Sunday, January 19, 2025

ಸಲಾರ್​​ನಲ್ಲಿ ಪೃಥ್ವಿರಾಜ್ ಪವರ್​ಫುಲ್ ಎಕ್ಸ್​ಕ್ಲೂಸಿವ್

ಮಾನ್​ಸ್ಟರ್ ಡೈರೆಕ್ಟರ್ ನೀಲ್ ಹಾಗೂ ಡಾರ್ಲಿಂಗ್ ಪ್ರಭಾಸ್ ಗತ್ತು ಗಮ್ಮತ್ತು ಮುಗಿಲು ಮುಟ್ಟಲಿದೆ. ಸೆನ್ಸೇಷನಲ್ ಸಲಾರ್​ಗೆ ಮಲಯಾಳಂ ಸೂಪರ್ ಸ್ಟಾರ್ ಪೃಥ್ವಿರಾಜ್ ಮಾಸ್ ಎಂಟ್ರಿ ಕೊಡಲಿದ್ದಾರೆ. ಯೆಸ್.. ಇದನ್ನ ಕೇರಳಾದಲ್ಲಿ ಕನ್ನಡ ಸಿನಿಮಾಗಳ ಬ್ರ್ಯಾಂಡ್ ಅಂಬಾಸಿಡರ್ ಆಗಿರೋ ಪೃಥ್ವಿರಾಜ್ ಸುಕುಮಾರನ್ ಅವ್ರೇ ನಮ್ಮ ಪವರ್ ಟಿವಿ ಜೊತೆ ಎಕ್ಸ್​ಕ್ಲೂಸಿವ್ ಆಗಿ ಮಾತನಾಡಿದ್ದಾರೆ.

ಸಲಾರ್​​ನಲ್ಲಿ ಪೃಥ್ವಿರಾಜ್.. ಪವರ್​ಫುಲ್ ಎಕ್ಸ್​ಕ್ಲೂಸಿವ್

ಕೇರಳಾದಲ್ಲಿ ಕನ್ನಡ ಚಿತ್ರಗಳಿಗೆ ಬ್ರ್ಯಾಂಡ್ ಅಂಬಾಸಿಡರ್

ಕೆಜಿಎಫ್, 777 ಚಾರ್ಲಿ ಚಿತ್ರಗಳಿಂದ ದುಡ್ಡಾಯ್ತು- ಪೃಥ್ವಿ

ಪವರ್ ಟಿವಿಯಲ್ಲಿ ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್..!

ಕೆಜಿಎಫ್- 2 ಬಳಿಕ ಭಾರತೀಯ ಚಿತ್ರರಂಗದ ಸೆನ್ಸೇಷನಲ್ ಡೈರೆಕ್ಟರ್ ಪ್ರಶಾಂತ್ ನೀಲ್ ನೆಕ್ಸ್ಟ್ ವೆಂಚರ್ ಸಲಾರ್. ಡಾರ್ಲಿಂಗ್ ಪ್ರಭಾಸ್ ಜೊತೆ ತಯಾರಾಗ್ತಿರೋ ಈ ಸಿನಿಮಾ ಬಾಹುಬಲಿ, ಕೆಜಿಎಫ್ ಹಾಗೂ ಪುಷ್ಪ ಸಿನಿಮಾಗಳಂತೆ ಎರಡೆರಡು ಭಾಗಗಳಲ್ಲಿ ಬರಲಿದ್ದು, ಮೇಕಿಂಗ್ ಹಂತದಲ್ಲೇ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿದೆ. ಹೊಂಬಾಳೆ ಫಿಲಂಸ್​ನ ವಿಜಯ್ ಕಿರಗಂದೂರು ನಿರ್ಮಾಣದ ಈ ಚಿತ್ರ ಹತ್ತು, ಹಲವು ವಿಶೇಷತೆಗಳಿಂದ ಜೋರಾಗೇ ಸೌಂಡ್ ಮಾಡ್ತಿದೆ.

ಪ್ರಭಾಸ್ ಜೊತೆ ನಮ್ಮ ರಾಕಿಭಾಯ್ ಯಶ್ ನಟಿಸ್ತಾರೆ ಎನ್ನಲಾಗ್ತಿತ್ತು. ಆದ್ರೆ ಅದು ನಿಜವಾಗದಿದ್ರೂ ಮತ್ತೊಬ್ಬ ಸೂಪರ್ ಸ್ಟಾರ್ ಸಲಾರ್ ಅಡ್ಡಾಗೆ ಎಂಟ್ರಿ ಕೊಡೋದು ಪಕ್ಕಾ ಆಗಿದೆ. ಯೆಸ್.. ಹಿ ಈಸ್ ನನ್ ಅದರ್ ದ್ಯಾನ್ ಮಲಯಾಳಂ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್. ಕೆಜಿಎಫ್ ಸಿನಿಮಾನ ಮಲಯಾಳಂನಲ್ಲಿ ಡಿಸ್ಟ್ರಿಬ್ಯೂಟ್ ಮಾಡೋಕೂ ಮೊದ್ಲೇ ಈ ಆಫರ್ ಪಡೆದಿದ್ದ ಪರಥ್ವಿರಾಜ್, ಡೇಟ್ಸ್ ಕ್ಲ್ಯಾಶ್ ಹಾಗೂ ಕೊರೋನಾದಿಂದಾಗಿ ಅದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿರಲಿಲ್ಲವಂತೆ. ಆದ್ರೀಗ ಪವರ್ ಟಿವಿ ಕೇಳಿದ ಪ್ರಶ್ನೆಗೆ ಪೃಥ್ವಿ ಅವ್ರೇ ಎಕ್ಸ್​ಕ್ಲೂಸಿವ್ ಆಗಿ ಅದನ್ನ ರಿವೀಲ್ ಮಾಡಿದ್ದಾರೆ.

20 ವರ್ಷದಲ್ಲಿ 120 ಸಿನಿಮಾ ಮಾಡಿರೋ ನಟ, ನಿರ್ದೇಶಕ, ನಿರ್ಮಾಪಕ ಕಮ್ ಗಾಯಕ ಪೃಥ್ವಿರಾಜ್ ಬರೀ ಮಲಯಾಳಂಗಷ್ಟೇ ಸೀಮಿತವಾಗಿಲ್ಲ. ತೆಲುಗು, ತಮಿಳು, ಹಿಂದಿಯಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಸದ್ಯ ಇವ್ರ ಕಡುವ ಮೂವಿ ಪ್ಯಾನ್ ಇಂಡಿಯಾ ಲೆವೆಲ್​​ನಲ್ಲಿ ರಿಲೀಸ್ ಆಗ್ತಿದ್ದು, ಅದ್ರ ಪ್ರಮೋಷನ್ಸ್​ಗೆ ನಮ್ಮ ಬೆಂಗಳೂರಿಗೆ ಬಂದಿದ್ದ ಪೃಥ್ವಿರಾಜ್, ಸಾಕಷ್ಟು ವಿಷಯಗಳನ್ನು ಹಂಚಿಕೊಂಡ್ರು.

ಮಲಯಾಳಂನಲ್ಲಿ ಕೆಜಿಎಫ್ ಹಾಗೂ 777 ಚಾರ್ಲಿ ಡಿಸ್ಟ್ರಿಬ್ಯೂಷನ್​ ಪಡೆಯೋ ಮೂಲಕ ಕೇರಳಾದಲ್ಲಿ ಕನ್ನಡ ಸಿನಿಮಾಗಳಿಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ ಈ ಸರಳತೆಯ ಸಾಮ್ರಾಟ. ಅಷ್ಟೇ ಅಲ್ಲ, ಅದನ್ನ ಹೆಮ್ಮೆಯಿಂದ ವೇದಿಕೆಯಲ್ಲಿ ಹೇಳಿಕೊಳ್ಳೋದ್ರ ಜೊತೆ ಅದ್ರಿಂದ ಒಳ್ಳೆಯ ಲಾಭ ಕೂಡ ಬಂದಿದೆ ಎಂದರು.

ಶಿವರಾಜ್​ಕುಮಾರ್, ಸುದೀಪ್, ಯಶ್ ಹಾಗೂ ರಕ್ಷಿತ್ ಶೆಟ್ಟಿ ಕುರಿತು ಸಾಕಷ್ಟು ಒಳ್ಳೆಯ ವಿಚಾರಗಳನ್ನು ಹಂಚಿಕೊಂಡ ಪೃಥ್ವಿರಾಜ್, ಮಲಯಾಳಂ ಚಿತ್ರಗಳನ್ನು ದೇಶವ್ಯಾಪಿ ಸದ್ದು ಮಾಡಿಸೋ ಮಹದಾಸೆ ಹೊಂದಿದ್ದಾರೆ. ಅಲ್ಲದೆ, ನಮ್ಮ ಪವರ್ ಟಿವಿಯ ಫಿಲ್ಮ್ ಬ್ಯೂರೋ ಹೆಡ್ ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ ಜೊತೆ ಎಕ್ಸ್​ಕ್ಲೂಸಿವ್ ಆಗಿ ಮಾತನಾಡಿದ್ರು.

ಅದೇನೇ ಇರಲಿ, ಯಶ್ ರೀತಿ ಫೋಕಸ್ಡ್ ಆಗಿರೋ ಪೃಥ್ವಿರಾಜ್​ರ ಸಿನಿಮೋತ್ಸಾಹ ನಿಜಕ್ಕೂ ಇಂಟರೆಸ್ಟಿಂಗ್ ಹಾಗೂ ಇಂಪ್ರೆಸ್ಸೀವ್ ಅನಿಸಿದೆ. ಹೊಂಬಾಳೆ ಮೂಲಕ ಕನ್ನಡಕ್ಕೆ ಕಾಲಿಡ್ತಿರೋ ಅವ್ರಿಗೆ ತುಂಬು ಹೃದಯದಿಂದ ಸ್ವಾಗತ ಬಯಸೋಣ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES