Wednesday, January 22, 2025

ಸೂಪರ್​​ ಕ್ಲಾಸ್​​..100% ಮಾಸ್​​..ಪಕ್ಕಾ ಕಮರ್ಷಿಯಲ್​​

ಸ್ಯಾಂಡಲ್​ವುಡ್​ಗೆ ಸುಪ್ರಿಮ್​​ ಹೀರೋ ಶಶಿಕುಮಾರ್​ ಎಂಟ್ರಿ ಕೊಟ್ಟಾಗ ಹೊಸ ಅಲೆ ಶುರುವಾಗಿತ್ತು. ಇದೀಗ ತಂದೆಗೆ ತಕ್ಕ ಮಗನಾಗಿ ಓ ಮೈ ಲವ್​ ಚಿತ್ರದ  ಮೂಲಕ ಸುಪ್ರಿಮ್​ ತನಯ ಅಕ್ಷಿತ್​​ ಶಶಿಕುಮಾರ್​​ ಬಿರುಗಾಳಿ ಎಬ್ಬಿಸೋಕೆ ಸಜ್ಜಾಗಿದ್ದಾರೆ. ಚಾಕೋಲೆಟ್​ ಬಾಯ್​​ ತರಹ ಹ್ಯಾಂಡ್ಸಮ್​​ ಆಗಿರೋ ಅಕ್ಷಿತ್​​ ಆ್ಯಕ್ಷನ್​​, ರೊಮ್ಯಾಂಟಿಕ್​​ ಸೀಕ್ವೆನ್ಸ್​​ಗಳಲ್ಲಿ ಹಾಲಿ ನಟರಿಗೆ ಸಡ್ಡು ಹೊಡಿತಿದ್ದಾರೆ. ಯೆಸ್​​.. ಓ ಮೈ ಲವ್​​ ಟ್ರೈಲರ್​ ನೋಡಿ ನೀವ್​​ ಕೂಡ ಹುಬ್ಬೇರಿಸ್ಬೇಕಾ..? ಹಾಗಾದರೆ ಈ ಸ್ಟೋರಿ ಓದಿ.

  • ಪ್ರತಿ ಫ್ರೇಮಿನಲ್ಲೂ ಅಕ್ಷಿತ್​​ ಆ್ಯಕ್ಷನ್​​​ ಫುಲ್​ ಪವರ್​​ಫುಲ್​​​..!

ಕನ್ನಡದ ಹಿರಿಯ ನಟ ಶಶಿಕುಮಾರ್​ ಕೂಡ ರೊಮ್ಯಾಂಟಿಕ್​, ಲವ್​ಸ್ಟೋರಿ ಸಿನಿಮಾಗಳ ಮೂಲಕ ತನ್ನದೇ ಛಾಪು ಮೂಡಿಸಿದ್ರು. ಇದೀಗ ಅವರ ಪುತ್ರ ಓ ಮೈ ಲವ್​ ಚಿತ್ರದ ಮೂಲಕ ಡಿಫರೆಂಟ್​​ ಲವ್​ಸ್ಟೋರಿ ಹೇಳೋಕೆ ಬರ್ತಿದ್ದಾರೆ. ಚಿತ್ರದ ಪೋಸ್ಟರ್​​ ಟ್ರೈಲರ್​​ ಬಗ್ಗೆ ಹೊಸದಾಗಿ ಹೊಗಳಬೇಕಿಲ್ಲ. ಪ್ರತಿಯೊಂದು ಹಾಡುಗಳು ಯ್ಯೂ ಟ್ಯೂಬ್​​​ನಲ್ಲಿ ಹಿಟ್ಸ್​​ ದಾಖಲೆ ಕಂಡಿವೆ. ಹಾಡುಗಳ ಆಲಾಪನೆಯಲ್ಲಿ ಸಿನಿಪ್ರಿಯರು ಮುಳುಗಿದ್ದಾರೆ.

