Sunday, January 19, 2025

IND vs SL ಮಹಿಳಾ ಟಿ20 ಸರಣಿ: 2ನೇ ಪಂದ್ಯದಲ್ಲಿಯೂ ಭಾರತಕ್ಕೆ ಭರ್ಜರಿ ಜಯ

ಭಾರತ ಹಾಗೂ ಶ್ರೀಲಂಕಾ ಮಹಿಳಾ ತಂಡಗಳ ಟಿ20 ಸರಣಿಯ ಎರಡನೇ ಪಂದ್ಯದಲ್ಲಿಯೂ ಭಾರತ ತಂಡ ಭರ್ಜರಿ ಗೆಲುವು ಸಾಧಿಸಿದೆ.

ಈ ಗೆಲುವಿನೊಂದಿಗೆ ಭಾರತ ಮಹಿಳಾ ತಂಡ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಮೊದಲ ಎರಡು ಪಂದ್ಯ ಗೆಲ್ಲುವ ಮೂಲಕ ಸರಣಿ ವಶಕ್ಕೆ ಪಡೆದುಕೊಂಡಿದೆ.

ಅಂತಿಮ ಪಂದ್ಯ ಜೂನ್ 27ರಂದು ನಡೆಯಲಿದ್ದು ವೈಟ್‌ವಾಶ್ ಮೇಲೆ ಭಾರತೀಯ ತಂಡ ಕಣ್ಣಿಟ್ಟಿದೆ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಮಾಡಿದ ಶ್ರೀಲಂಕಾ ದೊಡ್ಡ ಮೊತ್ತವನ್ನು ಗಳಿಸುವಲ್ಲಿ ವಿಫಲವಾಯಿತು. ಲಂಕಾ ಪಡೆಗೆ ಉತ್ತಮ ಆರಂಭ ದೊರೆತರೂ ನಂತರದ ಬ್ಯಾಟರ್‌ಗಳಿಮದ ದೊಡ್ಡ ಮೊತ್ತ ಬಾರಲಿಲ್ಲ.

ಹೀಗಾಗಿ ಸಾಧಾರಣ ಗುರಿಯನ್ನು ಭಾರತದ ಮುಂದಿಟ್ಟಿತು. ಇದನ್ನು ಭಾರತೀಯ ತಂಡ ಸುಲಭವಾಗಿ ಬೆನ್ನಟ್ಟುವ ಮೂಲಕ ಎರಡನೇ ಜಯ ಸಾಧಿಸಿದೆ.

RELATED ARTICLES

Related Articles

TRENDING ARTICLES