗೆ ಮಕ್ಕಳನ್ನು ಕರೆದುಕೊಂಡು ಬಿಜೆಪಿ ಸರ್ಕಾರ ರಚನೆ ಮಾಡಿದೆ. ಪಕ್ಷಾಂತರ ಶಾಸಕರನ್ನು ಬಾಡಿಗೆ ಮಕ್ಕಳಿಗೆ ಹೋಲಿಸಿ, ಬಿಜೆಪಿಯವರು ಸ್ವಂತ ಮಕ್ಕಳನ್ನು ಹುಟ್ಟಿಸಿದ ಉದಾಹರಣೆ ಎಲ್ಲಿದೆ..? ಕರ್ನಾಟಕ,‌ ಮಧ್ಯಪ್ರದೇಶದಲ್ಲಿ ರಾಜ್ಯಗಳಲ್ಲಿ ಕಾಂಗ್ರೆಸ್ ಮಕ್ಕಳನ್ನು ಕರೆದುಕೊಂಡು‌ ಬಿಜೆಪಿ ಸರ್ಕಾರ ರಚನೆ ಮಾಡಿದೆ.

ಸಿಎಂ ಸೇರಿದಂತೆ ಬೇರೆ ಪಕ್ಷದಿಂದ ಬಂದು ಸಚಿವರಾದವರು ಸಹ ಬಾಡಿಗೆ ಮಕ್ಕಳು. ದಲಿತರಿಗೆ ಶಕ್ತಿ ನೀಡಿದ್ದು ಕಾಂಗ್ರೆಸ್ ಪಕ್ಷ. ಮುಂದೆಯೂ ಸಹ ದಲಿತರಿಗೆ ಕಾಂಗ್ರೆಸ್ ಸಿಎಂ ಸ್ಥಾನ ನೀಡುತ್ತೆ 2023 ಕ್ಕೂ ಆಗಬಹುದು ‌ಅಥವಾ ಮುಂದೆಯೂ ಆಗಬಹುದು ಎಂದು ತಿಳಿಸಿದರು.

RELATED ARTICLES

Related Articles

TRENDING ARTICLES