Friday, November 8, 2024

ಪ್ರಜಾಪ್ರಭುತ್ವ ಕಗ್ಗೊಲೆ ಮಾಡಿರೋದು ಕಾಂಗ್ರೆಸ್: ಬಿಜೆಪಿ ವಕ್ತಾರ ಜೆ.ಸಿ.ರೇಷ್ಮೆ

ಗದಗ : ಪ್ರಜಾಪ್ರಭುತ್ವ ಕಗ್ಗೊಲೆ ಮಾಡಿರೋದು ಕಾಂಗ್ರೆಸ್ ಪಕ್ಷವೇ ಹೊರತು ಬೇರಾವ ಪಕ್ಷ‌ ಅಲ್ಲ ಎಂದು ಬಿಜೆಪಿ ವಕ್ತಾರರಾದ ಜೆ.ಸಿ.ರೇಷ್ಮೆ ಅವರು ಕಿಡಿಕಾಡಿದರು.

ಇಂದು ಪತ್ರಿಕಾ ಭವನದಲ್ಲಿ ಈ ಕುರಿತು ಪತ್ರಿಕಾಗೋಷ್ಟಿ ಏರ್ಪಡಿಸಿ ಮಾತನಾಡಿದ ಅವರು, ಜೂನ 25 1975 ರಂದು ಭಾರತದಲ್ಲಿ ಕರಾಳ‌ದಿನ ಪ್ರಾರಂಭವಾಯಿತು. ಅತ್ಯಂತ ದುರ್ಗಮ ಸ್ಥಿತಿಯನ್ನ ಹೋರಾಟಗಾರರಿಗೆ, ರಾಜಕೀಯ ವ್ಯಕ್ತಿಗಳಿಗೆ ಪರಿಣಮಿಸಿತು. ಅಂದಿನ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರು ತಮ್ಮ ತುಷ್ಟ ರಾಜಕಾರಣತ್ವ ಹಾಗೂ ಸರ್ವಧಿಕಾರತ್ವವೇ ಈ ತುರ್ತು‌ಪರಿಸ್ಥಿತಿಗೆ ಕಾರಣವಾಯಿತು ಎಂದು ಹೇಳಿದರು.

ಅಲ್ಲದೇ ಇಂದಿರಾ ಗಾಂಧಿ ಅವರು ಅಂದಿನ ರಾಷ್ಟ್ರಪತಿಯವರನ್ನೂ ಸಹ ತಮ್ಮ ಕೈಗೊಂಬೆಯಾಗಿ ಮಾಡಿಕೊಂಡಿದ್ದರು, ಸ್ವಾರ್ಥಕ್ಕಾಗಿ ತಮ್ಮ ವಿರೋಧಿಗಳನ್ನ ಬಗ್ಗು ಬಡಿದು ಜೈಲಿಗೆ ಹಾಕಿದರು. ಈ ವೇಳೆಯಲ್ಲಿ ಜನರು ಪಡಬಾರದ ಕಷ್ಟ ಪಡಬೇಕಾಯಿತು.

ಅಷ್ಟೇಅಲ್ಲದೇ ಈ ಸಮಯದಲ್ಲಿ RSS ಕಾರ್ಯಕರ್ತರು ತಮ್ಮ ಜೀವವನ್ನೇ ತ್ಯಾಗ ಮಾಡಬೇಕಾಯಿತು. ಪ್ರಜಾಪ್ರಭುತ್ವವನ್ನ ಉಳಿಸಿಕೊಳ್ಳುವ ಅನಿವಾರ್ಯ ಪರಿಸ್ಥಿತಿ ಬಂದಿತ್ತು. ಗದಗನಿಂದಲೂ ಜನಸಂಘದ ಕಾರ್ಯಕರ್ತರು ಸಹ ತುರ್ತು ಪರಿಸ್ಥಿತಿಯಲ್ಲಿ ಜೈಲು ಸೇರಬೇಕಾಯಿತು. ಹೀಗಾಗಿ ಈ ದಿನವನ್ನು (ಜೂನ್ 25 ) ಕರಾಳ ದಿನಾಚರಣೆ ಎಂದು ನಾವೆಲ್ಲ ಆಚರಿಸುತ್ತಿದ್ದು, ಜನರಿಗೆ ಹಾಗೂ ಇಂದಿನ ಯುವಕರಿಗೆ ಅಂದಿನ ತುರ್ತು ಪರಿಸ್ಥಿತಿಯಿಂದ ಏನೆಲ್ಲ ನಡೆಯಿತು ಅನ್ನೋದನ್ನ ತಿಳಿಸಬೇಕಾಗಿದೆ.

ಈ ವೇಳೆ ಬಿಜೆಪಿ ಮುಖಂಡರಾದ, ಶ್ರೀಪತಿ ಉಡುಪಿ, ಅರವಿಂದ ಹುಲ್ಲೂರ, ವಿನಾಯಕ ಹಬೀಬ ಇದ್ದರು.

RELATED ARTICLES

Related Articles

TRENDING ARTICLES