Wednesday, January 22, 2025

ಮದ್ವೆ ಆಗಿ 3 ತಿಂಗಳು ಕಳೆದಿಲ್ಲ ಆಗಲೇ ಆಲಿಯಾ ಭಟ್ ತಾಯಿ

ಬಿಟೌನ್​​ನ ಲವ್​ಬರ್ಡ್ಸ್​​ ರಣಬೀರ್​ ಹಾಗೂ ಆಲಿಯಾ ಭಟ್​ ಮದ್ವೆಯಾಗಿ ಮೂರು ತಿಂಗಳು ಕೂಡ ಕಳೆದಿಲ್ಲ ಆಗಲೇ ಗುಡ್ ನ್ಯೂಸ್​ ಕೊಟ್ಟಿದ್ದಾರೆ. ಮದ್ವೆ ಮುಂಚೆಯೇ ಬಿಂದಾಸ್​ ಆಗಿ ಸುತ್ತಾಡಿದ್ದ ಇಬ್ಬರು ಈಗ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಬಾಲಿವುಡ್​ ಕ್ಯೂಟ್​ ಕಪಲ್​ಗಳಲ್ಲಿ ಒಂದಾಗಿರುವ ಆಲಿಯಾ, ರಣಬೀರ್​ ಗುಡ್​ನ್ಯೂಸ್​ ಕೊಡ್ತಾ ಇದ್ದಂತೆ, ಬಿಟೌನ್ ಫುಲ್​ ಆ್ಯಕ್ಟಿವ್​ ಆಗಿದೆ. ಆಲಿಯಾ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಆಸ್ಪತ್ರೆಯ ಫೋಟೊವೊಂದನ್ನು ಶೇರ್​ ಮಾಡಿ ನಮ್ಮ ಮಗು ಶೀಘ್ರದಲ್ಲಿ ಬರ್ತಿದೆ ಎಂದು ಬರೆದುಕೊಂಡಿದ್ದಾರೆ.

ಈ ಫೋಟೊ ನೋಡ್ತಾ ಇದ್ದಂತೆ ಬಿಟೌನ್​​ ಸ್ಟಾರ್​ ಕಲಾವಿದರೆಲ್ಲಾ ಸಂತಸ ವ್ಯಕ್ತಪಡಿಸಿದ್ದಾರೆ. ಗಣ್ಯರಿಂದ ಅಭಿನಂದನೆಗಳ ಸುರಿಮಳೆ ಬರುತ್ತಿದೆ. ಪ್ರಿಯಾಂಕ ಚೋಪ್ರಾ ಕೂಡ ಐ ಕಾಂಟ್​ ವೆಯ್ಟ್​ ಅಂತಾ ಕಮೆಂಟ್  ಮಾಡಿದ್ದಾರೆ. ಟೈಗರ್​ ಶ್ರಾಫ್​, ರಾಶಿ ಖನ್ನಾ ಸೇರಿದಂತೆ ಅನೇಕ ಸ್ಟಾರ್ಸ್​ಗಳು ಖುಷಿ ವ್ಯಕ್ತಪಡಿಸಿದ್ದಾರೆ.

 

View this post on Instagram

 

A post shared by Alia Bhatt 🤍☀️ (@aliaabhatt)

ರಾಕೇಶ್​ ಆರುಂಡಿ, ಫಿಲ್ಮ್ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES