Monday, December 23, 2024

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಭೂಕಂಪನ

ಮಂಗಳೂರು : ಹಾಸನದ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಹಲವೆಡೆ ಭೂಮಿ ಕಂಪಿಸಿದ ಅನುಭವ ಹಲವರಿಗೆ ಆಗಿದೆ ಎಂದು‌ ಸ್ಥಳೀಯ ನಿವಾಸಿಗಳು ಹೇಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಭೂಕಂಪನ ಉಂಟಾಗಿದ್ದು, ಸುಳ್ಯ ತಾಲೂಕಿನ ಮರ್ಕಂಜ , ಕೊಡಪ್ಪಾಲ, ಗೂನಡ್ಕ , ಅರಂತೋಡು ಮೊದಲಾದೆಡೆ ಭೂಮಿ ಕಂಪಿಸಿದ ಅನುಭವ ಉಂಟಾಗಿದೆ. ಬೆಳಗ್ಗೆ 9.10 ರಿಂದ 9.15 ರ ಸಮಯದಲ್ಲಿ ಭೂಕಂಪದಿಂದ ಹೊರಗೋಡಿ ಬಂದ ಜನರು. ನಾಲ್ಕು ದಿನಗಳ ಹಿಂದೆ ಹಾಸನ, ಕೊಡಗಿನಲ್ಲಿ ಭೂಕಂಪನ ಆಗಿತ್ತು . ಹಾಸನದ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಕಂಪನದ ಸದ್ದು ಉಂಟಾಗಿದೆ.

ಅದಲ್ಲದೇ, ಸುಳ್ಯದಲ್ಲಿ ವಿವಿಧೆಡೆ ಭೂಮಿ ಕಂಪಿಸಿದ ಅನುಭವವಾಗಿದೆ, ಎಂದು ಅಲ್ಲಿನ‌ ನಿವಾಸಿಗಳು ತಿಳಿಸಿದ್ದಾರೆ. ಆದರೆ ಆಸ್ತಿ – ಪಾಸ್ತಿ ನಷ್ಟದ ಮಾಹಿತಿ ಇಲ್ಲ. ಸುಳ್ಯ ತಾಲೂಕಿನ ಮರ್ಕಂಜ , ಕೊಡಪ್ಪಾಲ, ಗೂನಡ್ಕ , ಅರಂತೋಡು ಮೊದಲಾದ ಕಡೆಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಬೆಳಗ್ಗೆ 9 ರಿಂದ 9.15 ರ ಆಸುಪಾಸಿನಲ್ಲಿ ಭೂಮಿ ಕಂಪಿಸಿದ ಅನುಭವ ಹಲವರಿಗೆ ಆಗಿದೆ ಎಂದು‌ ಸ್ಥಳೀಯ ನಿವಾಸಿಗಳು ಹೇಳಿದ್ದಾರೆ.

RELATED ARTICLES

Related Articles

TRENDING ARTICLES