Thursday, December 19, 2024

ಮನುಷ್ಯನ ಕಂಠದಲ್ಲಿ ಸಿಲುಕಿದ ಲೋಹದ ಶ್ರೀಕೃಷ್ಣ ಮೂರ್ತಿ

ಬೆಳಗಾವಿ : 45 ವರ್ಷದ ವ್ಯಕ್ತಿಯೊಬ್ಬ ದೇವರ ತೀರ್ಥ ಸೇವನೆ ಮಾಡುವ ಅಭ್ಯಾಸ ಹೊಂದಿದ್ದ. ಎಂದಿನಂತೆ ತೀರ್ಥ ಸೇವನೆ ಮಾಡುವಾಗ ಗಮನಿಸದೇ ಲೋಹದ ಕೃಷ್ಣನನ್ನು ನುಂಗಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಶ್ರಸ್ತ್ರ ಚಿಕಿತ್ಸೆ ಮೂಲಕ ಲೋಹದ ಶ್ರೀಕೃಷ್ಣ ಮೂರ್ತಿಯನ್ನು ವೈದ್ಯರು ಹೊರತೆಗೆದಿದ್ದಾರೆ . ಬೆಳಗಾವಿಯ 45 ವರ್ಷದ ವ್ಯಕ್ತಿ ಮನೆಯಲ್ಲಿ ನಿತ್ಯ ಪೂಜೆ ಮಾಡುತ್ತಿದ್ದ. ಪೂಜೆ ಮಾಡಿದ ತೀರ್ಥವನ್ನು ಸೇವಿಸುವ ಅಭ್ಯಾಸ ಮಾಡಿಕೊಂಡಿದ್ದ. ತೀರ್ಥ ಸೇವನೆ ಮಾಡುವಾಗ ಲೋಹದ ಕೃಷ್ಣನ ಮೂರ್ತಿ ನುಂಗಿರುವ ವ್ಯಕ್ತಿ. ಗಂಟಲು ನೋವು, ಊತ ಉಂಟಾಗಿ ಸ್ಥಳೀಯ ವೈದ್ಯರನ್ನು ಸಂಪರ್ಕಿಸಿದ್ದಾನೆ.

ಅದಲ್ಲದೇ, ವೈದ್ಯರ ಸೂಚನೆ ಮೇರೆಗೆ ಎಕ್ಸರೇ ಮಾಡಿಸಿಕೊಂಡಿರುವ ವ್ಯಕ್ತಿ. ಎಕ್ಸರೇ ರಿಪೋರ್ಟ್‌ಲ್ಲಿ ಕೃಷ್ಣನ ಮೂರ್ತಿ ಗಂಟಲಿನಲ್ಲಿರುವುದು ಸೆರೆಯಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಕೆಎಲ್ಇ ಆಸ್ಪತ್ರೆಗೆ ದಾಖಲಾಗಿದ್ದು, ಇಎನ್ ಟಿ ವಿಭಾದ ವೈದ್ಯ ಡಾ.ಪ್ರೀತಿ ಹಜಾರೆ, ಡಾ.ವಿನಿತಾ ಮೆಡಗುಡ್ಡಮಠ ನೇತೃತ್ವದಲ್ಲಿ ಗಂಟಲಿನಿಂದ ಮೂರ್ತಿ ಹೊರತೆಗೆದಿದ್ದಾರೆ.

RELATED ARTICLES

Related Articles

TRENDING ARTICLES