Sunday, December 22, 2024

ಎಸ್​​.ಎಲ್.​ ಭೈರಪ್ಪ ಅವ್ರ ಮಾತುಗಳಲ್ಲಿ ರಾಜಕೀಯ ದುರ್ನಾತ: ಹೆಚ್. ವಿಶ್ವನಾಥ್

ಮೈಸೂರು: ಎಸ್.ಎಲ್. ಭೈರಪ್ಪ ಅವರು ದೊಡ್ಡ ಸಾಹಿತಿ. ಆದರೆ ಅವರು ಬಿಜೆಪಿ ವಕ್ತಾರರ ರೀತಿ ಮಾತಾಡುತ್ತಿದ್ದಾರೆ. ಆದರೆ, ಅವರ ಮಾತುಗಳಲ್ಲಿ ರಾಜಕೀಯ ದುರ್ನಾತ ಬರುತ್ತಿದೆ ಎಂದು ವಿಧಾನ ಪರಿಷತ್ ಬಿಜೆಪಿ ಸದಸ್ಯ ಹೆಚ್. ವಿಶ್ವನಾಥ್ ಹೇಳಿದರು.

ಪಠ್ಯ ಪರಿಷ್ಕರಣೆ ಪರ ಹಿರಿಯ ಸಾಹಿತಿ ಡಾ.ಎಸ್.ಎಲ್. ಭೈರಪ್ಪ ಬ್ಯಾಟಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು,
ಹಿರಿಯ ಸಾಹಿತಿಗಳು ಒಂದು ಪಕ್ಷದ ವಕ್ತಾರರ ರೀತಿ ಮಾತಾಡುವುದು ಅವರಿಗೆ ಶೋಭೆ ತರಲ್ಲ. ಅಗ್ನಿಪಥ್ ಅನ್ನು ವಿಪಕ್ಷಗಳು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಎಲ್ಲದಕ್ಕೂ ಆರ್ ಎಸ್ ಎಸ್ ಲಿಂಕ್ ಸರಿಯಲ್ಲ ಎಂದರು.

ಪ್ರಧಾನಿ ಮೋದಿ ಕರ್ನಾಟಕಕ್ಕೆ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರೇ ನಮ್ಮೂರಿಗೆ ಬಂದರೂ ನಮಗೆ ಏನೂ ಬೇಕು ಅಂತಾ ಒಂದು ಮನವಿ ಕೊಡದೆ ಇರೋದು ಬೇಸರವಾಗಿದೆ. ಅವರ ಬಳಿ ಕೇಳಲು ಧೈರ್ಯ ಯಾಕೆ ಬೇಕು.‌ ಅವರೇನೂ ಸಿಂಹವೇ? ಇಂದಿರಾಗಾಂಧಿ ಬಳಿ ಕೇಳಲೂ ಕಾಂಗ್ರೆಸ್​​ಗೆ ಧೈರ್ಯವಿತ್ತಾ? ಎಂದು ವಾಗ್ದಾಳಿ ನಡೆಸಿದರು.

ಮಹಾರಾಷ್ಟ್ರ ದಲ್ಲಿ ಸರಕಾರ ಅಸ್ಥಿರತೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಕರ್ನಾಟಕದಲ್ಲಿ ಆಗಿದ್ದು ಮಹಾರಾಷ್ಟ್ರದಲ್ಲಿ ಆಗುತ್ತಿದೆ. ಸಿಎಂ ಉದ್ಭವ ಠಾಕ್ರೆ ನಡವಳಿಕೆಯೇ ಇದಕ್ಕೆ ಕಾರಣ. ಸಿಎಂ ಆದ ಮೇಲೆ ಸರ್ವಾಧಿಕಾರಿಗಳಾದ ಹೀಗೆ ಆಗುತ್ತದೆ. ಕುಮಾರಸ್ವಾಮಿ, ಸಿದ್ದರಾಮಯ್ಯ ಅವರ ದರ್ಪ, ದೌರ್ಜನ್ಯದಿಂದ ಇಲ್ಲಿನ ಶಾಸಕರು ದಂಗೆ ಎದ್ದರು. ಇದೇ ಕೆಲಸ ಮಹಾರಾಷ್ಟ್ರದಲ್ಲೂ ಆಗುತ್ತಿದೆ. ಶಾಸಕರ ಸ್ವಾಭಿಮಾನ ಕೆಣಕಿದ್ದಾಗ ಈ ರೀತಿಯ ಕ್ಷೀಪ್ರ ರಾಜಕೀಯ ಕ್ರಾಂತಿ ಆಗುತ್ತದೆ ಎಂದು ತಿಳಿಸಿದರು.

ಬಾಂಬೆ ಡೇಸ್ ಪುಸ್ತಕದ ಹೆಸರು ಬದಲಿಸಿದಕ್ಕೆ ಪ್ರತಿಕ್ರಿಯಿಸಿ, ಅದು ಬಾಂಬೆ ಡೇಸ್ ಅಲ್ಲ. ಬದಲಾಗಿ ಕಾಶ್ಮೀರ್ ಫೈಲ್ಸ್ ಥರ ಬಾಂಬೆ ಫೈಲ್ಸ್ ಅಂತಾ ಬದಲಾಯಿಸಿದ್ದೇನೆ. ಈ ವರ್ಷದ ಒಳಗೆ ಪುಸ್ತಕ ಬಿಡುಗಡೆ ಆಗುತ್ತದೆ. ಅದು ಬಾಂಬ್ ಅಲ್ಲ, ವಾಸ್ತವ ಸತ್ಯ ಎಂದು ತಿಳಿಸಿದರು.

RELATED ARTICLES

Related Articles

TRENDING ARTICLES