Monday, December 23, 2024

ಬಾಲಿವುಡ್​ಗೆ ಶುಗರ್​ಲೆಸ್.. ಕನ್ನಡಿಗನಿಗೆ ಬಿಗ್ ಆಫರ್

ಕನ್ನಡದಲ್ಲಿ ಶುಗರ್​ ಲೆಸ್​​ ಅನ್ನೋ ವಿಬಿನ್ನ ಕಥೆಯ ಸಿನಿಮಾ ಸದ್ಯದಲ್ಲೇ ತೆರೆಗಪ್ಪಳಿಸಲಿದೆ. ಟೈಟಲ್​​ ಮಾತ್ರ ಶುಗರ್​ ಲೆಸ್​​​. ಆದ್ರೆ  ಸಿನಿಮಾದಲ್ಲಿ ಯಾವುದು ಲೆಸ್​ ಇಲ್ಲ. ಮಸ್ತ್​ ಮನರಂಜನೆಯ ರಸದೌತಣ ನೀಡೋ ಸುಳಿವು ಕೊಟ್ಟಿದೆ  ಚಿತ್ರದ ಟ್ರೈಲರ್​​​. ಈಗಾಗ್ಲೇ ಶುಗರ್​ಲೆಸ್​​ ಟ್ರೈಲರ್​ಗೆ ಮೆಚ್ಚುಗೆಯ ಸುರಿಮಳೆಯಾಗ್ತಿದೆ. ಮೊದಲ ಬಾರಿಗೆ ವಿಭಿನ್ನ ಪ್ರಯತ್ನದ ಮೂಲಕ ಚಿತ್ರರಸಿಕರ ಗಮನ ಸೆಳಿತಿದೆ ಶುಗರ್​ ಲೆಸ್​ ಟೀಮ್​. ಯೆಸ್​.. ಬಾಲಿವುಡ್​​​​ಗೂ ಹಾರಲಿರೋ ಈ ಚಿತ್ರದ ಸಮ್ತಿಂಗ್​ ಸ್ಪೆಷಾಲಿಟಿಗಳೇನು ನಾವ್​ ಹೇಳ್ತೀವಿ. ಜಸ್ಟ್​ ವಾಚ್​​​.

ಹೆಸರಿಗೆ ಮಾತ್ರ ಲೆಸ್​​​.. ಮಸ್ತ್​ ಮನರಂಜನೆಯೇ ಪ್ಲಸ್​​

ಸ್ಯಾಂಡಲ್​ವುಡ್​​ನಲ್ಲಿ ಸದ್ಯ ಶುಗರ್​ಲೆಸ್​ ಚಿತ್ರದ ಟ್ರೈಲರ್​ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಶುರುವಾಗಿದೆ. ಭಾರತೀಯ ಚಿತ್ರರಂಗದಲ್ಲೇ ಯಾರು ಕೈ ಹಾಕದೇ ಇರೋ ಶುಗರ್​ಲೆಸ್​ ಸಬ್ಜೆಕ್ಟ್​ ಮೇಲೆ ಅದ್ಭುತ ಸಿನಿಮಾ ತಯಾರಾಗಿದೆ. ಈ ಚಿತ್ರದ ಟ್ರೈಲರ್​ ಬಗ್ಗೆ ಎಲ್ಲಾ ಪಾಸಿಟಿವ್​ ಕಮೆಂಟ್ಸ್​​ ಬರ್ತಿದ್ದು, ಚಿತ್ರರಸಿಕರು ಟ್ರೈಲರ್​ಗೆ ಬಹುಪರಾಕ್​ ಎಂತಿದ್ದಾರೆ. ದಿಯಾ ಸಿನಿಮಾ ಮೂಲಕ ಸ್ಟಾರ್​​ ಆಗಿ ಮಿಂಚಿದ ಪೃಥ್ವಿ ಅಂಬಾರ್​ ಮತ್ತೊಂದು ಪ್ರಾಮಿಸಿಂಗ್​ ರೋಲ್​ನಲ್ಲಿ ಮಿಂಚಲಿದ್ದಾರೆ.