ಓ ಮೈ ಲವ್​ ಚಿತ್ರದ ಟ್ರೈಲರ್​​ ಬಗ್ಗೆ ಸಹಜವಾಗಿ ಎಲ್ಲರಿಗೂ ಕ್ಯೂರಿಯಾಸಿಟಿ ಇತ್ತು. ಇದೀಗ ಟ್ರೈಲರ್​​ ನೀರಿಕ್ಷೆ  ಮೀರಿ ಧೂಳೆಬ್ಬಿಸ್ತಿದೆ. ಪ್ರತಿ ಫ್ರೇಮಿನಲ್ಲೂ ಅದ್ಧೂರಿತನ ಎದ್ದು ಕಾಣುತ್ತೆ. ಅಕ್ಷಿತ್​ ಆ್ಯಕ್ಟಿಂಗ್​ ಅನುಭವಿ ನಟರನ್ನು ಮೀರಿಸುತ್ತೆ. ಆ್ಯಕ್ಷನ್​​​ ಸೀಕ್ವೆನ್ಸ್​​ಗಳು ಚಿತ್ರದಲ್ಲಿ ಭರ್ಜರಿ ಸೌಂಡ್​ ಮಾಡೋ ಸುಳಿವು ಕೊಟ್ಟಿವೆ. ಪಕ್ಕಾ ಕಮರ್ಷಿಯಲ್​ ಸಿನಿಮಾ ಜೊತೆ ಎಂದೂ ಹೇಳಿರದ ಪ್ರೇಮ ಕಥೆಗೆ ಹೊಸ ಭಾಷ್ಯ ಬರೆಯೋಕೆ ಚಿತ್ರತಂಡ ರೆಡಿಯಾಗಿದೆ.

  • ಓ ಮೈ ಲವ್​ಗೂ ಶಶಿಕುಮಾರ್​ಗೂ ತುಂಬಾ ಅಂತರ..!
  • ಮಗನ ಸಿನಿಮಾ ಬಗ್ಗೆ  ಸುಪ್ರಿಮ್​ ಹೀರೋ ಹೇಳಿದ್ದೇನು..?

ವೈಫೈ ಕನೆಕ್ಟ್​ ಆದ ಹಾಗೆ ಇತ್ತೀಚೆಗೆ ಮನಸ್ಸುಗಳು ಕನೆಕ್ಟ್​ ಆಗಲ್ಲ. ಹೀಗೆ ಮನಸ್ಸುಗಳ ಕನೆಕ್ಷನ್​​ ಬಗ್ಗೆ ಈ ಸಿನಿಮಾ ತಯಾರಾಗಿದೆ. ಸ್ಮೈಲ್​ ಶ್ರೀನು ಸಿನಿಮಾಗೆ ಸಖತ್​​ ಎಫರ್ಟ್​ ಹಾಕಿ ನಿರ್ದೇಶನ ಮಾಡಿದ್ದಾರೆ. ಅವರ ಹಾರ್ಡ್​ವರ್ಕ್​​​ ಪ್ರತಿ ಸೀನ್​​ನಲ್ಲೂ ಎದ್ದು ಕಾಣುತ್ತೆ. ರಾಮಾಂಜಿನಿ ಸ್ವತಃ ಕಥೆ ಬರೆದು ಸಿನಿಮಾ ನಿರ್ಮಾಣ  ಮಾಡ್ತಿದ್ದಾರೆ. ಚಿತ್ರದ ಟ್ರೈಲರ್​​ನಲ್ಲಿ ಕಾಲೇಜ್​ ಕ್ಯಾಂಪಸ್ಸಿನ ದೃಶ್ಯಗಳಿದ್ದು ಯುವಮನಸ್ಸುಗಳಿಗೆ ಈ ಸಿನಿಮಾ ಸಖತ್​ ಇಷ್ಠವಾಗಲಿದೆ.

