Sunday, December 22, 2024

ಮಾಧ್ಯಮದವರೇ ನಮಗೆ ತಂದೆತಾಯಿಗಳು, ಅವ್ರೆ ಆಸರೆ : ಸಿ.ಎಂ.ಇಬ್ರಾಹಿಂ

ಬಾಗಲಕೋಟೆ : ಬಾದಾಮಿ ಇಂದ ಸಿದ್ದರಾಮಯ್ಯ ಹೆಂಗ್ ಎಂ.ಎಲ್ ಎ ಆದ್ರು, ಬೀದಿಯಲ್ಲಿ ಬಿದ್ದ ಅವರನ್ನು ಬಾದಾಮಿಗೆ ಕರೆದುಕೊಂಡು ಬಂದವರ್ಯಾರು? ನಾನು ತಾನೆ? ಎಂದು ವಿಪಕ್ಷ ನಾಯಕನ ವಿರುದ್ಧ ಜೆಡಿಎಸ್​​ ರಾಜ್ಯಾದ್ಯಕ್ಷ ಸಿ.ಎಂ. ಇಬ್ರಾಹಿಂ ವಾಗ್ದಾಳಿ ನಡೆಸಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷಕ್ಕೆ ಸೇರ್ಪಡೆಗೊಳ್ಳುವವರ ಹೆಸರು ಈಗಲೇ ಹೇಳೋಕಾಗೋದಿಲ್ಲ, ಜುಲೈ 30 ರೊಳಗೆ ಉತ್ತರಕರ್ನಾಟಕ ಭಾಗದಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ‌ಮುಕ್ತಾಯ ಮಾಡುತ್ತೇವೆ. ತಾಳಿ ಕಟ್ಟದೆ ಹೆಂಡತಿ ಅಂತ ಹೇಳೋದಕ್ಕೆ ಆಗೋದಿಲ್ಲಾ, ಪ್ರಮುಖರು JDS ಸೇರಲಿದ್ದಾರೆ ಎಂದರು.

ಇನ್ನು, S.R. ಪಾಟೀಲ್​ ಜೆಡಿಎಸ್​ಗೆ ಬರುವ ವಿಚಾರ ಕುರಿತು ಪ್ರತಿಕ್ರಿಯಿಸಿ, ನಾವು ಯಾರ ಮೇಲೂ ಒತ್ತಡ ಹಾಕಲ್ಲ. ನಾವು ಯಾವತ್ತೂ ಅರೇಂಜ್ ಮ್ಯಾರೇಜ್ ಮಾಡೋರು. ಕಿಡ್ನ್ಯಾಪ್​ ಮಾಡಿ ಲವ್ ಮ್ಯಾರೇಜ್ ಮಾಡೋರಲ್ಲ. ಲವ್ ಮ್ಯಾರೇಜ್​​ನಲ್ಲಿ ನಮಗೆ ವಿಶ್ವಾಸವಿಲ್ಲ. ಹಾಗಾಗಿ ನಾವು ಯಾರೇ ಬಿಜೆಪಿ ಕಾಂಗ್ರೆಸ್​​ನವರನ್ನು ಬನ್ನಿ ಅಂತ ಹೇಳೋದಿಲ್ಲ. ಸಜ್ಜನರು ಅವರಾಗಿಯೇ ಬರ್ತಾರೆ. ದೆಹಲಿಯಲ್ಲಿ ನಮಗೆ ಯಾರು ತಂದೆ ತಾಯಿಗಳಿಲ್ಲ. ನಮಗೆ ಮಾಧ್ಯಮದವರೇ ತಂದೆತಾಯಿಗಳು. ನಮ ಬಳಿ ದುಡ್ಡಿಲ್ಲ, ನಮಗೆ ಮಾಧ್ಯಮವೇ ಆಸರೆ. ನಮ್ಮ ಮಾನಾಪಮಾನ ನಿಮ್ಮದಯ್ಯ. ಸರ್ವಸ್ವವೂ ನಿಮ್ಮ ಪಾದಕ್ಕೆರೆದು ಜಂಗಮರ ತರಹ ಹೊರಟಿದ್ದೇವೆ. ಎಲ್ಲೆಲ್ಲಿ ಭಿಕ್ಷೆ ಸಿಗುತ್ತೋ ಅಲ್ಲಿ ಕೇಳ್ತಿವಿ ಎಂದು JDS ರಾಜ್ಯಾದ್ಯಕ್ಷ ಸಿ.ಎಮ್. ಇಬ್ರಾಹಿಂ ಹೇಳಿದ್ದಾರೆ.

RELATED ARTICLES

Related Articles

TRENDING ARTICLES