Wednesday, January 22, 2025

RSS & ಹೆಚ್ಡಿಕೆಗೆ ನನ್ನ ಕಂಡರೆ ಭಯ : ಸಿದ್ದರಾಮಯ್ಯ

ಕೊಪ್ಪಳ : ಆರ್‌ಎಸ್‌ಎಸ್​​ಗೆ ನನ್ನ ಕಂಡರೆ ಭಯ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ನನ್ನ ಕಂಡರೆ ಭಯ. ಅದಕ್ಕೆ ಅವರು ನನ್ನ ಬಗ್ಗೆ ಪದೇ ಪದೇ ಟಾರ್ಗೆಟ್ ಮಾಡಿ ಮಾತಾಡುತ್ತಾರೆ ಎಂದು ಕೊಪ್ಪಳದ ಬಸಾಪೂರ ವಿಮಾನ ನಿಲ್ದಾಣದಲ್ಲಿ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಹೇಳಿದರು.

ಕುಮಾರಸ್ವಾಮಿ ‌ಸಿಎಂ ಆಗ್ತಿನಿ ಎಂಬ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಜನ ಆಶೀರ್ವಾದ ಮಾಡಬೇಕು. ನಾವೇ ಹೋಗಿ ಕುಳಿತುಕೊಳ್ಳಲು ಆಗುತ್ತಾ ? ಶಿಕ್ಷಕರ ಚುನಾವಣೆಯಲ್ಲಿ ಜೆಡಿಎಸ್ ಯಾವ ಸ್ಥಾನದಲ್ಲಿದೆ. ಅಂಥ ಪಾರ್ಟಿ ಅಧಿಕಾರಕ್ಕೆ ಬರುತ್ತಾ ಎಂದು ಪ್ರಶ್ನೆ ಮಾಡಿದ್ದಾರೆ.

ಇನ್ನು ಮಹಾರಾಷ್ಟ್ರದಲ್ಲಿ ನಾವು ಅಧಿಕಾರ ಕಳೆದುಕೊಂಡಿಲ್ಲ. ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುವಂತೆ ಬಿಜೆಪಿಗರು ಮಾಡುತ್ತಿದ್ದಾರೆ. ಆಪರೇಷನ್ ಕಮಲ ಮಾಡಿ ಮಹಾರಾಷ್ಟ್ರ ಸರ್ಕಾರ ಬೀಳಿಸುತ್ತಿದ್ದಾರೆ. ಬಿಜೆಪಿಗರು ಆಪರೇಷನ್ ಕಮಲ ಮಾಡ್ತಿರೋದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಇವರು ತುಂಬಾ ಪ್ರಜಾಪ್ರಭುತ್ವದ ಬಗ್ಗೆ ಮಾತಾಡ್ತಾರೆ. ಇಂದಿರಾಗಾಂಧಿ ತುರ್ತು ಪರಿಸ್ಥಿತಿ ತಂದರು, ಕಪ್ಪು ಚುಕ್ಕೆ ಅಂತಾರೆ ಆದ್ರೆ, ಇವರು ಮಾಡ್ತಿರೋದು ಏನು? ಮಧ್ಯಪ್ರದೇಶದ ಸರ್ಕಾರ ಕಿತ್ತು ಹಾಕಿದ್ದು ಯಾರು? ಕರ್ನಾಟಕದ ಸಮ್ಮಿಶ್ರ ಸರ್ಕಾರ ಕಿತ್ತಾಕಿದ್ದು ಯಾರು? ಪಾಪದ ಹಣ ಅವರ‌ ಬಳಿ‌ ಇದೆ,‌ಲೂಟಿ ಹೊಡೆದ ಹಣ ಇದೆ. ಒಬ್ಬೊಬ್ಬ ಶಾಕರಿಗೆ 25- 30 ಕೋಟಿ ಕೊಟ್ಟು ಖರೀದಿ ಮಾಡ್ತಿದ್ದಾರೆ ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.

ಮಹಾರಾಷ್ಟ್ರದಲ್ಲಿ ಶಿವಸೇನೆ ಶಾಸಕರ ಬಂಡಾಯ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದೆಲ್ಲ ಸುಳ್ಳು, ಶಾಸಕರೆಲ್ಲ ಸುಮ್ಮನೇ ಬರ್ತಾರಾ? ಕೇಂದ್ರದಲ್ಲಿ ‌ಅಧಿಕಾರ ಇದೆ, ದುಡ್ಡಿದೆ ಅದಕ್ಕಾಗಿ ಎಲ್ಲ ಸರ್ಕಾರ ಬೀಳಿಸುತ್ತಿದ್ದಾರೆ.ಅಲ್ಲದೇ ಅಧಿಕಾರ ಇದೆ ಎಂಬ ದರ್ಪದಿಂದ ಎಲ್ಲಾ ಕಡೆ ಕಾಂಗ್ರೆಸ್ ಸರ್ಕಾರ ಕಿತ್ತು ಹಾಕ್ತಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿಕಾಡಿದರು.

RELATED ARTICLES

Related Articles

TRENDING ARTICLES