Monday, December 23, 2024

ಬಿಗ್​ ಬಾಸ್​​ ಬೆಡಗಿಯ ಜೊತೆ ಶುಗರ್​ಲೆಸ್​​ ಲವ್​​​​​

ದಿಯಾ ಸಿನಿಮಾ ಯಾರು ತಾನೆ ನೋಡಿಲ್ಲ ಹೇಳಿ. ಈ ಚಿತ್ರದಲ್ಲಿ ನಟ ಪೃಥ್ವಿ ಅಂಬಾರ್​ ಆ್ಯಕ್ಟಿಂಗ್​ ನೋಡಿದ ಫ್ಯಾನ್ಸ್​​ಗೆ ಆ ಹ್ಯಾಂಗೋವರ್​ನಿಂದ ಇಂದಿಗೂ ಹೊರಗೆ ಬರೋಕೆ ಆಗಿಲ್ಲ. ಲವ್​ ಸ್ಟೋರಿ ಮೂಲಕ ಪ್ಯಾಥೋ ಕಥೆ ಹೇಳಿದ್ದ ಪೃಥ್ವಿ ಈಗ ಕಾಮಿಡಿ ವಿತ್​​ ಲವ್​ಸ್ಟೋರಿ ಸಿನಿಮಾದಲ್ಲಿ ಕಾಣಿಸಿದ್ದಾರೆ.

ಜುಲೈ 8ಕ್ಕೆ ಸಿನಿಪ್ರಿಯರಿಗೆ ‘ಶುಗರ್​ಲೆಸ್’​ ಫುಲ್ ಮೀಲ್ಸ್..!

ಸಕ್ಕರೆ ಕಾಯಿಲೆಯ ಅಕ್ಕರೆಯ ಕಾಮಿಡಿ ಕಥೆ ಶುಗರ್​ ಲೆಸ್​​

ರಿಲೀಸ್​​​ಗೂ ಮುನ್ನ ರಿಮೇಕ್​​ಗೆ ಫುಲ್​ ಡಿಮ್ಯಾಂಡ್​​​..!

ಬಿಗ್​ ಬಾಸ್​​ ಬೆಡಗಿಯ ಜೊತೆ ಶುಗರ್​ಲೆಸ್​​ ಲವ್​​​​​

ದಿಯಾ ಚಿತ್ರದ ಯಶಸ್ಸಿನ ನಂತ್ರ ಕನ್ನಡ ಚಿತ್ರರಂಗಕ್ಕೆ ಪೃಥ್ವಿ ಅಂಬಾರ್​ ಅನ್ನೋ ಪ್ರಾಮಿಸಿಂಗ್​ ಕಲಾವಿದ ಸಿಕ್ರು. ಸದ್ಯ ಇವ್ರ ಕೈಯಲ್ಲಿ ಈಗ ಸಾಲು ಸಾಲು ಸಿನಿಮಾಗಳಿಗೆ. ಸೆಂಚುರಿ ಸ್ಟಾರ್​ ಶಿವಣ್ಣ ಅಭಿನಯದ ಬೈರಾಗಿ ಚಿತ್ರದಲ್ಲಿ ಜೊತೆಯಾಗಿ ಅಭಿನಯಿಸೋ ಚಾನ್ಸ್ ಕೂಡ ​ ಸಿಕ್ತು. ಈ ನಡುವೆ ಶುಗರ್​ ಪೇಷೆಂಟ್​ ಕಥೆಯನ್ನು ಕಾಮಿಡಿಯಾಗಿ ಹೇಳೋಕೆ ಬರ್ತಿದ್ದಾರೆ ಪೃಥ್ವಿ ಅಂಬಾರ್​​.

ಶುಗರ್​ ಲೆಸ್​ ಟೈಟಲ್​​ ಕೇಳ್ತಿದ್ದ ಹಾಗೆ ಇದು ಪಕ್ಕಾ ಸಕ್ಕರೆ ಕಾಯಿಲೆಯಿಂದ ಬಳಲುವ ವ್ಯಕ್ತಿಯ ವೇದನೆಯ ಕಥೆ ಅನ್ನಿಸುತ್ತೆ. ಯೆಸ್​​.. ಆದ್ರೆ ಈ ಸಿನಿಮಾದಲ್ಲಿ ಕೇವಲ ಈ ಕಾಯಿಲೆಯ ಮೇಲೆ ಇರುವ ಭಯ, ಆತಂಕ, ಪರಿಣಾಮಗಳನ್ನು ಇಟ್ಟುಕೊಂಡು ಮಾಡಿದ ಸಿನಿಮಾವಲ್ಲ. ಇದ್ರ ಜೊತೆಗೆ ಹೊಟ್ಟೆ ಹುಣ್ಣಾಗೋ ಕಾಮಿಡಿ ಕೂಡ ಇದೆಯಂತೆ. ಕಾಮಿಡಿಯ ಜೊತೆಗೆ ಇಷ್ಠವಾಗೋ ಲವ್​ಸ್ಟೋರಿ ಹಾಗೂ ಒಂದೊಳ್ಳೆ ಮೆಸೇಜ್​​ ಕೂಡ ಇದೆ.

ಶುಗರ್​ ಲೆಸ್​​​ ಸಿನಿಮಾದ ಹಾಡುಗಳು ಈಗಾಗ್ಲೇ ಯ್ಯೂಟ್ಯೂಬ್​ನಲ್ಲಿ ಸೌಂಡ್​ ಮಾಡ್ತಿವೆ. ಸಿನಿಮಾ ರಿಲೀಸ್​​ಗೂ ಮುನ್ನವೇ ರಿಮೇಕ್​​ಗೆ ಫುಲ್​ ಡಿಮ್ಯಾಂಡ್​ ಬಂದಿದೆಯಂತೆ. ಹಿಂದಿ ರಿಮೇಕ್​​ ರೈಟ್ಸ್​​ ಮಾರಾಟ ಆಗಿದ್ದು ಒಳ್ಳೆ ಮೊತ್ತಕ್ಕೆ ಸೇಲ್​ ಆಗಿದೆಯಂತೆ. ಚಿತ್ರದಲ್ಲಿ ನಟ ಪೃಥ್ವಿ ಅಂಬಾರ್​ಗೆ ನಾಯಕಿಯಾಗಿ ಬಿಗ್​​ ಬಾಸ್​ ಚೆಲುವೆ ಪ್ರಿಯಾಂಕ ತಿಮ್ಮೇಶ್​​ ಕಾಣಿಸಿದ್ದಾರೆ. ಇವರಿಬ್ರ ಕೆಮಿಸ್ಟ್ರಿ ಆನ್​ಸ್ಕ್ರೀನ್​​​ ಮೇಲೆ ಸಖತ್​ ಆಗಿ ಮೂಡಿ ಬಂದಿದೆ.

ಅನುಪ್​ ಸೀಳಿನ್​ ಸೀಳಿನ್​ ಮ್ಯೂಸಿಕ್​​ ಕಂಪೋಸಿಂಗ್​​, ವಿ.ನಾಗೇಂದ್ರ ಪ್ರಸಾದ್​​ ಸಾಹಿತ್ಯದಲ್ಲಿ ಚಿತ್ರದ ಹಾಡುಗಳು ಇಂಪಾಗಿದ್ದು, ರಿಪೀಟ್​​ ಮೋಡ್​​ನಲ್ಲಿ ಹಾಡುಗಳನ್ನು ಆಸ್ವಾದಿಸ್ತಿದ್ದಾರೆ. ಸಿನಿಮಾದಲ್ಲಿ ಶುಗರ್​ ಲೆಸ್​ ಪೇಷೆಂಟ್​​ ಪೃಥ್ವಿಗೆ ಯಾವ ಹುಡುಗಿಯೂ ಲವ್​​​​ ಮಾಡಲ್ಲ ಅನ್ನೋ ಕೊರಗಿದೆ ಅನ್ನಿಸುತ್ತೆ. ಈ ಹತಾಶೆಯ ಕಥೆಯನ್ನು ಸಖತ್​ ಫನ್ನಿಯಾಗಿ ತೆರೆ ಮೇಲೆ ತರೋಕೆ ಶಶಿಧರ ಕೆ.ಎಮ್​​ ಪ್ರಯತ್ನಿಸಿದ್ದಾರೆ.

ಶಶಿಧರ್​ ಪ್ರೊಡಕ್ಷನ್​​ ಬ್ಯಾನರ್​ ಅಡಿಯಲ್ಲಿ ಈ ಸಿನಿಮಾ ನಿರ್ಮಾಣ ಆಗ್ತಿದ್ದು, ಸ್ವತಃ ಶಶಿಧರ್​ ಅವ್ರೇ ಸಿನಿಮಾಗೆ ಆ್ಯಕ್ಷನ್​ ಕಟ್​​ ಹೇಳ್ತಿದ್ದಾರೆ. ಚಿತ್ರದಲ್ಲಿ ನವೀನ್​ ಪಾಡಿಲ್​​, ದತ್ತಣ್ಣ, ಧರ್ಮಣ್ಣ ಸಹಕಲಾವಿದರಾಗಿ ಅಭಿನಯಿಸ್ತಿದ್ದಾರೆ. ಸಕ್ಕರೆ ಕಾಯಿಲೆ ಇರುವ ಯುವಜನತೆಗೆ ಈ ಸಿನಿಮಾ ಸಖತ್ ಮನರಂಜನೆ ಕೊಡಲಿದೆಯಂತೆ. ಈ ಜುಲೈಗೆ ಶುಗರ್​ಲೆಸ್​​ ಎಕ್ಸ್​​ಟ್ರಾ ಕಾಮಿಡಿಯ ಸಿಹಿ ಜೊತೆ ತೆರೆಗಪ್ಪಳಿಸಲಿದೆ. ಎನಿವೇ ಈ ಸಿನಿಮಾಗೆ ಪವರ್​ ಟಿವಿ ಕಡೆಯಿಂದ ಆಲ್​ ದಿ ಬೆಸ್ಟ್​​.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES