Monday, December 23, 2024

ಹೊಂಬಾಳೆ ಸಂಸ್ಥೆಯ ಮೂಲಕ ಕನ್ನಡಕ್ಕೆ ಬರುತ್ತಾರಾ ಮಾನುಷಿ ಚಿಲ್ಲರ್..?

ಕನ್ನಡ ಸಿನಿಮಾಗಳನ್ನ ಇಂಟರ್​ನ್ಯಾಷನಲ್ ಲೆವೆಲ್​ಗೆ ಕೊಂಡೊಯ್ಯುತ್ತಿರೋ ಹೊಂಬಾಳೆ ಫಿಲಂಸ್, ಪರಭಾಷಾ ಸ್ಟಾರ್​ಗಳನ್ನೂ ನಮ್ಮೂರಿಗೆ ಕರೆತರುತ್ತಿದ್ದಾರೆ. ಇದೀಗ ವಿಶ್ವಸುಂದರಿ ಮಾನುಷಿ ಚಿಲ್ಲರ್ ನಮ್ಮ ಸಿಲಿಕಾನ್ ಸಿಟಿಯಲ್ಲಿರೋ ಹೊಂಬಾಳೆ ಆಫೀಸ್​ಗೆ ಬಂದು ಹೋಗಿದ್ದಾರೆ. ಏನು ಇದ್ರ ಇನ್​ಸೈಡ್ ಸ್ಟೋರಿ ಅಂತೀರಾ..? ಈ ಸ್ಟೋರಿ ಓದಿ.

ಬಿಟೌನ್ ಹಾಟ್ ಬ್ಯೂಟಿಗೆ ವಿಜಯ್ ಕಿರಗಂದೂರ್ ಕಾರ್ಪೆಟ್

ಹೊಂಬಾಳೆ ಫಿಲಂಸ್ ಸದ್ಯ ಭಾರತೀಯ ಚಿತ್ರರಂಗದಲ್ಲಿ ಹೆಚ್ಚು ಚಾಲ್ತಿಯಲ್ಲಿರೋ ಒನ್ ಆಫ್ ದಿ ಬೆಸ್ಟ್ ಫಿಲ್ಮ್ ಪ್ರೊಡಕ್ಷನ್ ಕಂಪೆನಿ. ಕನ್ನಡ ಚಿತ್ರರಂಗದ ಸ್ಟ್ಯಾಂಡರ್ಡ್ಸ್ ಜೊತೆ ಸೌತ್ ಸಿನಿದುನಿಯಾ ಹಾಗೂ ಭಾರತೀಯ ಚಿತ್ರರಂಗದ ಸ್ಟ್ಯಾಂಡರ್ಡ್ಸ್ ಕೂಡ ಸೆಟ್ ಮಾಡಿದ ಬ್ಯಾನರ್ ಅಂದ್ರೆ ಅಚ್ಚರಿಯಿಲ್ಲ. ಹೌದು.. ಕೆಜಿಎಫ್ ಅನ್ನೋ ಫ್ರಾಂಚೈಸ್ ಸಿನಿಮಾಗಳಿಂದ ಇಡೀ ವಿಶ್ವವೇ ಕನ್ನಡದತ್ತ ತಿರುಗಿ ನೋಡಿದಂತೆ ಮಾಡಿದ ಗರಿಮೆ ಹೊಂಬಾಳೆ ಫಿಲಂಸ್​ನ ವಿಜಯ್ ಕಿರಗಂದೂರು ಅವ್ರಿಗೆ ಸಲ್ಲುತ್ತೆ.

ಕನ್ನಡ ಸಿನಿಮಾಗಳನ್ನ ನ್ಯಾಷನಲ್, ಇಂಟರ್​ನ್ಯಾಷನಲ್​ ಲೆವೆಲ್​ಗೆ ತೆಗೆದುಕೊಂಡು ಹೋಗುವುದರ ಜೊತೆಯಲ್ಲಿ ಕನ್ನಡಕ್ಕೆ ಪರಭಾಷಾ ಸ್ಟಾರ್​ಗಳನ್ನೂ ತರ್ತಿದೆ ಈ ಬಿಗ್ ಬ್ಯಾನರ್. ಅದ್ರ ಅರ್ಥ ಸಿನಿಮಾ ಅನ್ನೋದು ಭಾಷೆ, ಗಡಿಗಳನ್ನ ದಾಟಿದ ಕಲೆ ಅನ್ನೋದನ್ನ ಸಾಬೀತು ಮಾಡೋದು. ಟ್ಯಾಲೆಂಟ್ಸ್​​ಗೆ ಒಂದೊಳ್ಳೆ ವೇದಿಕೆ ಮಾಡಿಕೊಡುವುದು. ಹಾಗಾಗಿಯೇ ಪೃಥ್ವಿರಾಜ್ ಸುಕುಮಾರ್, ಸುಧಾ ಕೊಂಗಾರ, ಪ್ರಭಾಸ್​​, ಶ್ರುತಿ ಹಾಸನ್​ರಂತಹ ಅತ್ಯದ್ಭುತ ಪ್ರತಿಭೆಗಳಿಗೆ ಅವಕಾಶಗಳನ್ನ ಕಲ್ಪಿಸಿದ್ದಾರೆ.

ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟಿರೋ ಹೊಂಬಾಳೆ ಫಿಲಂಸ್, ವಿಶ್ವಸುಂದರಿ ಮಾನುಷಿ ಚಿಲ್ಲರ್​ಗೆ ಮಣೆ ಹಾಕಿದೆ. ಬೆಂಗಳೂರಿಗೆ ಬಂದಿದ್ದ ಬಾಲಿವುಡ್ ಬ್ಯೂಟಿ ಮಾನುಷಿ, ಹೊಂಬಾಳೆ ಫಿಲಂಸ್​ ಕಚೇರಿಗೆ ಭೇಟಿ ನೀಡಿ, ವಿಜಯ್ ಕಿರಗಂದೂರ್ ಜೊತೆ ಸಿನಿಮಾ ಸೇರಿದಂತೆ ಸಾಕಷ್ಟು ವಿಚಾರಗಳನ್ನು ಚರ್ಚಿಸಿ ಹೋಗಿದ್ದಾರೆ. ಇದನ್ನ ಕಂಡು, ಸದ್ಯದಲ್ಲೇ ಚಿಲ್ಲರ್ ಕನ್ನಡ ಬ್ಯಾನರ್ ಜೊತೆ ಕೆಲಸ ಮಾಡಲಿದ್ದಾರೆ ಅನ್ನೋ ಟಾಕ್ಸ್ ನಡೀತಿದೆ.

ಅಂದಹಾಗೆ ಮಾನುಷಿ ಚಿಲ್ಲರ್ 2017ರ ವಿಶ್ವ ಸುಂದರಿ. ಹರಿಯಾಣದ ರೋಹ್ತಕ್​ನ ಬ್ಯೂಟಿ. ಇಡೀ ವಿಶ್ವವೇ ಈಕೆಯ ಬೆಡಗು ಬಿನ್ನಾಣಕ್ಕೆ ತಲೆದೂಗಿತ್ತು. ಇಲ್ಲಿಯವರೆಗೆ ವಿಶ್ವ ಸುಂದರಿ ಗರಿಯನ್ನ ಪಡೆದ ಆರೇ ಆರು ಮಂದಿ ಇಂಡಿಯನ್ ಚೆಲುವೆಯರಲ್ಲಿ ಈಕೆ ಕೂಡ ಒಬ್ರು.

ಅಕ್ಷಯ್ ಕುಮಾರ್ ಜೊತೆ ಸಾಮ್ರಾಟ್ ಪೃಥ್ವಿರಾಜ್ ಚಿತ್ರದಿಂದ ಬಣ್ಣದಲೋಕಕ್ಕೆ ಕಾಲಿಟ್ಟಿರೋ ಮಾನುಷಿ, ದಿ ಗ್ರೇಟ್ ಇಂಡಿಯನ್ ಫ್ಯಾಮಿಲಿ ಅನ್ನೋ ಚಿತ್ರ ಮಾಡ್ತಿದ್ದಾರೆ. ಟಿವಿ ಶೋಗಳಲ್ಲೂ ಕಾಣಿಸಿಕೊಂಡಿರೋ ಮಾನುಷಿ, ಇದೀಗ ಟಾಕ್ ಆಫ್ ದಿ ಟೌನ್ ಆಗಿರೋ ಹೊಂಬಾಳೆ ಆಫೀಸ್​ಗೆ ಕಾಲಿಟ್ಟಿರೋದು ಗುಸು ಗುಸು ಸುದ್ದಿಗಳು ಹರಡಲು ಕಾರಣವಾಗಿದೆ.

ಆದ್ರೆ ಅದ್ರ ಅಸಲಿ ಮ್ಯಾಟರ್ ಬೇರೇನೇ ಇದೆ. ಮಾನುಷಿ ಚಿಲ್ಲರ್ ಫ್ರೆಂಡ್ ಒಬ್ರು ನಮ್ಮ ಬೆಂಗಳೂರಿನ ಬಿಗ್ ಬ್ಯುಸಿನೆಸ್​ಮ್ಯಾನ್ ಅಂತೆ. ಅವ್ರನ್ನ ಭೇಟಿ ಆಗಲು ಬಂದಿದ್ದ ಮಾನುಷಿ, ವಿಜಯ್ ಕಿರಗಂದೂರ್​ಗೂ ಪರಿಚಯ ಆಗಿದ್ದಾರೆ. ಹಾಗಾಗಿ ಕಚೇರಿಗೊಮ್ಮೆ ಭೇಟಿ ನೀಡಿ, ಕುಶಲೋಪಹರಿ ಹಂಚಿಕೊಂಡಿದ್ದಾರೆ. ಅಲ್ಲದೆ, ಆಕೆಯ ಗುರಿ ಸಿನಿಮಾನೇ ಆಗಿರೋದ್ರಿಂದ, ಹೊಂಬಾಳೆ ಕೂಡ ಸಾಲು ಸಾಲು ಪ್ಯಾನ್ ಇಂಡಿಯಾ ಚಿತ್ರಗಳನ್ನ ಮಾಡ್ತಿದ್ದು, ಮುಂದಿನ ದಿನಗಳಲ್ಲಿ ಆಕೆ ಹೊಂಬಾಳೆ ಜೊತೆ ಕೆಲಸ ಮಾಡಿದ್ರೂ ಅಚ್ಚರಿಯಿಲ್ಲ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES