Monday, December 23, 2024

ಅಕ್ರಮ ಮದ್ಯ ಮಾರಾಟಕ್ಕೆ ಬಿಗಿ ಕ್ರಮ

ಚಳ್ಳಕೆರೆ : ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ, ಗಡಿ ಭಾಗದ ಜನರ ದುಡಿದ ಹಣವೆಲ್ಲ ಮಧ್ಯದ ಅಂಗಡಿಗೆ ಹೊಗುತ್ತದೆ ಎಂಬುದನ್ನು ಮನಗಂಡ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಪರವಾನಿಗೆಯ ಮೂಲಕ ಮಧ್ಯದ ಅಂಗಡಿ ತೆರೆಯಲು ಬಂದ ಮಾಲೀಕರ ವಿರುದ್ಧ ನಿಷ್ಠರವಾಗಿ ಕ್ಷೇತ್ರದಲ್ಲಿ ಅನುಮತಿ ನೀಡದೆ ತಳ್ಳಿ ಹಾಕಿದ್ದರು, ಆದರೆ ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಅಕ್ರಮ ಮಧ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿವೆ ಇನ್ನೂ ಮಕ್ಕಳ ವ್ಯಾಸಂಗಕ್ಕೆ ಒತ್ತುವ ನೀಡಬೇಕಾದ ಅಪ್ಪಂದಿರು ಸಂಜೆಯಾಗುತ್ತಲೆ ಕುಡಿತದ ಮೊತ್ತಿನಲ್ಲಿ ಕಾಲ ಕಳೆಯುತ್ತಾರೆ, ಆದರೆ ಕಡಿವಾಣ ಹಾಕಬೇಕಾದ ಇಲಾಖೆ ಮೌನವಹಿಸಿದೆ.

ಕಿರಾಣಿ ಅಂಗಡಿ, ವಸದ ಮನೆಗಳಲ್ಲಿ ಅಕ್ರಮ ಮಧ್ಯ ಮಾರಾಟ ಮಾಡುವವರ ಮೇಲೆ ನಿಗಾ ಇಡಬೇಕಾದ ಅಬಕಾರಿ ಇಲಾಖೆ ಕೆಲಸ ಕಂದಾಯ ಇಲಾಖೆ ಮಾಡುತ್ತಿದೆ, ಇನ್ನೂ ಕ್ಷೇತ್ರದ ಶಾಸಕರ ನಿಲುವಿನಂತೆ ತಹಶೀಲ್ದಾರ್ ಎನ್.ರಘುಮೂರ್ತಿ ಗಡಿ ಗ್ರಾಮದಲ್ಲಿ ಬೀಡು ಬಿಟ್ಟಿದ್ದು ಪ್ರತಿನಿತ್ಯವೂ ಅಕ್ರಮ ಮಧ್ಯ ಮಾರಾಟದ ದೂರು ಬಂದ ತಕ್ಷಣವೇ ಕಾರ್ಯಪ್ರವೃತ್ತರಾಗಿ ಕಂದಾಯ ಇಲಾಖೆ ಸಿಬ್ಬಂದಿಯೊಂದಿಗೆ ದಾವಿಸಿ ಅಕ್ರಮ ಮಧ್ಯ ಮಾರಾಟ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿ ಎಚ್ಚರಿಕೆ ನೀಡುತ್ತಿದ್ದಾರೆ.

ಅದರಂತೆ ಇಂದು ತಾಲೂಕಿನ ವಿಶ್ವೇಶ್ವರಯ್ಯ ಗ್ರಾಮದಲ್ಲಿ ಎಗ್ಗಿಲ್ಲದೆ ಮಾರಾಟ ಮಾಡುವ, ವಾಸದ ಮನೆಯಲ್ಲಿ ಶೇಖರಿಸಿದ ಅಕ್ರಮ ಮದ್ಯವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ. ಇನ್ನೂ ತಹಶೀಲ್ದಾರ್ ಎನ್.ರಘುಮೂರ್ತಿ, ಕುಡಿತದಿಂದ ಸಂಸಾರ ಹಾಳಾಗುತ್ತಿದೆ ಇಂತಹ ದುಷ್ಟಚಟಗಳಿಗೆ ಬಲಿಯಾಗಬೇಡಿ ಎಂದು ಕರೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES