ಬೆಂಗಳೂರು: ಹೈಕೋಟ್೯ ಆದೇಶಕ್ಕೂ ಕ್ಯಾರೆ ಅನ್ನಿಲ್ಲ. ಚುನಾವಣಾ ಆಯೋಗಕ್ಕೂ ಕಿಮ್ಮತ್ತು ಕೊಟ್ಟಿಲ್ಲ. ಆದ್ರೆ ಕೊನೆಗೂ ಸುಪ್ರೀಂ ಕೋಟ್೯ ಆದೇಶಕ್ಕೆ ತಲೆಬಾಗಿದ ಬಿಬಿಎಂಪಿ ಅಧಿಕಾರಿಗಳು. ಈಗ ತರಾತುರಿಯಲ್ಲಿ ಮಹಾ ಯಡವಟ್ಟುಗಳನ್ನ ಮಾಡಿದ್ದಾರೆ. ಆ ಯಡವಟ್ಟುಗಳು ಕೂಡಾ ಕೇಸರಿಮಯ ಮಾಡಲೆಂದೇ ಮಾಡಿದ್ದಾರೆ ಅನ್ನೋ ಗಂಭೀರ ಆರೋಪ ಕೇಳಿಬರುತ್ತಿದೆ.
ಬಿಬಿಎಂಪಿ ಪುರಪಿತ್ರುಗಳ ಅಧಿಕಾರ ಅವಧಿ ಮುಗಿದು 2 ವರ್ಷಗಳಾಗುತ್ತಾ ಬಂತು. ಇಷ್ಟು ದಿನ ಚುನಾವಣಾ ತಯಾರಿ ನಡೆಸದೆ, ಕಡತ ವಿಲೇವಾರಿಗಳಲ್ಲಿ ಬ್ಯುಸಿ ಇದ್ದ ಬಿಬಿಎಂಪಿ ಅಧಿಕಾರಿಗಳು ಈಗ ತರಾತುರಿಯಲ್ಲಿ ಚುನಾವಣಾ ತಯಾರಿಗೆ ಸಿದ್ಧವಾಗ್ತಿದೆ. ಆದ್ರೆ, ಡಿಲಿಮಿಟೇಷನ್ ಮಾಡಬೇಕಾದ್ರೆ ಚೌಕಾಕಾರದಲ್ಲಿ ಗಡಿಗಳನ್ನ ನಿಗದಿ ಪಡಿಸಬೇಕು. ಅಷ್ಟೇ ಅಲ್ಲದೆ, ಅದರ ಜೊತೆ ವಿಸ್ತೀರ್ಣ ಹಾಗೂ ಜನಸಂಖ್ಯೆ ಆಧಾರವನ್ನೂ ಕೂಡ ಪರಿಗಣಿಸಬೇಕು.
ಇದ್ರ ಜೊತೆಗೆ, ಸಾರ್ವಜನಿಕರ ಅಥವಾ ಸಂಘ ಸಂಸ್ಥೆಗಳ ಅಭಿಪ್ರಾಯದ ಪಡೆಯಬೇಕು. ಆದ್ರೆ, ಬೈರಸಂದ್ರ ವಾಡ್೯ ನಲ್ಲಿ ಇದ್ಯಾವುದನ್ನೂ ಪರಿಗಣಿಸಿಲ್ಲ. ಎಸಿ ರೂಮ್‌ನಲ್ಲಿ ಕೂತು ಅವೈಜ್ಞಾನಿಕ ವಾಗಿ ವಾಡ್೯ ವಿಂಗಡಣೆ ಮಾಡಿದ್ದಾರೆ ಅಂತ ಸ್ಥಳೀಯ ನಿವಾಸಿಗಳು ಆರೋಪಿಸುತ್ತಿದ್ದಾರೆ.
