Thursday, January 23, 2025

ಕೇಂದ್ರದ ಅಗ್ನಿಪಥ್ ಯೋಜನೆ ವಿರುದ್ಧ ಕೈ’ ಆಕ್ರೋಶ..!

ಬೆಂಗಳೂರು: ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಹೋರಾಟ ಮುಂದುವರೆದಿದೆ. ಅಗ್ನಿಪಥ್ ಹಾಗೂ ರಾಹುಲ್ ಇಡಿ ವಿಚಾರಣೆಯ ವಿರುದ್ಧ ಪ್ರತಿಭಟನೆಗಳು ನಡೆದಿವೆ. ಅಗ್ನಿಪಥ್ ಯೋಜನೆ ವಿರುದ್ಧ ಹೋರಾಟವನ್ನು ಚುನಾವಣೆಯವರೆಗೆ ಜೀವಂತವಾಗಿಡೋಕೆ ನಿರ್ಧರಿಸಲಾಗಿದೆ. ಯುವ ಸಮೂಹವನ್ನೇ ಟಾರ್ಗೆಟ್ ಮಾಡಿ ಪ್ರತಿನಿತ್ಯ ಒಂದಲ್ಲ ಒಂದು ಕಡೆ ಬಿದಿಗಿಳಿಸೋಕೆ ಕಾಂಗ್ರೆಸ್ ತೀರ್ಮಾನಿಸಿದೆ.

ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಕಾಂಗ್ರೆಸ್ ಸಾಲು ಸಾಲು ಪ್ರತಿಭಟನೆ ನಡೆಸ್ತಾನೇ ಇದೆ. ಬೆಂಗಳೂರಿನ ಬಹುತೇಕ ಕ್ಷೇತ್ರಗಳಲ್ಲೂ ಪ್ರತಿಭಟನೆ ನಡೆಸಲಾಗಿದೆ. ಶಾಂತಿನಗರ, ಬಿಟಿಎಂ ಲೇಔಟ್, ಜಯನಗರ, ಪುಲಿಕೇಶಿನಗರ, ಹೆಬ್ಬಾಳಗಳಲ್ಲಿ ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸಲಾಯ್ತು.

ಇನ್ನು ಜಿಲ್ಲಾ ಕೇಂದ್ರಗಳಲ್ಲೂ ಅಗ್ನಿಪಥ ಯೋಜನೆ ವಿರುದ್ಧ ಪ್ರತಿಭಟನೆ ನಡೆಸಲಾಗಿದೆ. ಕ್ಷೇತ್ರವಾರು ನಡೆದ ಪ್ರತಿಭಟನೆಗಳಲ್ಲಿ ಸ್ಥಳೀಯ ನಾಯಕರು‌ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ರು.

ಯಾದಗಿರಿ,ಬೀದರ್,ಕಲಬುರಗಿ,ಶಿವಮೊಗ್ಗ ಸೇರಿ ಹಲವು ಕಡೆಗಳಲ್ಲಿ ಧರಣಿ ಯಶಸ್ವಿಯಾಗಿದೆ. ಉತ್ತಕರ್ನಾಟಕ ಭಾಗದಲ್ಲೇ ಸೈನ್ಯಕ್ಕೆ ಹೆಚ್ಚಿನ ಯುವಕರು ಸೇರೋದ್ರಿಂದ ಅಲ್ಲಿಯ ಭಾಗದಲ್ಲಿ ಹೋರಾಟವನ್ನ ತೀರ್ವಗೊಳಿಸಲಾಗಿದೆ.

ಮತ್ತೆ ದೆಹಲಿಯ ಎಐಸಿಸಿ ಕಚೇರಿ ಮುಂಭಾಗದಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಯಲಿದೆ. ಬೃಹತ್ ಮಟ್ಟದಲ್ಲಿ ನಡೆಯುವ ಧರಣಿಯಲ್ಲಿ ಹಲವು ರಾಜ್ಯಗಳ ನಾಯಕರು ಭಾಗಿಯಾಗಲಿದ್ದಾರೆ. ರಾಜ್ಯದಿಂದಲೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ನಾಳೆ ದೆಹಲಿಗೆ ತೆರಳಲಿದ್ದಾರೆ. ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ.

ಒಟ್ಟಿನಲ್ಲಿ ಅಗ್ನಿಪಥ್ ಯೋಜನೆಯನ್ನ ಸರ್ಕಾರದ ವಿರುದ್ಧ ಪ್ರಮುಖ ಅಸ್ರ್ರವನ್ನಾಗಿ ಕಾಂಗ್ರೆಸ್ ಮಾಡಿಕೊಂಡಿದೆ. ದೇಶಾದ್ಯಂತ ಹೋರಾಟಗಳನ್ನ ಜೀವಂತವಾಗಿಟ್ಟಿದೆ. ಈ ಮೂಲಕ ಯುವ ಜನರನ್ನು ತನ್ನತ್ತ ಸೆಳೆಯಲು ಮುಂದಾಗಿದೆ. ಕೈ ಪಡೆಯ ಈ ಪ್ರಯತ್ನ ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತೆ ಅಂತ ಕಾದು ನೋಡಬೇಕು.

ಬಸವರಾಜ್ ಚರಂತಿಮಠ್ ಪೊಲಿಟಿಕಲ್ ಬ್ಯೂರೊ ಪವರ್ ಟಿವಿ ಬೆಂಗಳೂರು.

RELATED ARTICLES

Related Articles

TRENDING ARTICLES