Monday, December 23, 2024

ಹಾಡಹಗಲೇ ರೌಡಿಶೀಟರ್‌ನ​​ ಬರ್ಬರ ಹತ್ಯೆ

ಮಂಡ್ಯ : ಆತ ರೌಡಿ ಶೀಟರ್ ಆಗಿದ್ದ ಈಗಾಗಲೇ ಕೊಲೆ ಕೊಲೆ ಬೆದರಿಕೆ ಸೇರಿದಂತೆ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಜೈಲು‌ಸೇರಿದ್ದ. ಜೈಲಿನಿಂದ ಹೊರ ಬಂದ ನಂತರ ಎಳನೀರು ವ್ಯಾಪಾರ ಮಾಡಿಕೊಂಡು ಮೈಸೂರಿನಲ್ಲಿ ನೆಲೆಸಿದ್ದ, ಮೈಸೂರಿನಲ್ಲಿ ವಾಸ ಮಾಡುತ್ತಿದ್ದರೂ ಕೆ ಆರ್ ಪೇಟೆಯಲ್ಲಿರೊ ತನ್ನ ತಂದೆಯ ಮನೆಗೆ ಬಂದು ಹೋಗುತ್ತಿದ್ದ. ಹೀಗೆ ಕಳೆದ ಎರಡು ದಿನಗಳ ಹಿಂದೆಯಷ್ಟೆ ಕೆ ಆರ್ ಪೇಟೆಗೆ ಬಂದಿದ್ದ ಆತ ತಾನು ಆರಾಧಿಸುತ್ತಿದ್ದ ಶಿವನ ದೇವಾಲಯದಲ್ಲೇ ಬರ್ಬರವಾಗಿ ಕೊಲೆಯಾಗಿ ಹೋಗಿದ್ದ. ಆತನ ವಿರುದ್ದ ಸೇಡಿಗಾಗಿ ಹಾತೊರೆಯುತ್ತಿದ್ದವರು ಹೊಂಚು ಹಾಕಿ ಆತ ದೇವಸ್ಥಾನಕ್ಕೆ ಬರುವುದನ್ನೇ ಕಾದು ಕುಳಿತು ಹೊಡೆದುರುಳಿಸಿದ್ದರು. ಈ ವರ್ಷ ಮದುವೆಯಾಗಬೇಕೆಂದುಕೊಂಡಿದ್ದವನು ಮಸಣ ಸೇರಿದ್ದ.

ಮಂಡ್ಯ ಜಿಲ್ಲೆ ಕೆ ಆರ್ ಪೇಟೆ ಪಟ್ಟಣದ ಜನ ಇಂದು ಬೆಳಂ ಬೆಳಗೆ ಬೆಚ್ಚಿ ಬಿದ್ದಿದ್ದರು. ಹಾಡ ಹಗಲಲ್ಲೇ ಕೆ ಆರ್ ಪೇಟೆ ಪಟ್ಟಣದಲ್ಲೇ ಇದ್ದ ಈಶ್ವರ ದೇವಾಲಯದಲ್ಲೇ ರೌಡಿ ಶೀಟರ್ ಆಗಿದ್ದ ಅರುಣಾ ಅಲಿಯಾಸ್ ಅಲ್ಲು. ಕೆ ಆರ್ ಪೇಟೆಯ ಬಸವನ ಗುಡಿ‌ನಿವಾಸಿಗಳಾದ ಹನುಮಂತಪ್ಪ ಹಾಗೂ ನೇತ್ರಾವತಿ ದಂಪತಿಗಳ ಎರಡನೇ ಮಗನಾಗಿದ್ದ ಅರುಣ ಮೈಸೂರಿನಲ್ಲಿ ಎಳನೀರು ವ್ಯಾಪಾರ ಮಾಡಿಕೊಂಡು ಕಳೆದ ಹಲವು ವರ್ಷಗಳಿಂದ ಜೀವನ ಸಾಗಿಸುತ್ತಿದ್ದ. ಮೈಸೂರಿನಲ್ಲಿದ್ದರೂ ಆಗಾಗ್ಗೆ ಕೆ ಆರ್ ಪೇಟೆಯಲ್ಲಿದ್ದ ತನ್ನ ತಂದೆಯ ಮನೆಗೆ ಬಂದು ಹೋಗುತ್ತಿದ್ದ. ಹೀಗಾಗಿಯೇ ಕಳೆದ ಎರಡು ದಿನಗಳ ಹಿಂದಷ್ಡೆ ಬಂದಿದ್ದ. ಆತ ಕೆ ಆರ್ ಪೇಟೆಗೆ ಬಂದಾಗಲೆಲ್ಲ ಪಟ್ಟಣದಲ್ಲೇ ಇರುವ ಶಿವನ ದೇವಾಲಯ ಮಲ್ಲೇಶ್ವರ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಬರುತ್ತಿದ್ದ. ಅದೇ ರೀತಿಯಲ್ಲಿ ಇಂದು ಬೆಳಗೆ 10 ಗಂಟೆ ಸುಮಾರಿಗೆ ದೇವಸ್ಥಾನಕ್ಕೆ ಹೋದವನನ್ನ ಹೊಂಚು ಹಾಕಿ ಕುಳಿತಿದ್ದ ಐದು ಜನರ ತಂಡ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿತ್ತು. ಈ ವರ್ಷ ಮದುವೆ ಆಗಬೇಕೆಂದುಕೊಂಡು ಕನಸು ಕಂಡಿದ್ದ ಅರುಣಾ ಅಲ್ಲಿ ಬರ್ಬರವಾಗಿ ಕೊಲೆಯಾಗಿ ಹೋಗಿದ್ದ.

ಹೆತ್ತವರಿಗೆ ಒಳ್ಳೆ ಮಗನಾಗಿದ್ದರೆ ಅರುಣಾ ಇಂದು ಹೀಗೆ ಬರ್ಬರವಾಗಿ ಕೊಲೆಯಾಗುತ್ತಿರಲಿಲ್ಲ. ಓದಿನಲ್ಲಿ ಅಷ್ಟೇನು ಆಸಕ್ತಿ ಇಲ್ಲದ ಅರುಣ ಅಟ್ ಲೀಸ್ಟ್ ಕೆ ಆರ್ ಪೇಟೆಯಲ್ಲಿದ್ದ ತಮ್ಮ ತಂದೆಗೆ ಸೇರಿದ್ದ ಒಂದೂವರೆ ಎಕರೆ ಜಮೀನನ್ನದಾದರೂ ವ್ಯವಸಾಯ ಮಾಡಿಕೊಂಡಿರ ಬಹುದಿತ್ತು. ಆದರೆ ಆತ ಜೀವನಕ್ಕೆ ದಾರಿಕಂಡು ಕೊಂಡಿದ್ದು ಮಾತ್ರ ರೌಡಿಸಂ ಕೊಲೆ ಮಾಡೋದು ಕೊಲೆ ಬೆದರಿಕೆ ಹಾಕೋದೇ ಅತನ ಕಾಯಕವಾಗಿ ಹೋಗಿತ್ತು. ಹೀಗಾಗಿಯೇ ರೌಡಿ ಶೀಟರ್ ಆಗಿದ್ದ ಆತನ ಮೇಲೆ ಕೆ ಆರ್ ಪೇಟೆ ಠಾಣೆಯಲ್ಲೇ ಕೊಲೆ, ಅಪಹರಣ, ಕೊಲೆ ಬೆದರಿಕೆ, ಹಫ್ತಾ ವಸೂಲಿ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿದ್ದವು.

ಜೈಲಿನಲ್ಲಿದ್ದಾಗಲೇ ಅಧಿಕಾರಿ ಸಹಾಯ ಪಡೆದು ಮಾರ್ವಾಡಿ ಕಿಡ್ನಾಪ್ ಮಾಡಿದ್ದ ಆರೋಪವೂ ಅರುಣ್ ಮೇಲಿತ್ತು. ಹೀಗಾಗಿಯೇ ಕೆ ಆರ್ ಪೇಟೆ ಪೊಲೀಸರು ಆತನನ್ನ ಗಡಿಪಾರು ಮಾಡಿದ್ದರು. ಕೆ ಆರ್ ಪೇಟೆಯಿಂದ ಗಡಿಪಾರಾಗಿ ಮೈಸೂರು ಸೇರಿದ್ದರೂ ಅರುಣಾ ಕೆ ಆರ್ ಪೇಟೆಗೆ ಆಗಾಗ್ಗೆ ಬಂದು ಹೋಗುತ್ತಿದ್ದ. ಹೀಗೆ ಆತನ ಮೇಲೆ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದ ತಂಡವೇ ಹಳೆ ನೈಷಮ್ಯದ ಹಿನ್ನಲೆಯಲ್ಲಿ ಆತನನ್ನ ಹೊಡೆದು ಹಾಕಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

ಹೀಗಾಗಿಯೇ ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ಮುಂದುವರಿಸಿದ್ದಾರೆ. ಈ ಸಂಬಂಧ ಮಾತನಾಡಿರೊ ಮಂಡ್ಯ ಎಸ್ ಪಿ ಯತೀಶ್ ದೇವಸ್ಥಾನಕ್ಕೆ ಹೋಗಿದ್ದ ಸಂದರ್ಭದಲ್ಲಿ ಅರುಣ್ ಹತ್ಯೆ ನಡೆದಿದೆ. ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಯುತ್ತಿದ್ದು ತನಿಖೆಯ ನಂತರವಷ್ಟೆ ಕೊಲೆಗೆ ನಿಜವಾದ ಕಾರಣ ತಿಳಿದು ಬರಲಿದೆ ಎಂದಿದ್ದಾರೆ.

ಎರಡನೇ ದರ್ಜೆ ರಾಜಕಾರಣಿಗಳಿಂದಲೂ ಹಫ್ತಾ ವಸೂಲಿ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗವಹಿಸಿ ಜೈಲು ಪಾಲಾಗಿದ್ದ ಅರುಣ್ ಅಲ್ಲಿಂದ ಬಂದ ನಂತರ ಮದುವೆಯಾಗಿ ಬದುಕು ಸಾಗಿಸೊ ಯೋಚನೆಯಲ್ಲಿದ್ದ ಆದರೆ ಅಷ್ಟರಲ್ಲಾಗಲೇ ತಾನೇ ಆರಾಧಿಸುತ್ತಿದ್ದ ದೇವರ ಸನ್ನಿದಾನದಲ್ಲೇ ಕೊಲೆಯಾಗಿ ಹೋಗಿದ್ದ ಎಲ್ಲಾ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರೊ ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ಮುಂದುವರೆಸಿದ್ದು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

RELATED ARTICLES

Related Articles

TRENDING ARTICLES