Thursday, November 21, 2024

ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಯಶಸ್ಸು ಸಿಗೋದಿಲ್ಲ : ಹೆಚ್.ಕೆ ಪಾಟೀಲ್​

ಗದಗ : ನಾವು ಸರ್ವಾನುಮತದಿಂದ ವಿಕಾಸ್ ಅಗಾಡಿಯರನ್ನು ಬೆಂಬಲಿಸುವ ನಿರ್ಣಯ ಮಾಡಿದ್ದೇವೆ ಎಂದು ಗದಗನಲ್ಲಿ ಮಹಾರಾಷ್ಟ್ರ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹೆಚ್.ಕೆ ಪಾಟೀಲ್​ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದ ಬಂಡಾಯದ ಹಿಂದೆ ಬಿಜೆಪಿ ಇದೆ. ಬಿಜೆಪಿ ಬ್ಯಾಕ್ ಸೀಟ್ ಡ್ರೈವರ್ ಇದ್ದಂತೆ. ಆಪರೇಷನ್ ಕಮಲದ ಹೆಚ್ಚಿನ ಹೆಜ್ಜೆ ಮಹಾರಾಷ್ಟ್ರದಲ್ಲಿ ಮಾಡಿದ್ದಾರೆ. ಶಿವಸೇನೆ ಪಾರ್ಟಿ ಒಡೆಯುವ ಕೆಲಸ ಬಿಜೆಪಿ ಮಾಡಿದೆ. ಮಹಾರಾಷ್ಟ್ರ ರಾಜ್ಯ ಉಸ್ತುವಾರಿ ಹೆಚ್.ಕೆ ಪಾಟೀಲ್​ ಗಂಭೀರ ಆರೋಪ ಮಾಡಿದ್ದಾರೆ.
ಇನ್ನು, ಕರ್ನಾಟಕದ ೧೫ ಜನ್ರ ರಾಜಿನಾಮೆ ಕೊಡಿಸಿ ಪಕ್ಷ ಬಿಡಿಸುವುದು, ಮಹಾರಾಷ್ಟ್ರದಲ್ಲಿ ಪಕ್ಷ ಒಡೆಯುವಂತೆ ಮಾಡ್ತಿದಾರೆ. ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಯಶಸ್ಸು ಸಿಗೋದಿಲ್ಲ. ಮಹಾರಾಷ್ಟ್ರದ ಜನತೆ ಶಿವಸೇನೆ ಜೊತೆಗೆ ನಿಂತಿದಾರೆ. ಕಾಂಗ್ರೆಸ್, ಶಿವಸೇನೆ ಶಾಸಕರು ಒಗ್ಗಟ್ಟಾಗಿ, ಕೂಡಿ ಇದ್ದೇವೆ. ಶಿವಸೇನೆ ಒಳಗಿನ, ಆಂತರಿಕ ಜಗಳದ ಬಗ್ಗೆ ನನಗೆ ಗೊತ್ತಿಲ್ಲ. ಬಿಜೆಪಿಯಿಂದ ಒಡಕು ಹುಟ್ಟಿಸುವ ಹಾಗೂ ರಕ್ಷಣೆ ನೀಡುವ ಪ್ರಯತ್ನ ಮಾಡ್ತಿದೆ ಎಂದು ಅಸ್ಸಾಂ ಸಿ.ಎಂ ಬಗ್ಗೆ ಹೆಚ್.ಕೆ ಪಾಟೀಲ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅದಲ್ಲದೇ, ಅಸ್ಸಾಂ ರಾಜ್ಯದಲ್ಲಿ ಪ್ರವಾಹದಿಂದ ನೂರಾರು ಜನ ಮೃತಪಟ್ಟಿದ್ದಾರೆ. ಅಸ್ಸಾಂ ಸಿ.ಎಮ್ ಪ್ರವಾಹ ಪರಿಸ್ಥಿತಿ ಬಿಟ್ಟು, ೪೦ ಜನ ಇದ್ದಲ್ಲಿ ಬಂದು ಕೇಕ್ ಕಟ್ ಮಾಡ್ತಾರೆ. ಇದು ಪ್ರಜಾಪ್ರಭುತ್ವನಾ? ಇದನ್ನು ಜನ ನೋಡ್ತಿದ್ದಾರೆ, ಜನ್ರ ದಡ್ಡರಲ್ಲಾ ಎಂದು ಗದಗನಲ್ಲಿ ಕಾಂಗ್ರೆಸ್ ಶಾಸಕ, ಮಹಾರಾಷ್ಟ್ರ ರಾಜ್ಯ ಉಸ್ತುವಾರಿ ಹೆಚ್.ಕೆ ಪಾಟೀಲ್​ ಹೇಳಿದ್ದಾರೆ.

RELATED ARTICLES

Related Articles

TRENDING ARTICLES