ದಿಯಾ ಖ್ಯಾತಿಯ ಪೃಥ್ವಿ ಅಂಬಾರ್​ ಶುಗರ್ ಪೇಷೆಂಟ್​ ಆಗಿ ಮಿಂಚಿದ್ರೆ, ಬಿಗ್​ ಬಾಸ್​ ಬೆಡಗಿ ಪ್ರಿಯಾಂಕ ತಿಮ್ಮೇಶ್​​ ನಾಯಕಿಯಾಗಿ ಗಮನ ಸೆಳೆದಿದ್ದಾರೆ. ಜುಲೈ 08ಕ್ಕೆ ವರ್ಲ್ಡ್​ ವೈಡ್​​ ಸೌಂಡ್​ ಮಾಡಲಿದೆ ಶುಗರ್​ ಲೆಸ್​ ಸಿನಿಮಾ. ಟ್ರೈಲರ್​ನ ಸಂಭಾಷಣೆ ಕೇಳ್ತಿದ್ರೆ ಹೊಟ್ಟೆ ಹುಣ್ಣಾಗೋ ಕಾಮಿಡಿ ಅಂತೂ ಪಕ್ಕಾ. ಇಂಪಾದ ಹಾಡುಗಳು, ಮುದ್ದಾದ ಪ್ರೇಮಕಥೆ, ಸಣ್ಣ ಪುಟ್ಟ ತರಲೆ ತಮಾಷೆ, ಲಾರ್ಜ್​​ ಎಮೋಷನ್ ಮೂಲಕ ಚಿತ್ರಪ್ರೇಮಿಗಳಿಗೆ ಮನರಂಜನೆ ನೀಡೋಕೆ ತುದಿಗಾಲಲ್ಲಿ ನಿಂತಿದೆ ಶುಗರ್​ ಲೆಸ್​ ಸಿನಿಮಾ. ಇದ್ರ ಜೊತೆಗೆ ಬಾಲಿವುಡ್​ಗೂ ರಿಮೇಕ್​ ಆಗೋದಾಗಿ ಗುಡ್​ ನ್ಯೂಸ್​ ಕೊಟ್ಟಿದೆ.

ನಿಮಗೆ ಶುಗರ್​ ಇದೆಯಾ ಅಂತಾ ಹೀರೋಗೆ ಪ್ರಶ್ನೆ

ಇತ್ತೀಚೆಗೆ ಯುವಕರು ಕೂಡ ಶುಗರ್ ಪೇಷೆಂಟ್​​ಗಳಾಗಿ ಬಳಲುತ್ತಿದ್ದಾರೆ. ಈ ಕಾಯಿಲೆಯ ಹತಾಶೆಯಲ್ಲಿ ಮದ್ವೆ ಇಲ್ಲದೆ, ಸದಾ  ಚಿಂತೆಯಲ್ಲೇ ದಿನಗಳನ್ನು ಕಳಿತಿದ್ದಾರೆ. ನೋವಿನಲ್ಲಿ ಜೀವನವೇ ಮುಳುಗಿ ಹೋಯ್ತು ಅಂದುಕೊಂಡವ್ರಿಗೆ ಈ ಸಿನಿಮಾ ಆತ್ಮಸ್ಥೈರ್ಯ ತುಂಬಲಿದೆ. ಥಿಯೇಟರ್​ನಿಂದ ಹೊರಗೆ ಹೋಗೋವಾಗ ನಗುತ್ತಾ ಬದುಕಿನ ಬಗ್ಗೆ ಹೊಸ ಭರವಸೆ ಮೂಡಿಸಲಿದೆ. ಈ ಸಿನಿಮಾದಲ್ಲಿ ಹಿರಿಯ ನಟ ದತ್ತಣ್ಣ ಕೂಡ ಅಭಿನಯಿಸಿದ್ದಾರೆ. ಈ ಸಿನಿಮಾ ಬಗ್ಗೆ ದತ್ತಣ್ಣನಿಗೆ ಹೆಚ್ಚು ಹೋಪ್​ ಇರಲಿಲ್ಲವಂತೆ. ಇದೀಗ ಟ್ರೈಲರ್​ ನೋಡಿ ಶಾಕ್​ ಆಗಿದ್ದಾರೆ.

ಶಶಿಧರ್​ ಪ್ರೊಡಕ್ಷನ್​ ಬ್ಯಾನರ್​ ಅಡಿಯಲ್ಲಿ ಸಿನಿಮಾ ಅದ್ದೂರಿಯಾಗಿ ನಿರ್ಮಾಣ ಆಗಿದೆ. ಚಿತ್ರಕ್ಕೆ ಶಶಿಧರ್​ ಆಕ್ಷನ್​ ಕಟ್​ ಹೇಳಿದ್ದು, ಸ್ವತಃ ಅವರೇ ಸಿನಿಮಾ ನಿರ್ಮಾಣ ಮಾಡಿದ್ದಾರೆ.  ದತ್ತಣ್ಣ, ನವೀನ್ ಪಾಡಿಲ್​​, ಧರ್ಮಣ್ಣ ಅವರ ಕಾಮಿಡಿ ಕಾಂಬಿನೇಷನ್​​ ಟ್ರೈಲರ್​ನಲ್ಲಿ ಎದ್ದು ಕಾಣುತ್ತೆ. ಶುಗರ್​ ಕಥೆಯ ಜೊತೆ ಕಾಮಿಡಿಯ ಹೂರಣವನ್ನು ಬೆರಸಿ ಸಿಕ್ಕಾಪಟ್ಟೆ ನಗಿಸೋ ಬಿಗ್ ಪ್ಲ್ಯಾನ್​ ಮಾಡಿಕೊಂಡಿದ್ದಾರೆ ನಿರ್ದೇಶಕ ಶಶಿಧರ್​​. ಚಿತ್ರದ ನಾಯಕನಿಗೂ ಸಿನಿಮಾ ವಿಶೇಷವಾಗಿದ್ದು, ಶಶಿಧರ್​ ಕರೆ ಮಾಡಿ ನಿಮಗೆ ಶುಗರ್​ ಇದೆಯಾ ಅಂತಾ ಕೇಳಿದ್ದನ್ನು ನೆನಪಿಸಿಕೊಂಡ್ರು.

ಈ ಸಿನಿಮಾದ ಟ್ರೈಲರ್​ ಲಾಂಚ್​ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿದ್ದು, ಈ ಕಾರ್ಯಕ್ರಮಕ್ಕೆ ನಟ  ಶ್ರೀನಗರ ಕಿಟ್ಟಿ, ನಿರ್ದೇಶಕ ಗುರುಪ್ರಸಾದ್​​ ಸೇರಿದಂತೆ ಚಿತ್ರದ ಎಲ್ಲಾ ಕಲಾವಿದರು ಭಾಗಿಯಾಗಿದ್ರು. ಈಗಾಗ್ಲೇ ಅನೂಪ್​ ಸೀಳಿನ್​ ಮ್ಯೂಸಿಕ್​ ಕಂಪೋಸಿಂಗ್​​ ಸಖತ್​ ಇಂಪ್ರೆಸ್ಸಿವ್​ ಆಗಿ ಮೂಡಿ ಬಂದಿದೆ. ಲಾವಿಥ್​ ಕ್ಯಾಮರಾ ಕಣ್ಣಲ್ಲಿ ಪ್ರತಿ ಫ್ರೇಮು ಸುಂದರವಾಗಿ ಕಾಣ್ತಿದೆ. ಒಟ್ಟಾರೆ ಜುಲೈ08ಕ್ಕೆ ಶುಗರ್​ಲೆಸ್​ ಸಿನಿಮಾ  ತೆರೆಯ ಮೇಲೆ ಭರ್ಜರಿಯಾಗಿ ಸದ್ದು ಮಾಡೋ ಸೂಚನೆ ಕೊಟ್ಟಿದೆ. ಎನಿವೇ ಶುಗರ್​ಲೆಸ್​ ಟೀಮ್​ಗೆ ಅಡ್ವಾನ್ಸ್​ ಆಗಿ ಆಲ್​ ದಿ ಬೆಸ್ಟ್​ ಹೇಳೋಣ.

ರಾಕೇಶ್​​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES