Monday, December 23, 2024

ಗಿಟಾರ್​ ಪೋಸ್​ನಲ್ಲಿ ರಕ್ಕಮ್ಮ ಮಿರ ಮಿರ ಮಿಂಚಿಂಗ್​

ಪ್ಯಾನ್​ ಇಂಡಿಯಾ ಲೆವೆಲ್​​​ನಲ್ಲಿ ಕೋಟ್ಯಂತರ ಚಿತ್ರರಸಿಕರನ್ನು ಬೆಚ್ಚಿ ಬೀಳಿಸೋಕೆ ಬರ್ತಿದ್ದಾನೆ ಗುಮ್ಮ. ಟ್ರೈಲರ್​ ನೋಡಿದ ಮೇಲೆ ಐ ಕಾಂಟ್​ ವೆಯ್ಟ್​ ಅಂತಿದೆ ಸಿನಿದುನಿಯಾ. ಕಗ್ಗತ್ತಲ ಕಾಡೊಳಗೆ ಭಯಾನಕ ಗುಮ್ಮನ ಘೋರ ಸದ್ದಿನ ಘರ್ಜನೆಗೆ  ದಿನಗಣನೆ ಶುರುವಾಗಿದೆ. ಕಿಚ್ಚನ ಕ್ರೇಜ್​ಗೆ ಮುಂಬೈವಾಲಾಗಳು ಕೂಡ ಶೇಕ್​ ಆಗಿದ್ದಾರೆ.

ಮುಂಬೈ, ಕೊಚ್ಚಿ, ಚೆನ್ನೈನಲ್ಲಿ ಕಿಚ್ಚನ ಕ್ರೇಜ್ ನೋಡಿದ್ರಾ..?

ಗಿಟಾರ್​ ಪೋಸ್​ನಲ್ಲಿ  ರಕ್ಕಮ್ಮ ಮಿರ ಮಿರ ಮಿಂಚಿಂಗ್​

ಎಲ್ಲೆಲ್ಲೂ ರಾ.. ರಾ.. ರಕ್ಕಮ್ಮ.. ಜಾಕ್ವೆಲಿನ್​​ ಫುಲ್​​ ಹವಾ

ಸದ್ಯದಲ್ಲೇ ಎಂಟು ದಿಕ್ಕು ತೋರಿಸೋಕೆ ಗುಮ್ಮ ಕಮಿಂಗ್​

ಸೌತ್​ ಸಿನಿಮಾಗಳ ಅಬ್ಬರ ನೋಡಿದ್ರೆ ಇಡೀ ಪ್ರಪಂಚವನ್ನೇ ರೂಲ್​ ಮಾಡೊಕೆ ಹೊರಟ ಹಾಗೆ ಕಾಣ್ತಿದೆ. ಭಾಷೆ, ಗಡಿಯ ರೇಖೆಗಳನ್ನ ದಾಟಿ ಇಡೀ ವಿಶ್ವವನ್ನೇ ಒಂದೇ ಚಿತ್ರರಂಗದ ನೆರಳಿನಲ್ಲಿ ಒಂದು ಮಾಡ್ತಿವೆ ಸೌತ್​ ಸಿನಿಮಾಗಳು. ಭಾರತೀತ ಚಿತ್ರರಂಗ ಅಂದ್ರೆ ಬಾಲಿವುಡ್​​ ಅನ್ನೋ ಕಾನ್ಸೆಪ್ಟ್​ಗೆ ತಿಲಾಂಜಲಿ ಇಟ್ಟು, ಎಳ್ಳು ನೀರು ಬಿಟ್ಟು, ಎಲ್ಲರ ಹುಬ್ಬೇರಿಸುವಂತೆ ಮಾಡ್ತಿದೆ ಸೌತ್ ದುನಿಯಾ. ಈ ಸಾಲಿನಲ್ಲಿ ಸ್ಯಾಂಡಲ್​ವುಡ್​​ ಬಾದ್​ಷಾ ಕಿಚ್ಚನ ವಿಕ್ರಾಂತ್​ ರೋಣ ಕೂಡ ಸೇರಿದೆ.

ಸದ್ಯ ಊರಲ್ಲೆಲ್ಲಾ ಇವನದ್ದೇ ಸದ್ದು ಗದ್ದಲ. ಟ್ರೈಲರ್​​ ರಿಲೀಸ್​ ಆದ್ಮೇಲಂತೂ ರೋಣನ ಫೀವರ್​ ಜೋರಾಗಿದೆ. ಕುಂತ್ರೂ ನಿಂತ್ರೂ ರೋಣನ ಜಪ ಶುರುವಾಗಿದೆ. ಮುಂಬೈ, ಚೆನ್ನೈ, ಕೊಚ್ಚಿ ನಾಡಿನಲ್ಲೂ ಗುಮ್ಮನ ಭಯ ಜೋರಾಗಿ ಆವರಿಸಿದೆ. ಮುಂಬೈನಲ್ಲಿ ಪ್ರೊಮೋಷನ್ ಕಾರ್ಯದಲ್ಲಿ ಬ್ಯುಸಿ ಇರೋ ರೋಣ ಟೀಮ್,​ ಗಿಟಾರ್​ ಪೋಸ್​ ಕೊಟ್ಟು ಮಿರ ಮಿರ ಮಿಂಚಿದೆ. ಕಿಚ್ಚನಿಗೆ ರಕ್ಕಮ್ಮ ಸಾಥ್​ ಕೊಟ್ಟು, ಮಸ್ತ್​ ಸ್ಟೆಪ್ಸ್​ ಹಾಕಿ ಪ್ಯಾನ್ ಇಂಡಿಯಾ ಪ್ರೊಮೋಷನ್ಸ್​ ಕಿಕ್​ಸ್ಟಾರ್ಟ್​ ಮಾಡಿದ್ದಾರೆ.

ರಕ್ಕಮ್ಮನ ಭಜನೆಯಲ್ಲಿ ರಸಿಕರು ಯಕ್ಕ ಸಕ್ಕ ಅಂತ ಸ್ಟೆಪ್ಸ್​ ಹಾಕಿ ಸುಸ್ತಾಗಿದ್ದಾರೆ. ಗಡಾಂಗ್​​ ರಕ್ಕಮ್ಮನ ಡೈಲಾಗ್​​ ಕೇಳಿ ದಂಗ್​ ಆಗಿದ್ದಾರೆ. ಅನೂಪ್​ ಭಂಡಾರಿ ನಿರ್ದೇಶನದ ರಂಗಿತರಂಗ ಎಫೆಕ್ಟ್​​​ ಲೆವೆಲ್​​ ವಿಕ್ರಾಂತ್ ರೋಣದಲ್ಲಿ ಹತ್ತು ಪಟ್ಟು ಜಾಸ್ತಿ ಇರಲಿದೆ.  ಭಯಾನೇ ತುಂಬಿದ ಊರಿಗೆ ಭಯ ಅಂದ್ರೆ ಏನು ಅಂತಾನೆ ಗೊತ್ತಿಲ್ಲದೆ ಇರೋ ರೋಣ, ಜುಲೈ 28ಕ್ಕೆ  ಬರ್ತಿದ್ದಾನೆ. ಮುಂಬೈ ಪ್ರೆಸ್​ ಮೀಟ್​ನಲ್ಲಿ ಸಿನಿಮಾದ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ ಕಿಚ್ಚ ಸುದೀಪ.

ವಿಕ್ರಾಂತ್​ ರೋಣ ಸಿನಿಮಾದ ಹಿಂದಿ ವರ್ಷನ್​ ಟ್ರೈಲರ್​ ಲಾಂಚ್​ ಮಾಡೋಕೆ ರೋಣ ಟೀಮ್​ ಮುಂಬೈಗೆ ತೆರಳಿತ್ತು. ಸಮಾರಂಭದಲ್ಲಿ ಟ್ರೈಲರ್​ ಅನಾವರಣ ಮಾಡಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಸ್ಟೈಲಿಶ್​ ಐಕಾನ್​ ಕಿಚ್ಚ ಸುದೀಪ್​​  ಸಿನಿಕರಿಯರ್​ನಲ್ಲೇ ಈ ಸಿನಿಮಾ ಹೊಸ ಮೈಲಿಗಲ್ಲಾಗಲಿದೆ. ಚಿತ್ರದ ಟ್ರೈಲರ್ ಯ್ಯೂಟ್ಯೂಬ್​ನಲ್ಲಿ ದಾಖಲೆಯ ಹಿಟ್ಸ್​​ ದಾಖಲಿಸಿದೆ. ಹಾಗಾಗಿ ಸಿನಿಮಾ ಮೇಲಿನ ನಿರೀಕ್ಷೆಯೂ ದುಪ್ಪಟ್ಟಾಗಿದೆ.

ಸಿನಿಮಾದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್​​ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡ್ರೆ, ನಿರೂಪ್​ ಭಂಡಾರಿ, ನೀತಾ ಅಶೋಕ್​​ ಮುಖ್ಯಭೂಮಿಕೆಯಲ್ಲಿ ಮಿಂಚಿದ್ದಾರೆ. ರೋಣನಿಗೆ ಅನೂಪ್​ ಭಂಡಾರಿ ಆ್ಯಕ್ಷನ್​ ಕಟ್​ ಹೇಳಿದ್ರೆ, ಶಾಲಿನಿ ಮಂಜುನಾಥ್​​ ಸಹಬಾಗಿತ್ವದಲ್ಲಿ ಜಾಕ್​ ಮಂಜುನಾಥ್​ ಬಂಡವಾಳ ಹೂಡಿದ್ದಾರೆ.  ವಿಲಿಯಮ್​ ಡೇವಿಡ್​​ ಕ್ಯಾಮೆರಾ ಕಣ್ಣು ಹೊಸ ಪ್ರಪಂಚ ದರ್ಶನ ಮಾಡಿಸಲಿದೆ. ಅಜನೀಶ್​ ಲೋಕನಾಥ್​ರ​ ಮ್ಯೂಸಿಕ್​ ಮ್ಯಾಜಿಕ್ ಮಾಡ್ತಿದೆ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯುರೋ, ಪವರ್ ಟಿವಿ 

RELATED ARTICLES

Related Articles

TRENDING ARTICLES