Friday, November 22, 2024

ಯಾದಗಿರಿ ಜಿಲ್ಲಾಡಳಿತದಿಂದ ಭಾರಿ ಹೈ ಅಲರ್ಟ್​ ಘೋಷಣೆ

ಯಾದಗಿರಿ : ಕೃಷ್ಣಾ ನದಿ ಪ್ರದೇಶದ ಗ್ರಾಮಗಳ ಜನರು, ಜಾನುವಾರಗಳು ನದಿ ಪಾತ್ರದ ಹತ್ತಿರ ಹೋಗದಂತೆ ಜಿಲ್ಲಾಡಳಿತ ಹೈ ಅಲರ್ಟ್​ ಘೋಷಣೆಯನ್ನು ನೀಡಿದ್ದಾರೆ.

ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಪ್ರವಾಹ ಭೀತಿ ಉಂಟಾಗುವ ಹಿನ್ನಲೆಯಲ್ಲಿ ಕೃಷ್ಣಾ ನದಿ ಪ್ರದೇಶದ ಗ್ರಾಮಗಳ ಜನರು, ಜಾನುವಾರಗಳು ನದಿ ಪಾತ್ರದ ಹತ್ತಿರ ಹೋಗದಂತೆ ಜಿಲ್ಲಾಡಳಿತ ಹೈ ಅಲರ್ಟ ಘೋಷಣೆ ನೀಡಿದ್ದು, ನದಿ ಪಾತ್ರದ ಹತ್ತಿರ ಜನರು ಹೋಗದಂತೆ ಡಂಗರು ಸಾರುವ ಮುಖಾಂತರ ಜಿಲ್ಲಾಡಳಿತ ಜಾಗೃತಿ ಮೂಡಿಸಲಾಗುತ್ತಿದೆ.

ರಾಜ್ಯ ಹವಾಮಾನ ಇಲಾಖೆಯು ವರದಿ ನೀಡಿದ ಬೆನ್ನಲ್ಲೇ, ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಕಟ್ಟು ನಿಟ್ಟಿನ ಕ್ರಮಗಳನ್ನ ಕೈಗೊಳ್ಳಲಾಗುತ್ತಿದೆ. ಹೀಗಾಗಲೆ ಜಿಲ್ಲಾಧಿಕಾರಿ ಸ್ನೇಹಲ್ ಆರ್ ನೇತೃತ್ವದಲ್ಲಿ ಅಧಿಕಾರಿಗಳ ಪೂರ್ವಭಾವಿ ಸಭೆಗಳನ್ನ ನಡೆಸಲಾಗಿದೆ. ಜೂನ್ 24 ರಿಂದ 26 ರವರಿಗೆ ಉತ್ತರ ಕರ್ನಾಟಕದ ಯಾದಗಿರಿ, ರಾಯಚೂರ, ವಿಜಯಪುರದಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಹಾಗೂ ಪ್ರವಾಹ ಭೀತಿ ಉಂಟಾಗುವ ಸಾಧ್ಯತೆ ಇದೆ.

ಅದಲ್ಲದೇ, ನಾರಾಯಣಪುರ ಬಸವಸಾಗರ ಜಲಾಶಯದ ಒಳಹರಿವು ಪ್ರಮಾಣ ಹೆಚ್ಚಾಗಿದ್ದು, ನಾರಾಯಣಪುರ ಜಲಾಶಯದ ಒಳಹರಿವು ಪ್ರಮಾಣ 492.92 ಮೀಟರ್​ ಆಗಿದೆ. ಬಸವಸಾಗರ ಜಲಾಶಯವು ಭರ್ತಿಯಾಗಲು ಕೇವಲ 5.59 ಟಿ ಎಂ ಸಿ ನೀರಿನ ಅವಶ್ಯಕತೆಯಿದೆ. ಹೀಗಾಗಿ ಯಾವುದೆ ಸಂದರ್ಭದಲ್ಲಿಯಾದ್ರೂ ನಾರಾಯಣಪುರ ಬಸವಸಾಗರ ಜಲಾಯಶದಿಂದ ಕೃಷ್ಣಾ ನದಿಗೆ ನೀರುವ ಬಿಡುವ ಸಾಧ್ಯತೆಯಿದೆ. ಹೀಗಾಗಿ ನದಿ ಪಾತ್ರದ ಹತ್ತಿರ ಜನರು ಹೋಗದಂತೆ ಜಿಲ್ಲಾಧಿಕಾರಿ ಸ್ನೇಹಲ್ ಹೈ ಅಲರ್ಟ ಘೋಷಣೆ ಮಾಡಿದ್ದಾರೆ. ಕಾಳಜಿ ಕೇಂದ್ರಗಳು ,‌ಗಂಜ್ ಕೇಂದ್ರಗಳು, ನದಿ ಪಾತ್ರದ ಗ್ರಾಮಗಳನ್ನ ಬೇರೆ ಕಡೆ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ನೇಹಲ್ ಆರ್‌ ಸೂಚನೆಯನ್ನು ನೀಡಿದ್ದಾರೆ.

RELATED ARTICLES

Related Articles

TRENDING ARTICLES