ಬೆಂಗಳೂರು: ಮೋದಿ ಬರ್ತಾರೆಂದು 23 ಕೋಟಿ ರೂ ಖರ್ಚು ಮಾಡಿ ನಿರ್ಮಿಸಿದ್ದ ರಸ್ತೆಗಳು ಹದಗೆಟ್ಟಿದ್ದು, ಪಿಎಂ ಕಛೇರಿ ವರದಿ ಕೇಳುತ್ತಿದ್ದಂತೆ ಸಿಎಂಗೂ ಭಾರಿ ಟೆನ್ಷನ್ ಶುರುವಾಗಿದೆ.
ಎಂಜಿನಿಯರ್ಗಳಿಗೆ ಬರೀ ನೋಟೀಸ್. ಗುತ್ತಿಗೆದಾರರಿಗೆ ದಂಡ ಹಾಕಿದ್ರೆ ಸಾಕಾ..? ರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರು ಮಾನ ಹರಾಜು ಹಾಕಿದ ಡಾಂಬರು ರಸ್ತೆ ಕಳಪೆ ಕಾಮಗಾರಿಗೆ ತಲೆ ದಂಡ ಅಗಲ್ವಾ..? ಗುತ್ತಿಗೆದಾರರನ್ನ ಕಂಪ್ಲೀಟ್ ಬ್ಲಾಸ್ ಲಿಸ್ಟ್ ಗೆ ಸೇರಿಸಲ್ವಾ..? ಮೂರೇ ದಿನಕ್ಕೆ ಕಿತ್ತುಹೋದ ರಸ್ತೆ ವರದಿ ಕೇಳಿದ ಪ್ರಧಾನಿ ಕಚೇರಿ ರಾಜ್ಯ ಸರ್ಕಾರಕ್ಕೆ ನಡುಕ ಉಂಟಾಗಿದ್ದು, ಪಿಎಂ ಕಚೇರಿ ವರದಿ ಕೇಳುತ್ತಿದ್ದಂತೆ ಸಿಎಂಗೂ ಭಾರಿ ಟೆನ್ಷನ್ ಶುರುವಾಗಿದೆ.
ಈಗಾಗಲೇ ಬಿಬಿಎಂಪಿಯಿಂದ ಸಮಗ್ರ ವರದಿ ಕೇಳಿರೋ ಬೊಮ್ಮಾಯಿ. ಬಿಬಿಎಂಪಿ ಅಧಿಕಾರಿಗಳ ವರ್ತನೆಗೆ ಮುಜುಗರಕ್ಕೆ ಒಳಗಾಗಿರುವ ಅವರು, ಮುಂದಿನ ವಾರ ಪಿಎಂ ಕಛೇರಿಗೆ ರಸ್ತೆ ವರದಿ ಕಳಿಸೋ ಸಾಧ್ಯತೆ ಇದೆ. ರಾಜ್ಯ ಸರ್ಕಾರ ಕಳಿಸೋ ವರದಿಯಲ್ಲಿ ಏನಿರುತ್ತೆ..? ಕಳಪೆ ಕಾಮಗಾರಿಯಿಂದ ಯಡವಟ್ಟು ಮಾಡಿಕೊಂಡು ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದ್ದ ಪಾಲಿಕೆ. ಮೋದಿ ಬರುತ್ತಾರೆ ಅಂತ ತರಾತುರಿಯಲ್ಲಿ ರಸ್ತೆ ಕಾಮಗಾರಿ ನಡೆಸಿ ಯಡವಟ್ಟು ಮಾಡಿಕೊಂಡಿದ್ದು, ಕಳಪೆ ಡಾಂಬರು ಬಗ್ಗೆ ಪ್ರಧಾನಿ ಕಚೇರಿ ವರದಿ ಕೇಳಿದ ಬೆನ್ನಲ್ಲೇ ರಾಜ್ಯ ಸರ್ಕಾರಕ್ಕೆ ಟೆನ್ಷನ್ ಶುರುವಾಗಿದ್ದು, ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರ ಹಾಗೂ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮಕ್ಕೆ ಪಿಎಂ ಕಚೇರಿಯಿಂದ ಸೂಚನೆ ರವಾನೆ ಆಗುತ್ತಾ..? ಎಂದು ಕಾದುನೋಡಬೇಕು.