ಟ್ರೈಲರ್​ ರಿಲೀಸ್​ ಮಾಡಿರುವ ಚಿತ್ರತಂಡ​​ ಜುಲೈ15ಕ್ಕೆ ಸಿನಿಮಾ  ರಿಲೀಸ್​ ಮಾಡೋದಾಗಿ ಗುಡ್​ನ್ಯೂಸ್​ ಕೊಟ್ಟಿದೆ. ಈ ​ ಕಾರ್ಯಕ್ರಮಕ್ಕೆ ಶಶಿಕುಮಾರ್​​, ಚಿತ್ರದ ಕಲಾವಿದರಾದ ಎಸ್​​ ನಾರಾಯಣ್​​​, ಸಂಗೀತಾ, ನಾಯಕಿ ಕೀರ್ತಿ, ಪೃಥ್ವಿ ಹಾಗೂ ಬಳ್ಳಾರಿಯ ಜನತೆಯ ಸಮ್ಮುಖದಲ್ಲಿ ನೆರವೇರಿತು. ಜೊತೆಗೆ ಮಗನ ಸಿನಿಮಾ ಬಗ್ಗೆ ಮಾತನಾಡಿದ ಶಶಿಕುಮಾರ್​​ ಇಲ್ಲಿವರೆಗೂ ಈ ಚಿತ್ರದ ಒಂದ್​ ಸಿನ್​ ಕೂಡ ನೋಡಿಲ್ಲ. ನಿರ್ದೇಶಕರ ಮೇಲೆ ನಂಬಿಕೆ ಇದೆ ಎಂದ್ರು. ಜೊತೆಗೆ ಅಕ್ಷಿತ್​ ಮಾತನಾಡಿ ಅಪ್ಪ ಹಾಕಿ ಕೊಟ್ಟಿರೋ ಹಾದಿ ಇದು ಎಂದು ತಂದೆಯನ್ನು ಹೊಗಳಿದ್ರು.

ಔಟ್​ ಅಂಡ್​ ಔಟ್​ ಲವ್​ ಕಂ ಫ್ಯಾಮಿಲಿ ಡ್ರಾಮಾ ಇದಾಗಿದ್ದು, ಓ ಮೈ ಲವ್​​​ ಸಿನಿಮಾ ಚಿತ್ರರಸಿಕರಿಗೆ ಹೊಸ ಫೀಲ್​ ಕೊಡಲಿದೆ. ನಟ ಎಸ್​ ನಾರಾಯಣ್​ ಕೂಡ ಸಿನಿಮಾದ ಬಗ್ಗೆ ಪಾಸಿಟಿವ್​ ಮಾತುಗಳನ್ನಾಡಿದ್ದಾರೆ. ಲವ್​ಕಂಟೆಂಟ್​​ ಚಿತ್ರಗಳ ಮೂಲಕ ಈ ನಾಯಕ ಹೊರಹೊಮ್ಮುತ್ತಾನೆ ಎಂದು ಶುಭ ಹಾರೈಸಿದ್ದಾರೆ. ಜಿಸಿಬಿ ಪ್ರೊಡಕ್ಷನ್​ ಅಡಿಯಲ್ಲಿ ಸಿನಿಮಾ ಅದ್ಧೂರಿಯಾಗಿ ಮೂಡಿಬಂದಿದೆ. ಸಾಧುಕೋಕಿಲ, ಪವಿತ್ರಾ ಲೋಕೇಶ್​ ಸೇರಿದಂತೆ ಮುಂತಾದ ಕಲಾವಿದರ ತಾರಾಗಣವಿದೆ. ಚರಣ್​ ಅರ್ಜುನ್​ ಸಂಗೀತ ಹೊಸ ಮ್ಯಾಜಿಕ್​ ಮಾಡಿದೆ. ಎನಿವೇ ಜುಲೈ 15ಕ್ಕೆ ಕನ್ನಡದಲ್ಲಿ ಹೊಸತನದ ಸಿನಿಮಾ ತೆರೆಗೆ ಬರೋ ಮೂಲಕ ಧೂಳೆಬ್ಬಿಸೋದು ಮಾತ್ರ ಪಕ್ಕಾ ಆಗಿದೆ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯುರೋ, ಪವರ್ ಟಿವಿ

RELATED ARTICLES

Related Articles

TRENDING ARTICLES