Sunday, January 19, 2025

ಬೆಳಗಾವಿಯಲ್ಲಿ ಭೀಕರ ದುರಂತ : 7 ಮಂದಿ ಸ್ಥಳದಲ್ಲೇ ಸಾವು

ಬೆಳಗಾವಿ : ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ್​ನಲ್ಲಿದ್ದ 7 ಮಂದಿ ಸ್ಥಳದಲ್ಲೇ ದುರ್ಮರಣರಾಗಿದ್ದ ಘಟನೆ ಕಣಬರಗಿ ಬಳಿಯ ಕಲಾಳ್​ಪೂಲ್​ ಬಳಿ ನಡೆದಿದೆ.

ಚಾಲಕನ ನಿಯಂತ್ರಣ ತಪ್ಪಿ ಬಳ್ಳಾರಿ ನಾಲೆಗೆ ಬಿದ್ದ ಕ್ರೂಸರ್ ಕ್ರೂಸರ್​ನಲ್ಲಿದ್ದ 7 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಕಣಬರಗಿ ಬಳಿಯ ಕಲಾಳ್​ಪೂಲ್​ ಬಳಿ ಈ ಘಟನೆ ನಡೆದಿದ್ದು, ಅಕ್ಕತಂಗಿಯರ ಹಾಳದಿಂದ ಬೆಳಗಾವಿಗೆ ಬರುತ್ತಿದ್ದ ಕ್ರೂಸರ್. ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಮೃತರೆಲ್ಲರೂ ಕೂಲಿ ಕಾರ್ಮಿಕರಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

RELATED ARTICLES

Related Articles

TRENDING ARTICLES