ಪ್ರಧಾನಿ ನರೇಂದ್ರ ಮೋದಿ ಎರಡು ದಿನದ ಜರ್ಮನಿ ಪ್ರವಾಸ ಹಲವು ವಿಶೇಷ ಘಟನೆಗಳಿಗೆ ಸಾಕ್ಷಿಯಾಗಿದೆ. ಜಿ7 ಶೃಂಗಸಭೆಯಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿಯನ್ನು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹುಡುಕಿಕೊಂಡು ಬಂದು ಮಾತನಾಡಿಸಿದ್ದು ಎಲ್ಲರ ಗಮನ ಸಳೆಯಿತು.
ಜಿ7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಆಹಾರ ಭದ್ರತೆ, ಭಯೋತ್ಪಾದನೆ ನಿಗ್ರಹ, ಪರಿಸರ ಮತ್ತು ಪ್ರಜಾಪ್ರಭುತ್ವ ಕುರಿತು ಮಾತನಾಡಿದ್ರು. ಆ ಸಭೆಗೂ ಮುನ್ನ ಆಹ್ವಾನಿತ ದೇಶದ ನಾಯಕರ ಜೊತೆ ಪ್ರಧಾನಿ ಮೋದಿ ಅನೌಪಚಾರಿಕ ಮಾತುಕತೆ ನಡೆಸಿದ್ದರು. ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಜೊತೆ ಮಾತನಾಡುತ್ತಿದ್ದ ವೇಳೆ, ಜೋ ಬೈಡೆನ್ ಮೋದಿಯನ್ನು ಹುಡುಕುತ್ತಾ ಬಂದಿದ್ದಾರೆ.
ಮೋದಿ ಹಾಗೂ ಜಸ್ಟಿನ ಟ್ರುಡೋ ಕೈಲುಕುತ್ತಾ ಮಾತನಾಡುತ್ತಿದ್ದಂತೆ ಹಿಂಬಾಗದಿಂದ ಬಂದ ಜೋ ಬೈಡೆನ್ ಮೋದಿಯ ಹೆಗಲು ತಟ್ಟಿ ಕರೆದಿದ್ದಾರೆ. ಅತ್ತ ಜೈ ಬೈಡೆನ್ ನೋಡಿ ಮೋದಿ ಅತೀವ ಸಂತದಿಂದ ಕೈಕುಲುಕಿ ಮಾತನಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭಾರತ ಬದಲಾಗಿದೆ. ಇದೀಗ ಅಮೆರಿಕ ಅಧ್ಯಕ್ಷರೇ ಪ್ರಧಾನಿ ಮೋದಿಯನ್ನು ಹುಡುಕಿಕೊಂಡು ಬಂದು ಮಾತನಾಡಿಸುವ ಮಟ್ಟಿಗೆ ಭಾರತ ಬದಲಾಗಿದೆ ಎಂದು ಹಲವು ಪ್ರತಿಕ್ರಿಯೆಸಿದ್ದಾರೆ. ಇನ್ನು ಕೆಲವರು ಭಾರತ ವಿಶ್ವ ಗುರು ಎಂದು ಕಮೆಂಟ್ ಮಾಡಿದ್ದಾರೆ.