Saturday, November 23, 2024

ದೇಶದ ಎಲ್ಲ ಪ್ರತಿಭೆಗಳು ಬೆಂಗಳೂರಿಗೆ ಬರ್ತಾರೆ : ಅಶ್ವಥ್ ನಾರಾಯಣ್

ಬೆಂಗಳೂರು : ನಾಡಪ್ರಭು ಕೆಂಪೇಗೌಡರ 513ನೇ ಜಯಂತಿಯನ್ನು ರಾಜ್ಯ ಸರ್ಕಾರ ವತಿಯಿಂದ ಇಂದು ವಿಧಾನಸೌಧದಲ್ಲಿ ಆಚರಿಸಲಾಯಿತು.

ಇಂದು ವಿಧಾನಸೌಧದಲ್ಲಿ ನಡೆದ ಕೆಂಪೇಗೌಡರ 513ನೇ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಸೇರಿದಂತೆ ಹಲವು ಗಣ್ಯರಿಗೆ ನಾಡಪ್ರಭು ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದರು

ಇದೇ ವೇಳೆ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರು ಬಿಟ್ಟು ಮತ್ತೊಂದು ನಗರವಿಲ್ಲ. ದೇಶದ ಎಲ್ಲ ಪ್ರತಿಭೆಗಳು ಇಲ್ಲಿಗೆ ಬರುತ್ತಾರೆ. ಇದು ವಿಶ್ವದ ಪ್ರತಿಭೆಗಳ ನಗರವಾಗಿದ್ದು, ಏರೋಸ್ಪೇಸ್,ಐಟಿ,ಬಿಟಿ,ಸ್ಟಾರ್ಟ್ ಅಪ್ ಎಲ್ಲದರೂ ಮೊದಲು. ಅತಿವೇಗವಾಗಿ ಬೆಳೆಯುತ್ತಿರುವ ನಗರವಿದು ಎಂದರು.

ಅಷ್ಟೆ ಅಲ್ಲದೇ ಸಾಕಷ್ಟು ಸುಧಾರಣೆಗಳನ್ನ ಸರ್ಕಾರ ತರುತ್ತಿದೆ. ಏರ್​​​ಪೋರ್ಟ್​ಗೆ ಕೆಂಪೇಗೌಡರ ಹೆಸರು ಇಟ್ಟಿದ್ದು ನಾವು 2008ರಲ್ಲಿ ಯಡಿಯೂರಪ್ಪ ಅವರು ಈ ಹೆಸರು ಇಡಲು ಚಿಂತಿಸಿದರು. ಅದಕ್ಕೆ ಅವಕಾಶ ಕೊಟ್ಟವರು ಮನಮೋಹನ್ ಸಿಂಗ್ ಅವರು. ಈಗ ಕೆಂಪೇಗೌಡರ ಪ್ರತಿಮೆ ನಿರ್ಮಾಣವಾಗ್ತಿದೆ. ಏರ್ಪೋಟ್ ಮಧ್ಯದಲ್ಲೇ 108 ಅಡಿ ಪ್ರತಿಮೆ ನಿರ್ಮಾಣವಾಗಲಿದ್ದು, ಅಕ್ಟೋಬರ್​​ನಲ್ಲಿ ಅದರ ಲೋಕಾರ್ಪಣೆಯಾಗಲಿದೆ ಎಂದು ತಿಳಿಸಿದರು.

RELATED ARTICLES

Related Articles

TRENDING ARTICLES