ಬಳ್ಳಾರಿ : ನನ್ನ ಸ್ಪರ್ಧೆ ಬಗ್ಗೆ ಪಕ್ಷ ನಿರ್ಧಾರ ಮಾಡುತ್ತದೆ.ಸದ್ಯಕ್ಕೆ ಸೇವೆ ಮಾಡುವ ಅವಕಾಶವನ್ನ ಭಗವಂತ ನೀಡಿದ್ದಾನೆ ಎಂದು ಬಳ್ಳಾರಿಯಲ್ಲಿ ಉಸ್ತುವಾರಿ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಮಹಾರಾಷ್ಟ್ರ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ಪಾತ್ರವಿಲ್ಲ. ನಾವೂ ಆಪರೇಷನ್ ಕಮಲ ಮಾಡುತ್ತಿಲ್ಲ. ಮಹಾರಾಷ್ಟ್ರ ಸಿಎಂ ಉದ್ದವ ಠಾಕ್ರೆ ರಾಜೀನಾಮೆ ನೀಡ್ತಾರೆ ಅನ್ನೋ ಮಾಹಿತಿ ಇದೆ. ಈ ರೀತಿಯ ಹಲವಾರು ರೀತಿಯ ರಾಜಕೀಯ ಘಟನೆಗಳು ಬೇರೆ ಬೇರೆ ರಾಜ್ಯಗಳಲ್ಲಿ ನಡೆದಿವೆ. ಅಲ್ಲಿನ ಶಾಸಕರೇ ಆ ಸರ್ಕಾರದಲ್ಲಿ ಇರಲ್ಲ ಅಂದ ಮೇಲೆ ಮಹಾರಾಷ್ಟ್ರ ಸರ್ಕಾರ ಉಳಿಯುವ ಮಾತೇ ಇಲ್ಲ ಎಂದರು.
ಅದಲ್ಲದೇ, ಮನಸ್ಸು ಮಾಡಿದ್ರೆ ನಾನು ಒಂದು ಸಿಎಂ ಆಗುತ್ತೇನೆ ಎನ್ನುವ ಜರ್ನಾದನ ರೆಡ್ಡಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ಜರ್ನಾದನ ರೆಡ್ಡಿ ಅವರನ್ನೆ ಕೇಳಬೇಕು. ಜರ್ನಾದನ ರೆಡ್ಡಿ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲ್ಲ. ಜನಾರ್ದನರೆಡ್ಡಿ ಹೇಳಿಕೆ ಬಿಜೆಪಿ ಪಕ್ಷದ ನಿಲುವಲ್ಲ. ಅದು ಅವರ ವಯಕ್ತಿಕ ಹೇಳಿಕೆಯಾಗಿದೆ. ಅವರ ಹೇಳಿಕೆಗೂ ಬಿಜೆಪಿಗೂ ಸಂಬಂಧವಿಲ್ಲ. ಜನಾರ್ದನ ರೆಡ್ಡಿ ಹೇಳಿಕೆ ವಿಚಾರ ದಲ್ಲಿ ಅಂತರ ಕಾಯ್ದುಕೊಂಡ ಶ್ರೀರಾಮುಲು. ನಾನು ಯಾವ ಕ್ಷೇತ್ರದಿಂದ ಸ್ಪರ್ದೆ ಮಾಡಬೇಕೆಂದು ಇನ್ನೂ ನಿರ್ಧಾರ ಮಾಡಿಲ್ಲ. ನನ್ನ ಸ್ಪರ್ಧೆ ಬಗ್ಗೆ ಪಕ್ಷ ನಿರ್ಧಾರ ಮಾಡುತ್ತದೆ.ಸದ್ಯಕ್ಕೆ ಸೇವೆ ಮಾಡುವ ಅವಕಾಶವನ್ನ ಭಗವಂತ ನೀಡಿದ್ದಾನೆ. ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆಗಿರುವೆ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುವೆ ಎಂದು ಹೇಳಿದರು.