ದಾವಣಿಗೆರೆ : ರೊಚ್ಚಿಗೆದ್ದ ಗ್ರಾಮಸ್ಥರಿಂದ ಕಲ್ಲಿನ ಕಂಬ ಪುಡಿ ಪುಡಿ, ಒತ್ತುವರಿದಾರನ ವಿರುದ್ದ ಕೆಂಡಾಮಂಡಲ, ವಾದ ವಿವಾದ, ಸ್ಥಳಕ್ಕೆ ದೌಡಾಯಿಸಿದ ಪಾಲಿಕೆ, ಸ್ಮಾರ್ಟ್ ಸಿಟಿ ಅಧಿಕಾರಿಗಳು. ಈ ಎಲ್ಲಾ ಆಕ್ರೋಶದ ದೃಶ್ಯಾವಳಿಗಳು ಕಂಡು ಬಂದಿದ್ದು, ಬೆಣ್ಣೆನಗರಿ ದಾವಣಗೆರೆಯಲ್ಲಿ, ಮಳೆ ಬಂದರೆ ತುಂಬಿ ತುಳುಕುತ್ತಿದ್ದ ನಗರದ ಹಳೆ ಕುಂದುವಾಡ ಮುಖ್ಯರಸ್ತೆಯಲ್ಲಿ ರಸ್ತೆ ಕಾಮಗಾರಿ ಶುರು ಮಾಡಿತ್ತು. ಆಗ ಅಕ್ಕಪಕ್ಕದ ಸೈಟ್ ನವರು ರಸ್ತೆಯೇ ನಂದೆಂದು ಕಿತಾಪತಿ ಮಾಡಿದ್ರು. ಪಕ್ಕದಲ್ಲಿದ್ದ ಟ್ರ್ಯಾಕ್ಟರ್ ಶೋರೂಂ ಮಾಲೀಕ ರಸ್ತೆ ನಂದು ಎಂದು ರಾತ್ರೋರಾತ್ರಿ ಕಲ್ಲಿನ ಕಂಬ ನೆಟ್ಟು ಬಿಟ್ಟಿದ್ದ, ಇದ್ರಿಂದ ಮಹಿಳೆಯರು, ಗರ್ಭಿಣೆಯರು, ವಿದ್ಯಾರ್ಥಿಗಳು, ಜನರು ರಸ್ತೆ ದಾಟಲು ಪರದಾಟ ಅನುಭವಿಸಿದ್ರು. ಪರಿಸ್ಥಿತಿ ನೋಡಿ ನೋಡಿ ಸಾಕಾಗಿ ಜನರ ತಾಳ್ಮೆ ಕಟ್ಟೆಯೂ ಒಡೆದಿತ್ತು. ಇದ್ರಿಂದ ರೊಚ್ಚಿಗೆದ್ದಿದ್ದ ನೂರಾರು ಜನ್ರು, ಬೆಳ್ಳಂಬೆಳಗ್ಗೆ ಆಗಮಿಸಿ ಕಲ್ಲಿನ ಕಂಬ, ತಂತಿ ಬೇಲಿ ಕಿತ್ತೊಗೆದು ರೋಷಾವೇಶ ಪ್ರದರ್ಶಿಸಿದ್ರು.
ಪುಕ್ಸಟ್ಟೆ ಜಾಗ ಸಿಗುತ್ತೆ ಅಂದ್ರೆ ನುಂಗುಬಾಕರು ರಸ್ತೆಯನ್ನು ಬಿಡೋದಿಲ್ಲ ಎನ್ನುವುದಕ್ಕೆ ಈ ಪ್ರಕರಣವೇ ಸಾಕ್ಷಿ. ನಾಲ್ಕು ದಿಕ್ಕಿನಿಂದಲೂ 80 ಅಡಿ ಇರುವ ಈ ರಸ್ತೆಯನ್ನು ಅರ್ಧಕ್ಕರ್ಧ ನುಂಗುಬಾಕರು ಗುಳುಂ ಮಾಡಿಬಿಟ್ಟಿದ್ದಾರೆ. ರೊಚ್ಚಿಗೆದ್ದ ಗ್ರಾಮಸ್ಥರು ರಸ್ತೆ ಬಂದ್ ಆಗಿದ್ರೂ ಕ್ರಮ ಕೈಗೊಳ್ಳದೆ ನಿದ್ರೆಯಲ್ಲಿದ್ದ ಪಾಲಿಕೆಗೆ ಮುತ್ತಿಗೆ ಹಾಕಿ ಬಿಸಿ ಮುಟ್ಟಿಸಿದ್ರು. ಇನ್ನೂ ಪವರ್ ಟಿವಿ ಸುದ್ದಿ ಭಿತ್ತರಿಸಿದ್ದೇ ತಡ ಪಾಲಿಕೆ, ಸ್ಮಾರ್ಟ್ ಸಿಟಿ ಅಧಿಕಾರಿ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ, ಗ್ರಾಮಸ್ಥರ ಸಮ್ಮುಖದಲ್ಲೇ ಕೆಲಸ ಆರಂಭಿಸಿದ್ದಾರೆ.
ಅದೇನೆ ಇರಲಿ, ಜಾಗ ಹದ್ದುಬಸ್ತು ಆದ ಮೇಲೆ ಜಾಗ ಯಾರದ್ದು ಎಂದು ತಿಳಿಯುತ್ತೆ.ಅದಕ್ಕೂ ಮುಂಚೆ ರಸ್ತೆಯೇ ನಂದು ಎಂದು ಮೊಂಡುತನ ಪ್ರದರ್ಶನ ಮಾಡಿ ರಸ್ತೆಗೆ ಬೇಲಿ ಹಾಕಿ ಜನರಿಗೆ ತೊಂದರೆ ಕೊಟ್ಟಿದ್ದು ಸರಿಯಲ್ಲ. ಇದ್ರಿಂದಲೇ ರೊಚ್ಚಿಗೆದ್ದ ಗ್ರಾಮಸ್ಥರು ಸ್ವತಹ ರಸ್ತೆ ತೆರವುಗೊಳಿಸಿಕೊಂಡು ಸಂಚಾರ ಮಾಡಿ ಸಂಭ್ರಮ ಪಟ್ಟಿದ್ದು ಒಗ್ಗಟ್ಟಿಗೆ ಬಲವಿದೆ ಎಂದು ತೋರಿಸಿಕೊಟ್ಟಂತಾಗಿದೆ.
ಕ್ಯಾಮರಾಮನ್ ಮದನ್ ಜೊತೆ ಮಧು ನಾಗರಾಜ್ ಪವರ್ ಟಿವಿ ದಾವಣಗೆರೆ.