Wednesday, January 22, 2025

ಅಭಿಮಾನಿ ದೇವ್ರುಗಳಿಂದ ಬೈರಾಗಿಗೆ ಗ್ರ್ಯಾಂಡ್ ವೆಲ್ಕಮ್

ಅಭಿಮಾನಿಗಳೆ ದೇವರು ಎಂದಿದ್ದ ಅಣ್ಣಾವ್ರ ಪ್ರೀತಿಯ ಕುಡಿ ಸ್ವೀಟ್​ 60 ಶಿವಣ್ಣ ಬೈರಾಗಿ ಅವತಾರದಲ್ಲಿ ಮಿಂಚಲಿದ್ದಾರೆ. ಟಗರು ಫ್ಲೇವರ್​ನಲ್ಲಿ ಡಾಲಿ ಹಾಗೂ ಶಿವಣ್ಣ ಕಾಂಬೋ ತೆರೆಯ ಮೇಲೆ ಮತ್ತೊಮ್ಮೆ ಧೂಳೆಬ್ಬಿಸಲಿದೆ. ಸದ್ಯ ಬೈರಾಗಿ ಟೀಮ್​ ಸಿನಿಮಾ ಪ್ರಚಾರದಲ್ಲಿ ಸಖತ್​ ಬ್ಯೂಸಿ ಇದೆ. ಬೈರಾಗಿ ಯಾತ್ರೆಗೆ ರಾಜ್ಯದಲ್ಲಿ ಹೂಮಳೆ ಸುರಿಸುವ ಮೂಲಕ ಗ್ರ್ಯಾಂಡ್​ ವೆಲ್ಕಮ್​ ಸಿಗ್ತಿದೆ. ಬೈರಾಗಿಗೆ ವೆಲ್ಕಮ್​ ಹೇಗಿತ್ತು ಗೊತ್ತಾ..?

ಅಭಿಮಾನಿ ದೇವ್ರುಗಳಿಂದ ಬೈರಾಗಿಗೆ ಗ್ರ್ಯಾಂಡ್ ವೆಲ್ಕಮ್

ಬೆಂಗಳೂರ್​ ಟು ಚಾಮರಾಜನಗರ..ಬೈರಾಗಿ ರಥ ಯಾತ್ರೆ

ಬಿಡದಿಯ ಫೇಮಸ್​ ತಟ್ಟೆ ಇಡ್ಲಿ ಸವಿದ ಸಿಂಪಲ್​​ ಮ್ಯಾನ್​

ಅಭಿಮಾನಿಗಳ ಜೈಕಾರ..ಡೊಳ್ಳು, ತಮಟೆಯ ಝೇಂಕಾರ

ಶಿವಣ್ಣನ ಬತ್ತಳಿಕೆಯಿಂದ 123ನೇ ಸಿನಿಮಾ ಬೈರಾಗಿ ಜುಲೈ 01ಕ್ಕೆ ರಾಜ್ಯದ್ಯಾಂತ ತೆರೆಗೆ ಬರೋಕೆ ಸಜ್ಜಾಗಿದೆ ಈ ಚಿತ್ರದಲ್ಲಿ ಟಗರು ಡಾಲಿ, ಶಿವಣ್ಣ ಮತ್ತೆ ಮುಖಾಮುಖಿಯಾಗಲಿದ್ದಾರೆ. ದಿಯಾ ಖ್ಯಾತಿಯ ಪೃಥ್ವಿ ಅಂಬಾರ್​ ಕೂಡ  ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡು ಚಿತ್ರದ ಟೆಂಪರೇಚರ್​​ ಹೆಚ್ಚಿಸಿದ್ದಾರೆ. ರಾಜ್ಯಾದ್ಯಂತ ಬೈರಾಗಿ ರಥಯಾತ್ರೆಯ ಮೂಲಕ ಭರ್ಜರಿ ಪ್ರಚಾರ ಮಾಡ್ತಿದೆ ಚಿತ್ರತಂಡ. ಎಲ್ಲಾ ಕಡೆ ಹೂಮಳೆ ಸುರಿಸಿ ಬೈರಾಗಿಯನ್ನು ಗ್ರ್ಯಾಂಡ್​ ವೆಲ್ಕಮ್​ ಮಾಡಿಕೊಳ್ಳಲಾಗ್ತಿದೆ.

ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಬೈರಾಗಿ ಟೀಮ್​ ಪ್ರಚಾರದ ಯಾತ್ರೆ ಶುರು ಮಾಡಿದೆ. ಬೆಂಗಳೂರಿನಿಂದ ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು ಮಂಡ್ಯ ಮೂಲಕ ಮೈಸೂರಿಗೆ ತೆರಳಿದೆ.  ಮೈಸೂರಿನಲ್ಲಿ ಸುದ್ದಿಗೋಷ್ಠಿ ಮುಗಿಸಿ ಚಾಮುಂಡಿ ಬೆಟ್ಟಕ್ಕೆ ಹೋಗಿ ದೇವಿಯ ಆಶೀರ್ವಾದ ಪಡೆದು, ಇದಾದ ನಂತ್ರ ಚಾಮರಾಜನಗರದಲ್ಲಿ ಅದ್ಧೂರಿ ಪ್ರೀ ರಿಲೀಸ್​ ಇವೆಂಟ್​​ ಕಾರ್ಯಕ್ರಮದಲ್ಲಿ ಭಾಗಿಯಾಗಲಿದೆ.

