Thursday, January 23, 2025

ಪಠ್ಯದಲ್ಲಿ ನಿಜಾಂಶ ಮುಚ್ಚಿಡುತ್ತಿರುವುದು ಅಕ್ಷಮ್ಯ ಅಪರಾಧ : ಶ್ರೀಗಳು

ದಾವಣಗೆರೆ : ಪಠ್ಯದಲ್ಲಿ ನಿಜ ಅಂಶ ಮುಚ್ಚಿಡುತ್ತಿರುವುದು ಅಕ್ಷಮ್ಯ ಅಪರಾದ ಎಂದು ದಾವಣಗೆರೆಯ ಬೆಳ್ಳೂಡಿ ಮಠದಲ್ಲಿ ಕಾಗಿನೆಲೆ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.

ಪಠ್ಯದಲ್ಲಿ ಕನಕದಾಸರ ವಿಷಯ ಖಡಿತ ಮಾಡಿರುವ ವಿಚಾರವಾಗಿ ಮಾತನಾಡಿದ ಅವರು, ಪಠ್ಯಕ್ರಮದಿಂದ ದೊಡ್ಡ ಗೊಂದಲವೇ ಸೃಷ್ಠಿಯಾಗಿದೆ. ಲೋಪ ಆದಷ್ಟು ಬೇಗ ಸರಿಪಡಿಸಿಕೊಳ್ಳಿ. ಉದ್ದಟತನ ಮುಂದುವರೆದರೆ, ಮುಂದೆ ಕಷ್ಟ ಆನುಭವಿಸಬೇಕಾಗುತ್ತೆ ಎಂದರು.

ಅದಲ್ಲದೇ, ಎಲ್ಲರ ಜೊತೆ ಸೇರಿ ಮುಂದೇ ದೊಡ್ಡ ಹೋರಾಟ ಮಾಡಬೇಕಾಗುತ್ತದೆ. ಯಾವುದು ಒಂದು ಜಾತಿಗೆ ಪಠ್ಯ ಸೀಮಿತ ಆಗುವುದು ಬೇಡ. ಕುವೆಂಪು, ಕನಕದಾಸ, ಬಸವಣ್ಣರ ಬಗ್ಗೆ ಸತ್ಯ ತಿಳಿಸಿ. ಪಠ್ಯದಲ್ಲಿ ನಿಜ ಅಂಶ ಮುಚ್ಚಿಡುತ್ತಿರುವುದು ಅಕ್ಷಮ್ಯ ಅಪರಾದ. ಆದಷ್ಟು ಬೇಗ ಸರ್ಕಾರ ತಪ್ಪುಗಳನ್ನ ತಿದ್ದುಕೊಳ್ಳಲಿ. ಇಲ್ಲದಿದ್ದಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

RELATED ARTICLES

Related Articles

TRENDING ARTICLES