ಸದ್ಯ ವಾಡ್೯ ಮರುವಿಂಗಡಣೆ ಬಗ್ಗೆ ಆಕ್ಷೇಪಣೆ ನೀಡಲು ಇನ್ನು 12 ದಿನ ಬಾಕಿ ಇದೆ. ಇದ್ರಿಂದ ವಾಡ್೯ ನಂಬರ್ 169 ಬೈರಸಂದ್ರ ವಾರ್ಡ್‌ನಲ್ಲಿ ಆಕ್ಷೇಪಣೆ ಕೇಳಿ ಬರುತ್ತಿದೆ. ಸದ್ಯ ವಾಡ್೯ ಡಿಲಿಮಿಟೇಷನ್ ಆದ ಬಳಿಕ ವಾಡ್೯ ಸಂಖ್ಯೆ 196 ಆಗಿದೆ. ಆದ್ರೆ, ಬೈರಸಂದ್ರ ವಾರ್ಡ್‌ನ ಮಧ್ಯಭಾಗದಲ್ಲಿ ಬರುವ ಎಲ್.ಐ.ಸಿ. ಕಾಲೋನಿಯನ್ನ ಎರಡು ವಾರ್ಡ್‌ಗಳಿಗೆ ಹಂಚಿಕೆ ಮಾಡಲಾಗಿದೆ. ಕೇವಲ 80 ಅಡಿಯಷ್ಟು ವಿಸ್ತೀರ್ಣ ಹೊಂದಿರುವ ಭಾಗವನ್ನು ತೆಗೆದು, ಎರಡು ಕಿಲೋ ಮೀಟರ್ ದೂರ ಇರೋ ತಿಲಕ್ ನಗರ ವಾಡ್೯ ಗೆ ಸೇರಿಸಿದ್ದಾರೆ. ಇದು ಸಂಪೂರ್ಣ ಅವೈಜ್ಞಾನಿಕ ವಾಡ್೯ ವಿಂಗಡಣೆ ಮಾಡಬೇಕಾದ್ರೆ, ಪಕ್ಷಾತೀತವಾಗಿ ಮಾಡಬೇಕು. ಆದ್ರೆ ಯಾರದ್ದೋ ಒತ್ತಡಕ್ಕೆ ಮಣಿದು ಕಚೇರಿಯಲ್ಲೇ ಕೂತು ವಿಂಗಡಣೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬರ್ತಿದೆ.
ಇದ್ರಿಂದ ಎಲ್.ಐ.ಸಿ ಕಾಲೋನಿ ನಿವಾಸಿಗಳು ಆಕ್ಷೇಪಣೆ ಸಲ್ಲಿಸುತ್ತಾರೆ. ಅದರ ಜೊತೆಗೆ ನಾವು ಕೂಡಾ ಆಕ್ಷೇಪಣೆ ಸಲ್ಲಿಸ್ತೀವಿ ಅಂತ ಮಾಜಿ ಆಡಳಿತ ಪಕ್ಷದ ನಾಯಕ ಬೈರಸಂದ್ರ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಬಿಎಂಪಿ ವಾರ್ಡ್ ಮರು ವಿಂಗಡಣೆಗೆ ಪ್ರತಿಪಕ್ಷಗಳ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದ್ರೆ, ಅವ್ರ ಹೇಳಿಕೆಗಳು ರಾಜಕೀಯ ಪ್ರೇರಿತ ಅಂತ ಸಿಎಂ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ವಾಡ್೯ ವಿಂಗಡಣೆ ಮಾಡಬೇಕಾದ್ರೆ ಚೌಕಾಕಾರ, ಜನಸಂಖ್ಯೆ, ವಿಸ್ತೀರ್ಣ ಹಾಗೂ ಇತಿಹಾಸ ಮೂಲಕ್ಕೆ ಧಕ್ಕೆಬಾರದಂತೆ ವಿಂಗಡಣೆ ಮಾಡಬೇಕು. ಆದ್ರೆ, ಬೈರಸಂದ್ರ ವಾಡ್೯ ನ ರೀತಿ ಇನ್ಯಾವ್ಯಾವ ವಾಡ್೯ ನಲ್ಲಿ ಅಕ್ರಮ ನಡೆದಿದಿಯೋ ಗೊತ್ತಿಲ್ಲ.. ಆದ್ರೆ, ಅವೈಜ್ಞಾನಿಕ ವಿಂಗಡಣೆ ವಿಚಾರದಲ್ಲಿ ಮತ್ತಷ್ಟು ಆಕ್ಷೇಪಣೆಗಳು ಬರುತ್ತವೋ ಅಂತ ಕಾದು ನೋಡ್ಬೇಕಿದೆ.
ಕ್ಯಾಮರಾ ಮ್ಯಾನ್ ರವಿಕುಮಾರ್ ಜೊತೆ ಮಲ್ಲಾಂಡಹಳ್ಳಿ ಶಶಿಧರ್ ಪವರ್ ಟಿವಿ ಬೆಂಗಳೂರು