ಬೈರಾಗಿ ಸಿನಿಮಾಗೆ ವಿಜಯ್​ ಮಿಲ್ಟನ್  ಆ್ಯಕ್ಷನ್​ ಕಟ್​ ಹೇಳಿದ್ದು ಚಿತ್ರರಸಿಕರಿಗೆ ನಿರೀಕ್ಷೆಗಳು ನೂರು ಪಟ್ಟು ಹೆಚ್ಚಾಗಿದೆ. ಸ್ಟಾರ್​ ಕಲಾವಿದರ ಸಮಾಗಮದಲ್ಲಿ ಬೈರಾಗಿ ಸಖತ್​ ಸೌಂಡ್​ ಮಾಡೋ ಸೂಚನೆ ಕೂಡ ಕೊಟ್ಟಿದೆ. ಬೈರಾಗಿಗೆ ಎಲ್ಲಾ ಕಡೆ ಸಖತ್​ ರೆಸ್ಪಾನ್ಸ್​ ಕೂಡ ಸಿಕ್ತಿದೆ.ಈ ನಡುವೆ ಪ್ರಚಾರದ ಸಮಯದಲ್ಲೂ  ಶಿವಣ್ಣ ಸಾಮಾನ್ಯ ವ್ಯಕ್ತಿಯಾಗಿ  ಬಿಡದಿಯ ಹೋಟೆಲ್​ನಲ್ಲಿ ಫೇಮಸ್​ ತಟ್ಟೆ ಇಡ್ಲಿ ಸವಿದು ಸರಳತೆ ಮೆರೆದಿದ್ದಾರೆ.

ಬೈರಾಗಿ ಟೀಮ್​ ರಾಮನಗರಕ್ಕೆ ಎಂಟ್ರಿ ಕೊಡ್ತಾ ಇದ್ದಂತೆ ಶಿವಣ್ಣ ಹಾಗೂ ಡಾಲಿ ಅಭಿಮಾನಿಗಳು ಡೊಳ್ಳು ತಮಟೆ, ಶಿಳ್ಳೆ ಚಪ್ಪಾಳೆ ಮೂಲಕ ಅದ್ಧೂರಿಯಾಗಿ ಸ್ವಾಗತ ಮಾಡಿದ್ದಾರೆ. ಹೂ ಮಳೆ ಸುರಿಸಿ. ಬೃಹತ್​​ ಹಾರಗಳನ್ನು ಹಾಕುವ ಮೂಲಕ ಅಭಿಮಾನದ ಪರಾಕಾಷ್ಠೆ ಮೆರೆದಿದ್ದಾರೆ.

 

ಅಂತೂ ಹೋದಲ್ಲಿ ಬಂದಲ್ಲಿ ಬೈರಾಗಿಗೆ ಅದ್ಧೂರಿ ವೆಲ್ಕಮ್​ ಸಿಗ್ತಿದೆ. ವಿಜಯ್​ ಮಿಲ್ಟನ್​ ಡೈರೆಕ್ಷನ್​​​, ಕೃಷ್ಣ ಸಾರ್ಥಕ್​​ ನಿರ್ಮಾಣಕ್ಕೆ ಪ್ರೇಕ್ಷಕ ಮಹಾಪ್ರಭುಗಳು ಬಹುಪರಾಕ್​​ ಅಂತಾರಾ ಅನ್ನೋದಕ್ಕೆ ಜುಲೈ 01ರಂದು ಉತ್ತರ ಸಿಗಲಿದೆ. ಇಂದು ಚಾಮರಾಜನಗರದ ಅಂಬೇಡ್ಕರ್​ ಕ್ರೀಡಾಂಗಣದಲ್ಲಿ ಗ್ರ್ಯಾಂಡ್​​ ಪ್ರಿ ರಿಲೀಸ್​ ಇವೆಂಟ್​​ ಸಮಾರಂಭ ಕೂಡ ನಡಿತಿದೆ. ಅನೂಪ್​ ಸೀಳಿನ್​ ಸಂಗೀತದ ಮೋಡಿಗೆ ಈಗಾಗ್ಲೇ ಫ್ಯಾನ್ಸ್​ ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದಾರೆ. ಒಟ್ಟಾರೆ ಬೈರಾಗಿ ಭರಾಟೆಗೆ ಚಿತ್ರಪ್ರೇಮಿಗಳ ರೆಸ್ಪಾನ್ಸ್​ ಹೇಗಿರುತ್ತೆ ಕಾದು ನೋಡಬೇಕು.

ರಾಕೇಶ್​​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES