ಹಾವೇರಿ: ಕೃಷಿ ಉತ್ಪನ್ನ ಮಾರುಕಟ್ಟೆಗೆ ಶುಕ್ರವಾರ 2,691 ಕ್ವಿಂಟಲ್ ಮೆಣಸಿನಕಾಯಿ ಮಾರಾಟಕ್ಕೆ ತರಲಾಗಿದ್ದು, ಆವಕದಲ್ಲಿ ಮತ್ತೆ ಹೆಚ್ಚಳವಾಗಿದೆ.
ಕಳೆದ ಮಂಗಳವಾರ ಮಾರುಕಟ್ಟೆಗೆ 1,971 ಕ್ವಿಂಟಲ್ ಮೆಣಸಿನಕಾಯಿ ಅವಕವಾಗಿತ್ತು. ತೇವಾಂಶ ಹೆಚ್ಚಿರುವ 25 ಲಾಟ್‌ಗಳಿಗೆ ಟೆಂಡರ್ ನಮೂದಿಸಿಲ್ಲ. ಮಂಗಳವಾರ ಮತ್ತು ಶುಕ್ರವಾರ ಅವಕದಲ್ಲಿ ಹೆಚ್ಚಳ ಕಂಡು ಬರುತ್ತಿದೆ. 5 ಚೀಲ ಡಬ್ಬಿ ಮೆಣಸಿನಕಾಯಿ ಪ್ರತಿ ಕ್ವಿಂಟಲ್‌ಗೆ 40,400 ರಂತೆ ಗರಿಷ್ಠ ಬೆಲೆಯಲ್ಲಿ ಮಾರಾಟವಾಗಿವೆ.
ಶುಕ್ರವಾರದ ದರ ಪ್ರತಿ ಕಿಂಟಲ್‌ಗೆ
ತಳಿ – ಕಡ್ಡಿ ಮೆಣಸಿನಕಾಯಿ
ಕನಿಷ್ಠ = 1,609 , ಗರಿಷ್ಠ = 30,300
ಡಬ್ಬಿ ಮೆಣಸಿನಕಾಯಿ
ಕನಿಷ್ಠ = 2,069 , ಗರಿಷ್ಠ = 40,400
ಗುಂಟೂರು
ಕನಿಷ್ಠ = 729 , ಗರಿಷ್ಠ = 12,509
117,689 ಹಾಗೂ ಗುಂಟೂರು ತಳಿ 4,629 ರಂತೆ ಮಾರಾಟವಾಗಿವೆ.
ಕಡ್ಡಿ, ಡಬ್ಬಿ ಹಾಗೂ ಗುಂಟೂರು ತಳಿ ಮೆಣಸಿನಕಾಯಿ ಬೆಲೆಯಲ್ಲಿ ಸ್ಥಿರತೆ ಒಟ್ಟು ಕಾಯ್ದುಕೊಂಡಿದೆ. ಪ್ರತಿ ಕ್ವಿಂಟಲ್ ಕಡ್ಡಿ ಮೆಣಸಿನಕಾಯಿ 715,809.
ಇಂದಿನ ಟೆಂಡರ್ ಪ್ರಕ್ರಿಯೆಯಲ್ಲಿ 64 ಖರೀದಿ ವರ್ತಕರು ಪಾಲ್ಗೊಂಡಿದ್ದರು ಎಂದು ಎಪಿಎಂಸಿ ಮೂಲಗಳು ತಿಳಿಸಿವೆ.