Monday, December 23, 2024

ಚಾಮರಾಜನಗರ ನಂದು ಬರ್ಕಳಯ್ಯ ಎಂದ ಶಿವಣ್ಣ

ಚಾಮರಾಜನಗರ : ಬೈರಾಗಿ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮ ಇಂದು ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸಂಜೆ ನಡೆಯಲಿರುವುರಿಂದ ತವರಿಗೆ ಆಗಮಿಸಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಡಾಲಿ ಧನಂಜಯ ಅವರಿಗೆ ನಗರದ ಅಭಿಮಾನಿಗಳು ಭರ್ಜರಿ ಸ್ವಾಗತ ಕೋರಿದರು.

ನಗರದ ಸಂತೇಮರಹಳ್ಳಿ ವೃತ್ತಕ್ಕೆ ಶಿವಣ್ಣ ಬರುತ್ತಿದ್ದಂತೆ ಕ್ರೇನ್ ಸಹಾಯದಿಂದ ಭಾರೀ ಗಾತ್ರದ ಸೇಬಿನ ಹಾರವನ್ನು ಹಾಕಿ ಪುಷ್ಪವೃಷ್ಟಿಯನ್ನೇ ಸುರಿಸಲಾಯಿತು. ಅಲ್ಲದೇ ಇದೇ ವೇಳೆ ಚಾಮರಾಜನಗರ ನಂದು, ಬರ್ಕಳಯ್ಯ ಎಂದು ಜೋಗಪ್ಪನ ಚಿತ್ರದ ಡೈಲಾಗ್ ಹೇಳಿ ರಂಜಿಸಿದ ಶಿವಣ್ಣ ಎರಡು ನಿಮಿಷ ನೃತ್ಯವನ್ನು ಮಾಡಿದರು. ಸೈಲೆನ್ಸ್ ಸೈಲೆನ್ಸ್ ಎಂದು ಅಭಿಮಾನಿಗಳಿಗೆ ಗದರಿ, ಮಾತು ಕೇಳುವಂತೆ ಕೋರಿಕೊಂಡಿದ್ದು ಅಭಿಮಾನಿ ಒಬ್ಬನಂತೆ ಮಿಮಿಕ್ ಮಾಡಿದರು. ಶಿವಣ್ಣಗೆ ಡಾಲಿ ಧನಂಜಯ ಸಾಥ್ ಕೊಟ್ಟರು.

ಶಿವಣ್ಣನ ಹತ್ತಿರ ಹೋಗಲು ನೂರಾರು ಅಭಿಮಾನಿಗಳು ಮುಗಿಬಿದ್ದಿದ್ದರಿಂಸ ಪೊಲೀಸರು ಲಾಠಿ ಬೀಸಿ ಬೆತ್ತದ ರುಚಿ ತೋರಿಸಿದರು. ಸುತ್ತಮುತ್ತಲಿನ ಮನೆಗಳು, ಮಳಿಗೆ ಜನರು ಹತ್ತಿ ನೆಚ್ಚಿನ ನಟನನ್ನು ಕಣ್ತುಂಬಿಕೊಂಡಿದ್ದು ಅಭಿಮಾನ ಪರಾಕಷ್ಟೆ ತೋರಿಸಿತು

RELATED ARTICLES

Related Articles

TRENDING ARTICLES