Thursday, January 23, 2025

ನಗರದ ಸ್ವಚ್ಛತೆಗೆ ಬಂತು ವ್ಯಾಕ್ಯೂಮ್ ಸ್ವೀಪರ್

ಹಾವೇರಿ : ರಸ್ತೆಯಲ್ಲಿನ ಧೂಳಿನಿಂದ ವಾಹನಗಳ ಸವಾರರು ನಿತ್ಯ ಕಂಗೆಟ್ಟಿದ್ದರು. ಈ ಸಮಸ್ಯೆಯನ್ನು ಅರಿತ ನಗರಸಭೆ ವಾಕ್ಯೂಮ್ ಸ್ಪಿಪರ್ ಯಂತ್ರವನ್ನು ನಗರಸಭೆಗೆ ತರುವ ಮೂಲಕ ತಕ್ಕ ಮಟ್ಟಿಗೆ ಧೂಳು ನಿಯಂತ್ರಣಕ್ಕೆ ಮುಂದಾಗಿದೆ.

ನಗರಸಭೆ ಕಚೇರಿಯಲ್ಲಿ ಕ್ಲಿನಿಂಗ್ ಮಾಡುವ ಅತ್ಯಾಧುನಿಕ ಯಂತ್ರವಾದ ರೋಡ್ ವಾಕ್ಯೂಮ್‌ ಸ್ವೀಪರ್ ಮೆಷಿನ್ ಅನ್ನು ಪ್ರಾಯೋಗಿಕವಾಗಿ ಚಲಿಸುವ ಮೂಲಕ ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಅವರು ಚಾಲನೆ ನೀಡಿದ್ದಾರೆ.

ದೊಡ್ಡ ದೊಡ್ಡ ಮಹಾ­ ನಗರ­ಗಳಲ್ಲಿ ಮಾತ್ರ ರಸ್ತೆ ಧೂಳು ಗುಡಿಸಲು ಬಳಸುತ್ತಿರುವ ಆಧುನಿಕ ಯಂತ್ರಗಳು ಬಳಕೆಯಲ್ಲಿದ್ದ ಯಂತ್ರಗಳನ್ನು ನಗರಸಭೆ ಕಚೇರಿ ಸ್ವಚ್ಛತೆಗೆ ತರಲಾಗಿದೆ. ನಗರದಲ್ಲಿ ಧೂಳಿನ ಸಮಸ್ಯೆ ಹೆಚ್ಚಾಗಿತ್ತು. ಈ ಯಂತ್ರದ ಬಳಕೆಯಿಂದ ರಸ್ತೆಯಲ್ಲಿಯ ಧೂಳಿನ ಸಮಸ್ಯೆಯನ್ನು ಅಲ್ಪ ಪ್ರಮಾಣ­ದಲ್ಲಾದರೂ ನಿಯಂತ್ರಿಸಲು ಸಾಧ್ಯವಾಗಲಿ ಎಂದು ನಗರಸಭೆ ಅಧ್ಯಕ್ಷರಾದ ಸಂಜೀವಕುಮಾರ ನೀರಲಗಿ ಅವರು ಹರ್ಷ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ನಗರಸಭೆ ಜನಪ್ರತಿನಿಧಿಗಳು,ಅಧಿಕಾರ ವರ್ಗದವರು ಪಾಲ್ಗೊಂಡಿದ್ದರು.

RELATED ARTICLES

Related Articles

TRENDING ARTICLES